ಮಂಗಳಾರತಿ ತಂದು ಬೆಳಗಿ || ಮಂ ||
ನಮ್ಮ ಅಂಗ ನಾಯಕ ಜಯತನಿಗೆ ಮೂಲಾವಿ
ಮುಡಿದವಗೆ | ಎಲ್ಲಾ ಮೂಲೆಯೊಳು ತುಂಬಿ
ತುಳುಕವಗೆ | ಕಾಲ ಕರ್ಮದೊಳದಿ | ನೀಲೆಯಿರಿರಲಿ
ನೀವದಪ (ನೀಲೆಯಾನರಿವಾಗೆ) ಇಂಭಾಪಾಳುವಯ
ಜ್ಯೋತಿ ಜ್ವಾಲೆಯಿಂದಾರಿವಾಗಿ || ಮಂ ||

ಕಣ್ಣಲ್ಲಿ ದವನಾಗಿ ಜನಿಸಿ | ಬಹುಕಣ್ಣಾಗಿ ಜಗವನ್ನು
ವರಿಸುವಗೆ | ಮಣ್ಣಿನುಗಿಯ | ಧರಿಸಿ ಬಣ್ಣ
ಅದರೊಳಗಿರಿಸಿ | ಇಂಥ ಸಣ್ಣವನಾಗಿ ಇಪಚನ್ನ
ಚಿನ್ಮಯಗೆ | ಇಂಥ ಬಣ್ಣಗೆಪ್ಪರುವಗೆ || ಮಂ ||

* * *

ಕಾಕಾಡಿ ಹಕ್ಕಿಯ ಹೊಡೆಯಣ್ಣ ಓ ಜೋಳದ
ಹೊಲದಣ್ಣ | ಕಾಕಲಗುಣಗಳಲ್ಲಿ ನಿನಗೆ ಕಾಗೆ
ಹಿಂಡಿನಂತೆ ಬರುಕಾವಣ್ಣ ಓ ಜೋಳದ ಹೊಲದಣ್ಣ
|| ಕಾಕಾ || (ಶಬ್ದ) ಸಪ್ತವರ್ಣದ ಹಕ್ಕ ಹತ್ತಿರಿನು
ದಿಕ್ಕನಿಂದ ಬರುರಾವಣ್ಣ ಓ ಜೋಡೆ ಹೊಲದಣ್ಣ || ಪ ||

ಸೂರ್ಯ ಮಂಡಲಕೆ ಏರಿ ಚಂದ್ರ ಮಂಡಲ
ದೊಳಗೆ ನಿಂದು ತ್ರಿಪುಬಕ್ಕೆ ಗುರಿಯೆ ಹಿಡಿಯಣ್ಣ
ಓ | ಜೋಳದ ಹೊಲವಣ್ಣ || ಪ ||

ಶಿವ ಎಂಬೊ ಕವಣಿಯಾ ಸಂದು ಕರ್ಮ
ಎಂಬುವ ಕಲ್ಲನ್ನೆ ಮರ್ಪಣ್ಣ ಓ ಜೋಳದ ಹೊಲವಣ್ಣ
ನಿಮ್ಮ ಮಮತೆ ಎಂಬುವ ಕವರ್ಣೆಯ
ಹೊಡೆಯಣ್ಣ ಓ ಜೋಳದ ಹೊಲದಣ್ಣ || ಪ ||

* * *

ತಾವು ಜಂಗಮರೆಂದು ಕರೆಯುವ ನಮ್ಮ
ದೇವ ಮಾಡಿದನು ಈ ಪರಿಯ ಗುರುದೇವನು
ಮಾಡಿದನು ಈ ಪರಿಯಾ ಗುರುದೇವನು ಮಾಡಿದನು
ಪರಿಯಾ ಮಹಾದೇವ ಮಾಡಿದನು ಈ ಪರಿಯ || ಪ ||

ಬಸವರ ಸಂಪ್ರದಾಯಿಕರೂ ನಮ್ಮ ಶಶಿಧರನಿಗೆ
ಸಹೋದರರು ಅಸಮಾನವೆಂತಂಬ ತತ್ವ ತಕ್ಕಡಿ-
ಯಲಿ | ಸಮಬಂದ ತಕ್ಕಡಿಯಲಿ ತೂಗುತ್ತಾ
ತಲಿತೇವೋ || ತಾವು ||

