ಕೆಂಪು ಬಣ್ಣದಿಂದ ಪ್ರಜ್ವಲಿಸುವ ಮಂಗಳಗ್ರಹವನ್ನು ರೋಮನ್ನರು ಯುದ್ಧದೇವತೆಯ ಹೆಸರಾದಮಾರ್ಸ್ (Mars) ಎಂದು ಕರೆದರು. ಇದೇ ರೀತಿ ಉಳಿದ ನಾಗರೀಕತೆಯವರೂ ಇದನ್ನು ಯುದ್ಧ ದೇವತೆಯ ಹೆಸರಿನಿಂದಲೇ ಕರೆದರು. ಉದಾಹರಣೆಗೆ ಈಜಿಪ್ಟಿನವರು “ಹರ್ ದೆಶರ್” (Her Desher) ಅಂದರೆ”ಕೆಂಪನೆಯದು” ಎಂದು ಕರೆದರು. ಭಾರತೀಯರಲ್ಲಿ ಇದು ಭೂಮಿಯಪುತ್ರ – ಮಂಗಳ.

ಮಂಗಳ ಕೆಂಪಾಗಿರಲು ಕಾರಣ, ಇದರ ನೆಲವನ್ನು ಆವರಿಸಿರುವ ಕಬ್ಬಿಣದ ಆಕ್ಸೈಡ್‍ನ ಧೂಳು. ತೆಳ್ಳನೆಯವಾತಾವರಣದಲ್ಲಿ ಈ ಧೂಳು ಹರಡಿರುವುದರಿಂದ ಇಡೀ ಗೋಳವೇ ಕೆಂಪಾಗಿ ಕಾಣುತ್ತದೆ.

ಚಿತ್ರ ೧

ಚಿತ್ರ 1ರಲ್ಲಿ ಮಂಗಳದ ಮೇಲಿನ ಹಿಮಾವೃತ ಮೋಡ, ಧ್ರುವೀಯ ಪ್ರದೇಶ ಮತ್ತು ಭೂವೈಜ್ಞಾನಿಕ ಲಕ್ಷಣಗಳನ್ನುಕಾಣಬಹುದು.

ಮಂಗಳವು ತಂಪಾದ ಮರುಭೂಮಿ ಪ್ರದೇಶ. ಮಂಗಳದ ಮೇಲ್ಮೈನ ಮುಖ್ಯಭಾಗ ಕಲ್ಲು ; ಇದರವ್ಯಾಸವು ಭೂಮಿಯ ಅರ್ಧದಷ್ಟಿದೆ. ಭೂಮಿಯಷ್ಟೇ ಒಣ ಪ್ರದೇಶಗಳಿವೆ. ಭೂಮಿಗೆ ಇರುವಂತೆ ಮಂಗಳದಲ್ಲೂ ಋತುಮಾನಗಳು ಉಂಟು. ಇದಕ್ಕೆ ಕಾರಣ ಭೂಮಿಯಂತೆ ಅದರ ಆವರ್ತನ ಅಕ್ಷವು ಸಹ ೨೩ ಡಿಗ್ರಿಗಳಷ್ಟು ಓರೆಯಾಗಿದೆ. ಧ್ರುವೀಯ ಹಿಮ ಟೊಪ್ಪಿ(polar icecaps), ಜ್ವಾಲಾಮುಖಿಗಳು, ದೊಡ್ಡಕೊಳ್ಳಗಳು ಕಾಣುತ್ತವೆ. ಈ ಧ್ರುವೀಯ ಹಿಮ ಟೊಪ್ಪಿ ಋತುಗಳಿಗೆ ತಕ್ಕಂತೆ ವಿಸ್ತರಿಸುವುದು ಮತ್ತು ಕುಗ್ಗುವುದು. ಇಲ್ಲಿಯವಾತಾವರಣ ಪದೇ ಪದೇ ಬದಲಾಗಿರುವುದನ್ನು ಪದರುಗಳಾಗಿ ಕಾಣುವ ಪ್ರದೇಶ ಸೂಚಿಸುತ್ತದೆ. ಇಲ್ಲಿನತಂಪು ತಾಪಮಾನ ಹಾಗೂ ವಾತಾವರಣ  ಬಹಳ ತೆಳ್ಳಗಿರುವುದರಿಂದ ಇದರ ಮೇಲ್ಮೈಮೇಲೆ ದ್ರವರೂಪದಲ್ಲಿನೀರು ಇರಲು ಸಾಧ್ಯವೇ ಇಲ್ಲ.

