ಉದ ಊದ ಅನ್ನುತ ಇದ ನಿನ್ನ ಸೊಲ್ಲ
ವಿಪರೀತದಿಂದ ಭಂಡಾರ ಚಲ್ಲುತ ಪಲ್ಲ
ತಾಯಿ ಮಕ್ಕಳ ಕೂಡಿದರಲ್ಲ
ಕೂಡಿ ಎರಡ ಮಾತಾಡಿದರಲ್ಲ
ಮಂಗಳ ಆರತಿ ಬೆಳಗಿದರಮ್ಮಾ
ಬಲ್ಲವರಿಗೆ ಸಿರಿ ಯಲ್ಲಮ್ಮನಿಗೆ ೧
ಹಣಿಮ್ಯಾಲಿಟ್ಟ ಗಂಧದ ಬಟ್ಟ
ಹುಬ್ಬಿನಲಿ ಇಟ್ಟಳ ಚಂದ್ರದ ಬಟ್ಟ
ಕಿವಿಯಲಿ ವಾಲಿ ಬುಗಡಿಯನಿಟ್ಟು
ಮಂಗಳಾರತಿ ಬೆಳಗಿದರಮ್ಮ ೨
ತಲಿ ಮ್ಯಾಲ ಕೊಡಗೋಳ ಹೊರಿಸಿಯ್ಯಾಳ
ಗಂಡ ಓದ ಹೆಣ್ಣು ಮಾಡ್ಯಾಳಲ್ಲಾ
ಮಂಗಳಾರತಿ ಬೆಳಗಿದರಮ್ಮಾ
ಬಲ್ಲವರು ಸಿರಿಯಲ್ಲಮ್ಮನಿಗೆ ೩
ಕಳಸಕ ಕಾಯಿ ಶಿಖರಕ ಸೀರಿ ಉಡಿಸುವರೆಷ್ಟು
ತುಪ್ಪ ದೀವಿಗಿ ಹಚ್ಚುವರೆಷ್ಟು
ಮಂಗಳಾರತಿ ಬೆಳಗಿದರಮ್ಮ
ಬಲ್ಲವರು ಸಿರಿ ಯಲ್ಲಮ್ಮನಿಗೆ ೪
ಕಾಯಿ ಕಪ್ಪುರ ಮಾಡುವರೆಷ್ಟು
ಪಾಲಕಿಗಿ ಹೂವ ಹಾರಸುವರೆಷ್ಟು
ದೀಡನಮಸ್ಕಾರ ಹಾಕಿದರೆಷ್ಟು
ಮಂಗಳಾರತಿ ಬೆಳಗದಿದರಮ್ಮಾ ೫
ಪರಸಿ ತುಂಬ ಕೂಡ್ಯಾರಲ್ಲಾ
ಪರಸಿಗೊಬ್ಬರು ಇಲ್ಲದರಲ್ಲ
ಹುಬ್ಬಿಗಿ ಕೈ ಹಚ್ಚಿ ನೋಡ್ಯಾಳಲ್ಲ
ಮಂಗಳಾರತಿ ಬೆಳಗಿದರಮ್ಮ ೬
ದೇಶಕ ವಾಸುಳ್ಳ ಸವದತ್ತಿಯಂತ
ದೊಡ್ಡ ಪಟ್ಟಣ ದೇವರಂತ
ಮಂಗಳಾರತಿ ಬೆಳಗಿದರಮ್ಮಾ
ಬಲ್ಲವರು ಸಿರಿ ಯಲ್ಲಮ್ಮನಿಗೆ ೭
Leave A Comment