ಸಾಧನೆ ನಾಲ್ಕು ಭಚಾರ ಇವನು ಯಾರು ಹೇಳುವರು
ವಿಚಾರ, ಸಾಧ ಸತ್ಪುರುಷರಿಗೆ ಸಮ ಬಂಧವದವೆಯ || ತಾವು ||

ಆದಾಯದಲ್ಲಿ ಲಾಭಗೊಳಿಸಿಕೊಂಡು
ಹೋಗುವಂತೆ ಶಮಧಮೇಯೆಂಬ | ಬಂಡಿಯ
ಚೀಲ ಅಲ್ಲಿ ಸರಕು ತುಂಬಿದೆ ಬಹುಕಾಲ
ಯಾಮಿನಿಂಪಿಂತಂಬ ತತ್ವ ತಕ್ಕಡಿಯಲಿ ಸಮ
ಬಂದ ತಕ್ಕಡಿಯಲಿ ತೂಗುತ್ತಾ ಕಲಿತೇವೊ |
ತೂಕ ನಮ್ಮದು ಕಡಿಯ ಇಲ್ಲಾ ಇದು ಲೋಕಕ್ಕೆ
ಸೇರೋದಲ್ಲ | ಬೇಕಾದರೆ ಕೊಂಡುಕೊಳ್ಳಿ ಜಲಲು
ಜಕ್ಷಿಯಿಲ್ಲ ಆಕಾರ ಓಂಕಾರ ನಿರಂಕಾರ ವಸ್ತುವಾ
ಸತ್ಯದಿ ಮಾತುಗಳಲ್ಲಿ ಆ ಸತ್ಯದಿ ಮಾತುಗಳಿಲ್ಲ
ಚಿತ್ತಾ ಶುದ್ಧವಾಗಿ ಕೂಡಲ ಶೇಷನ ನಿಶ್ಥಂತಾನಿರ್ಭಯ
ಲೋಳು ಹೊಕ್ಕಿ ಪೊರೆವಂತಾ || ತಾವು ||

* * *

ಹತ್ತು ಸಾವಿರ ಕಣ್ಣು ಕತ್ತಿನಲಿ ತಂಬಾಲ ತುತ್ತನೆ
ಹಿಡಿದು ತರುತಿಹುದು ಕಪಿಗಳಿದರಧರವನ್ನು
ಹೇಳಿ ಸರ್ವಜ್ಞಾ (ಮೀನು)

ಕಾಲಲ್ಲಿ ಕೊಂಬುಂಬು ಬಾಲದ ಪಕ್ಷಿಯಿದು
ಮಾಲೆ ಹಾರುವುದು ಹದ್ದಲ್ಲಿ ಕವಿಗಳಲಿ ವಾಲರಿದ
ಕೇಳಿ ಸರ್ವಜ್ಞಾ (ಗಾಳಿಪಟ)

ಬಿಲ್ಲು ಬಿಲ್ಲಿತು ನಾರಿವಿಲ್ಲಂದ ಕಾಡು ಸಣ್ಣವಿಲ್ಲನೆ
ಮರಳಿ ಎರಗಿಸಿತು ನಾರಿಯಂ ಬಲಿದುದು ಯಾರು ಸರ್ವಜ್ಞಾ (ಹೆಣ್ಣು)

ಗಾರ ವಿದ್ಯೆಯೆ | ಲೇಸು ವರಾನವತಿ ಸತಿಲೇಸು
ಸ್ವಾನುಭವಿಗಳ ಸಂಪಿ ಲೇಸು ಎಲ್ಲಕ್ಕೂ ದಾನಿಯೇ ಲೇಸು ಸರ್ವಜ್ಞ

ಊರೆಲ್ಲ ನೆಂಟರು ಕೇರಿಯೆಲ್ಲವೂ ಒಳಗೆ ಥಾರುಣಿಯೆ |
ಎಲ್ಲಾ ಕುಲಧೈವನಾಗಿರಲು ಯಾರನ್ನು ಬಿಡಲಿ ಸರ್ವಜ್ಞ