ಇಲ್ಲಿ 3.5 ಬಿಲಿಯನ್ ವರ್ಷಗಳ ಹಿಂದೆ ಬೃಹತ್ತಾದ ನೆರೆ ಬಂದ ಲಕ್ಷಣಗಳಿದ್ದರೂ, ಈಗ ಹಿಮಾವೃತ ಮಣ್ಣು ಮತ್ತುತೆಳ್ಳನೆಯ ಮೋಡದಲ್ಲಿ ಮಾತ್ರ ನೀರಿರಿರುವಕುರುಹನ್ನು ಕಾಣಬಹುದು. ಹಾಗೂ ಆ ನೆರೆಗೆ ನೀರುಬಂದಿದ್ದಾದರೂ ಎಲ್ಲಿಂದ, ಎಷ್ಟು ದಿನ ಇತ್ತು ಮತ್ತು ಎಲ್ಲಿಗೆ ಹೋಯಿತು ಎಂಬುದು ಯಾರಿಗೂ ತಿಳಿಯದು.ಸುಮಾರು 2002ರಿಂದೀಚೆಗೆ ಕಳುಹಿಸಿದ ನಾಸಾದ ಮಾರ್ಸ್ ಒಡಿಸ್ಸಿ (Mars Odyssey) ನೌಕೆಯ ಮಾಹಿತಿಯ ಪ್ರಕಾರ, ಅಧಿಕ ಜಲಜನಕವಿರುವ ನಿಕ್ಷೇಪಗಳು ಧ್ರುವೀಯ ಪ್ರದೇಶಗಳಲ್ಲಿವೆ. ಹೆಚ್ಚು ಪ್ರಮಾಣದ ಹಿಮಗಡ್ಡೆಯಂತಿರುವ ನೀರು ಇದರ ಮೇಲ್ಮೈಗೆ ಸಮೀಪದಲ್ಲಿದ್ದುದನ್ನು ಸೂಚಿಸುತ್ತದೆ. ಇಡೀ ಮಂಗಳಗ್ರಹಹಿಮಗಡ್ಡೆಯಿಂದ ವ್ಯಾಪಿಸಿದ್ದಿದ್ದರೆ ಈಗ್ರಹದಲ್ಲಿ ಘನೀಭವಿಸಿದ ಅಂತರ್ಜಲ ಇರುತಿತ್ತು. 2004ರಲ್ಲಿ, ಆಪರ್ಚುನಿಟಿ (Opportunity) ಮತ್ತು ಸ್ಪಿರಿಟ್(Spirit) ನೌಕೆಗಳು ಕೆಲವು ನಿರ್ದಿಷ್ಟ ರಾಸಾಯನಿಕ ರಚನೆ ಹಾಗೂಖನಿಜಗಳನ್ನು ಪತ್ತೆಹಚ್ಚಿ, ಈ ನೌಕೆಯ ಇಳಿದಾಣದಲ್ಲಿ ಒಮ್ಮೆ ದ್ರವರೂಪದ ನೀರಿತ್ತೆಂಬುದನ್ನು ಸೂಚಿಸಿದವು.

ಚಿತ್ರ ೨

ಚಿತ್ರ 2 ಮಾರ್ಸ್ ಒಡಿಸ್ಸಿ ರಚಿಸಿ ಕಳಿಸಿದ ನಕ್ಷೆ – ಇದರಲ್ಲಿ ನೀರಿರಬಹುದಾದ ಭಾಗಗಳನ್ನು ನೀಲಿ ಬಣ್ಣದಿಂದಸೂಚಿಸಲಾಗಿದೆ.

