ಪ್ರಣವ ಪಂಚಾಕ್ಷರಿ | ಪರಶಿವ ಗುರುವನ್ನು |
ಮನದೊಳು ನೆನೆಯಮ್ಮ ತಂಗೀ ||
ಇದು ಘನವೆಂದು | ತಿಳಿ ಮಂಗಳಾಂಗಿ       || ೧ ||

ವೇದಕ್ಕೆ ಮೊದಲಾದ | ಆದಿ ಪಂಚಾಕ್ಷರಿ ||
ಮೋದದಿಂದ ಭಜಿಸಮ್ಮ || ತಂಗೀ || ಇಂಧರಾದಿಯ |
ತಿಳಿ ಮಂಗಳಾಂಗಿ || ಅವಕಾಲದಿ ||
ದೇವ ಗುರುದೇವನ ಪಾದ || ಭಾವದಿಂ ||

ಭಜಿಸಮ್ಮ | ತಂಗಿ || ಇದೂದಿಯ ತಿಳಿ
ಮಂಗಳಾಂಗಿ || ೩ || ಗುರುತಂದೆ || ಗುರುತಾಯಿ || ಗುರು ಬಂಧು ಬಳಗವು ||
ಪರಮಾತ್ಮ ಕಾಣಮ್ಮ | ತಂಗೀ || ಇದು ನಿಜವೆಂದು ತಿಳಿಮಂಗಳಾಂಗಿ || ಧರೆಯ
ತೀರ್ಥಗಳೆಲ್ಲಿ | ಗುರುಪಾದ | ತೀರ್ಥಕ್ಕೆ | ಸಮವಲ್ಲ | ಕೇಳಮ್ಮ ||
ತಂಗೀ | ಇದನರಿದು ಸೇವಿಸು || ಮಂಗಳಾಂಗೀ || ಹಿಂದಿನ ಜನ್ಮದಿ
ಬಂದ ಪುಣ್ಯದರಾಶಿ || ಇಂದಿಗೆ ದೊರಿಕಿತೆ || ತಂಗೀ || ಇದು ನಿಜವೆಂದು ||
ತಿಳಿ ಮಂಗಳಾಂಗಿ || ಕ್ರೂರಗಣಗಳ ಜೈಸುವ ಪುರುಷ | ರುದ್ರಾಕ್ಷಿಯ
ಧರಿಸಮ್ಮ || ತಂಗೀ || ಇದು ಪರಮಾತ್ಮ ನೆಲೆ ನಗರೋರಧಿಕಮಾದಿ |
ಜಗಮೆಲ್ಲಿ ಕೇಳುತೆ ಶೃತಿಮೇಳ ಕೇಳಮ್ಮ || ತಂಗೀ || ಜ್ಞಾನ ಮಂಗಳಾಂಗಿ ||
ಮುದ್ರಿಕೆಯೊಳಿದು
ಇಷ್ಟರಾಗವು ಇಷ್ಟಲಿಂಗವು ನಿನ್ನ ಶ್ರೇಷ್ಠ ಚಿತ್ತ ಕಳೆಯೆಂದು || ಕೊಟ್ಟೆಂದು
ಗುರುನಾಥ | ತಂಗೀ || ಇದಮುಟ್ಟಿ, ಪೂಜಿಸುವ | ಮಂಗಳಾಂಗಿ ||
ಅಂಗ ರಹಿತಗುರು | ಲಿಂಗವೆ | ತಾನಾಥ ಜಂಗಮ | ಮೂರುತಿ ತಂಗೀ ||
ಅಂತರಂಗವ ತಿಳಿ ಮಂಗಳಾಂಗಿ || ಗುರುಕೊಟ್ಟ ಲಿಂಗವ | ಕರಮನ
ಭಾವದೋಳ್ ಇರಿಸಿ || ಪೂಜಿಸು, ತಂಗೀ || ಸರ್ವಜಗದೀಶ ಗುರು ಮಂಗಳಾಂಗಿ ||