ತಂದೆ ಕುಂಬಾರ ಮಲ್ಲ ತಾಯಿ ಮಂಗಳಾದೇವಿ ಇಂದ
ಶೇಖರವರ ಪುತ್ರ ಧರಣಿಗೆ ಬಂದು ಜನಿಸಿದೆ ಸರ್ವಜ್ಞ

ಸರ್ವಜ್ಞಾನೆಂಬುವನು ಗರ್ವದಿಂದಾವನೆ ಸರ್ವರೊಳೊಂ-
ದೊಂದು ನುಡಕಲಿತು ವಿದ್ಯದ ಪರ್ವತವೆ | ಆದ ಸರ್ವಜ್ಞಾ

ಬೆಟ್ಟ ಕರ್ಪೂರವೊಂದು ಬೊಟ್ಟಿಡಲು ಬೂದಿ ಇಟ್ಟ
ನೆಟ್ಟನೆ ಗುರುವೆಗರಗಿದವನೆ ಅಜ್ಞಾನ ಸುಟ್ಟ ಹೋಗುವುದು ಸರ್ವಜ್ಞ

ಗುರುಲಿಂಗ ಜಂಗಮವು ಹರನೊಲಿದ ರೂವೆಂದು
ಅರಿದು ನಿಶ್ಚಿಸಿ ನಡೆಯುವ ಭಕ್ತರಿಗೆ ಪರಮ
ಪದವಹುದು ಸರ್ವಜ್ಞ

* * *

ಸುಪ್ರದೀಷ್ಟು ರಾಜನು ಕೂಲೆ ಮುಕ್ತಿಕೊಳ್ಳಿಗೆ
ರುದ್ರಕ್ಷದುಕತಿ ರಾಜಮಿತ ಮತ್ತಿಯದನ್ನು
ರುದ್ರಾಕ್ಷಿ ಭಸಿತನ್ನು ಹೊಂದಿರಲು ದೇಹದೊಳಗಿದ
ಪಾಸಂಗಳು ಬಸರಿಗೆ ಶಿವನು ತಾ ನಿದ್ದಲ್ಲಿ ಬರುವ
ಚದ್ರದಿಪನುಯಲರಿ ಸರ್ವಜ್ಞ

* * *

ಇರಲಿಕ್ಕೆ ಬರಲಿಲ್ಲವಲ್ಲ ಈ ಸಿರಿತನ ದೊರೆತನವೆಲ್ಲ
ಹರಿಹರರಿಗೂ ಉಳಿಕಾಲವಿಲ್ಲ ತನ್ನ ತಿಳಿದೊಡೆ
ಯಮನೊಳಗಿಲ್ಲ | ಅಂಡದೊಳಾಡುವ ಜೀವ
ಬ್ರಹ್ಮಾಂಡದೊಳಾಡುವ ಭಾವ ಕುಂಡಲಿ ಮಧ್ಯದಿ
ಕೋವ ಇವ ಕಂಡಿರುವವನೆ ಗುರುದೇವ
ಈ ಪಂಚ ತತ್ವವೆಂಬ ಕಾಯಿ ಇದು ಕಂಚಿನ
ಬರುಡೆಯ ನೇಹ ಸಂಚಿತವೆಂಬುದು ಪಾಯ
ಅದ ಹಚ್ಚಲಿ ಹುಟ್ಟಿತು ಮಾಯ || ಇರಲಿಕ್ಕೆ ||
ನ್ಯಾಯ ಬಂದಿದ್ದರೆ ಸಾಕು ಅನ್ಯಾಯಗೊಳಾಕಡೆನೂ
ಮಾಯ ಪ್ರಪಂಚದಾಸೆ ಬಿಡಬೇಕು ತನ್ನ
ಆಯಷ್ಯ ತಿಳಿದರೆ ಸಾಕು || ಇರಲಿಕ್ಕೆ ||
ಅಂಗದ ಸಂಗವ ಬಿಟ್ಟು ಗುರು ಲಿಂಗನ ಪಾದವ
ಮುಟ್ಟಿ ಸದ್ಗುರು ರೇಣುಕ ಹೇಳಿದ ಗುಟ್ಟು
ಜ್ಞಾನಾನಂದರು ಮಾಡಿದ ಮಟ್ಟಿ || ಇರಲಿಕ್ಕೆ ||

* * *

ಇನ್ಯಾಕೆ ಚಿಂತಿಸುವೆ | ಇನ್ಯಾಕೆ ಚಿಂತಿಸುವೆ
ಇಹಲೋಕದ ಭೋಗ ನಿನ್ನಾಣೆ ಬಿಡು ಸ್ವಸ್ತ
ಮನುಜ || ಇನ್ಯಾಕೆ ||

ಈ ಕಾಯವು ನನದೆಂದು ಈ ಮಾಯ ಮೋಹಕ್ಕೆ
ಸಿಲುಕಿ ಸಿಕ್ಕಿದ ಯಾವ ತಿಳಿಯೋದೆ ಮನುಜ
|| ಇನ್ಯಾಕೆ || ನನ್ನ ಹೆಂಡತಿಯೆಂದು ಚೆನ್ನಾಗಿ
ನಂಬಿರುವೆ ಇದು ಮಣ್ಣಿನ ಬೊಂಬೆಯೊ ಮನುಜ
ನೀನು ಹಣದ ಆಸೆಯ ನೀನೆ ಹೆಣ ಮಾಡಿತೋ |
ಕೊಲುವುದು ನಿನ್ ಹಣವು ಎಲ್ಲಿ ಹಾದು
ಅನ್ನ ಋಣತೀರಿದರೆ ಬಣ್ಣವು ಕೆಡುವುದು ನಿನ್ನಾಣೆ
ಬಿಡು ಕಂಡೈ ಮನುಜ || ಇನ್ಯಾಕೆ ||

ಪುತ್ರರಾಗುವರೆಂದು ಎತ್ತಿ ಮುದ್ದಾಡುವೆ ಅನು
ಮಾನವಿಲ್ಲವೆ ಮನುಜ ತನಯರಾಗುವರೆಂದು
ತಬ್ಬಿ ಮುದ್ದಾಡುವೆ ನಿನ್ನಾಣೆ ಬಿಡು ಸ್ವಪ್ನ
ಮನುಜ || ಇನ್ಯಾಕೆ ||

ಮೃತ್ಯುವಿನ ಬಾಯಿಗೆ ತುತ್ತಾಗಿಲ್ಲ ಮುನ್ನ ನಿನ್ನ
ಚಿತ್ತಾವ ಶುದ್ಧಿ ಮಾಡಿ ಮನುಜ ಹೊತ್ತು
ಕಳೆಯಲು ಬೇಡ ನಿರ್ತ್ತಾವಲ್ಲದ ಕಾಯ ತತ್ವಾರ್ತವ
ತಿಳಿಯೋ ಮನುಜ || ಇನ್ಯಾಕೆ ||

ಮಿನಾಬಿ ಮಾನವ ಮರೆತು ಹೋಗಲು ಮುನ್ನ
ನಿನ್ನ ಸೌಮ್ಯ ಜ್ಞಾನದೊಳ್ ಇರು ಕಂಡ್ಯ ಮನುಜ
ನಾನು ನೀನೆಂತೆಂಬ ಭೇದ ಭಾವವು ಹೋಗಿ
ರಾಭ್ರಮೆಯ ಕಾರಣದಿಂದ ಭ್ರಮಿನೆ ಬಹು
ಯೂನಿರಪೋನಿ ಬಂದಿ ಈ ಭ್ರಮೆಯು ತೀರಿದ
ಬಳಿಕ ವಿಮಲಾ ಬ್ರಹ್ಮವು ನೀನ ಮನುಜ || ಇನ್ಯಾಕೆ ||
ನೀನು ಬಹು ನೋವ ನೊಂದಯ್ಯೊ ಮನುಜ ||

* * *

ಯಾರು ಬಲ್ಲರಯ್ಯ ಶಿವನೆ ಜ್ಞಾನವೆಂಬುದ
ಜ್ಞಾನಭಕ್ತಿ ಕೊಡು ಗುರುವೆ ದಾರಿದೊಡ್ಡದು
ಬ್ರಹ್ಮದೋತ್ತಮನು ಎಲ್ಲಾ ಬಲ್ಲೆನೆಂದು ದಾರಿತಪ್ಪಿ
ನದಿಗೆ ಹೋಗಿ ಅಲ್ಲಿ ತಪವ ಮಾಡಿದ ಮತ್ತು
ಜಪವ ಮಾಡಿದ ಜಪ ತಪವ ಮಾಡಿದ ಬ್ರಾಹ್ಮಣ
ಸತ್ತನೇತಕೆ ನಾಲ್ವರು ಹೊತ್ತರೇತಕೆ ಮನೆಯವರು
ಹೊತ್ತರೇತಕೆ || ಯಾರು ||

ಮಲ್ಲ ತಾನು ಎಲ್ಲಾ ಬಲ್ಲೆನೆಂದು ಮೂಲೆಗೆ ಹೋಗಿ
ಮುಪ್ಪಾದ ಮೇಲೆ ಮಲ್ಲ ನೀನು ಬಲ್ಲನಯ್ಯ
ನಲ್ಲ ನಾ ನಮ್ಮ ಶಿವನ ಮಹಿಮೆಯ ನಮ್ಮ ಗುರು
ಮಹಿಮೆಯ || ಯಾರು ||

ಅಂಗದೊಳಗೆ ಇದ್ದ ಶಿವನು ಅಂಗ ಬಿಟ್ಟ ಹೋದ
ಮೇಲೆ ಮಂಗನೇನು ಬಲ್ಲನಯ್ಯ ಮಲ್ಲ
ನಾ ನಮ್ಮ ಶಿವನ ಮಹಿಮೆಯ ನಮ್ಮ
ಗುರುವಿನ ಮಹಿಮೆಯ || ಯಾರು ||

ಜಂಗಮ ಉತ್ತಮನು ಬಲ್ಲೆನೆಂದು ಕರಿಯ
ಕಂಬಲಿ ಗದ್ದಿಗೆ ಹೊಡಿ ಗುರು ಪದವ ತೊಳೆದು
ತೀರ್ಥವಿರಿಸಿದ ಗುರುವಿನ ತೀರ್ಥ ಸೇವಿಸಿದ || ಯಾರು ||

* * *

ಜನನ ಮರಣಾದಿಗಳಿಗೆ ದೂರನೆ | ಮಾನ
ಪ್ರಾಣಕೆ ಸಾಕ್ಷಿಯಾಗಿ ಇರುವಾತನೆ ಅನುಪಮ
ಅದ್ವೈತ ತತ್ವ ಪ್ರದೋಪನೆ ಮನದಿ
ಚಿನ್ಮಯ ನಿರುವ | ನೆಲೆಯ ತೋರಿಸೆ
ತನಗೆ ತಾನ್ಯಾರೆಂಬುದನ್ನು ಅರಿವುದ ಶ್ರೀ –
ಮದ್‌ಗುರುವಿಗೆ ಅತಿಶರಣು ಶರಣಾರ್ತಿಗಳು

* * *

ಉಂಜು ಒಂದತೇ ತಂಗಿ ಉಂಜ
ಒದ್ದತ್ತೆ ಅಂಗಳದಲ್ಲಿ ಅಕಾಡಿ ಕುಗುತಾದವು
ತಂಗಿ ಕುಗುತಾದವ ಕೆಂಪು ಕಪ್ಪ ಕರಿಯ ಉಂಜ
ಕಾಣವ ಉಂಜ ಬಹಳದತ್ತೆ ಒಂದು ನೊಡವ
ತೆಂಗಿ ಸಾಕುಮಾಡವ || ಮನಾಮುನಿಗಳ
ಹೆಚರಿಸುವ ಹುಚಕಾಣವ ಈ ಉಂಜ ಒಂತಳ
ಒಳೆದ್ದತ್ತೆ ಒಂದುನೊಡವ ತಂಗಿ ಸಾಕ್ಕಿನೊಡ
ವ ಸರಣಿರಿಗೆಳೆ. ಕರುಣೆ ತೊರುವ ಉಂಜಕಾಣವ
ಈ ಉಂಜ ಒಂತಳ ಒಳೆದ್ದತ್ತೆ ಒಂದುನೊ
ಡವಾ ತಾಂಗಿ ಸಾಕು ನೋಡವ ಅಕಾರ ಉಕಾರ
ಮಾಕಾರ ಮಂತ್ರ ಉಂಜಕಾಣವ ಉಂಜಾ
ಬಹಳ ಒಳೆದತ್ತೆ ಒಂದು ನೋಡವ ಸಾಕುಮಾಡವು
ನಿನುನಾಳ ದಿಸ ಕಾನಿದ ಉಂಜಕಾಣವ
ಈ ಉಂಜ ಬಯಾಳ ಒಳೆಡೈತೆ ಒಂದುನೋಡು
ಸಾಕುಮಾಡುವ