ಭೂಮಂಡಲದಲ್ಲಿನ ಇತರ ಗ್ರಹಗಳಾದ ಬುಧ, ಶುಕ್ರ ಮತ್ತು ಭೂಮಿಯಂತೆ, ಮಂಗಳದ ಮೇಲ್ಮೈ, ಜ್ವಾಲಾಮುಖಿಯ ಪ್ರಭಾವ, ಆಘಾತಗಳು, ಚಿಪ್ಪಿನ  ಸ್ಥಳಾಂತರದ ಜೊತೆಗೆ ಧೂಳಿನಿಂದ ಕೂಡಿದ ಬಿರುಗಾಳಿಯಂತಹ ವಾಯುಮಂಡಲದ ಪ್ರಭಾವದಿಂದ ಸಾಕಷ್ಟು ಬದಲಾಗಿದೆ. ಜ್ವಾಲಾಮುಖಿಯ ಪ್ರಭಾವ 3ಬಿಲಿಯನ್ ವರ್ಷಗಳ ಹಿಂದೆ ಸಾಧಾರಣವಾಗಿ ಎತ್ತರಹಾಗೂ ಸಮತಟ್ಟು ಪ್ರದೇಶಗಳಲ್ಲಿ ಮಾತ್ರ ಇದ್ದಿದ್ದರೂ,ಒಂದೆರಡು ಅತಿದೊಡ್ಡ ಜ್ವಾಲಾಮುಖಿಗಳು ಒಂದೆರಡು ಬಿಲಿಯನ್ ವರ್ಷಗಳಿಂದೀಚೆಗೆ ರೂಪಗೊಂಡಿರಬಹುದು.ಸೌರವ್ಯೂಹದಲ್ಲಿ ಅತಿ ದೊಡ್ಡ ಜ್ವಾಲಾಮುಖೀ ಪರ್ವತಗಳಾದ ಒಲಿಂಪಸ್ ಮಾನ್ಸ್ (Olympus Mons) ಮತ್ತು ಅತಿ ಆಳದ ಕಮರಿ ವಾಲ್ಲೆಸ್ ಮಾರಿನೆರಿಸ್ (VallesMarineris) ಮಂಗಳದಲ್ಲೇ ಇರುವುದು.

ಮಂಗಳದ ಪಥ ಸ್ವಲ್ಪ ಅಂಡಾಕಾರ ಅಥವ ದೀರ್ಘವೃತ್ತಾಕಾರವಾಗಿರುವುದರಿಂದ, ಸೂರ್ಯನಿಂದ ಅಂತರದ (ಭೂಮಿಗಿಂತ) ವೈಪರೀತ್ಯಗಳು ಇಲ್ಲಿನ ಋತುಗಳ ಮೇಲೆ ತೀವ್ರವಾಗಿ ಪ್ರಭಾವ ಬೀರುತ್ತವೆ. ಋತುಗಳುನಮ್ಮ ಭೂಮಿಯ ಋತುಗಳಿಗಿಂತ ದೀರ್ಘಕಾಲದವು.

ಮಂಗಳದ ಮೇಲ್ಮೈಯನ್ನು ಭೂಮಿಯಿಂದ ವಿವರವಾಗಿನೋಡಲು ಕಷ್ಚವಾದರೂ, ದೂರದರ್ಶಕದ ಮೂಲಕವೀಕ್ಷಿಸಿದರೆ ಧ್ರುವಗಳಲ್ಲಿ ಋತುವಿನಿಂದ ಬಿಳಿಯ ಟೋಪಿಗಳು ಬದಲಾಗುವುದನ್ನು ಕಾಣುತ್ತೇವೆ. ಮಂಗಳದಲ್ಲಿ ದಟ್ಟ ಪ್ರದೇಶದಲ್ಲಿ ಸಸ್ಯಗಳು ಮತ್ತು ಧ್ರುವೀಯ ಟೊಪ್ಪಿಯಲ್ಲಿ ಜಲದ ಅಂಶವಿದ್ದಿದ್ದರಿಂದ ಜೀವಪ್ರಬೇಧಗಳು ಇದ್ದಿರಬಹುದೆಂದು ಹಿಂದೆ ಹಲವಾರು ದಶಕಗಳವರೆಗೆ ಜನರು ಊಹಿಸಿದ್ದರು. ಮಾರಿನರ್ ನೌಕೆ1965ರಲ್ಲಿ ಮಂಗಳಗ್ರಹದಿಂದ ಕಳಿಸಿದ ಚಿತ್ರಗಳಲ್ಲಿ ನಿರ್ಜೀವ ಕುಳಿಗಳಿಂದ ತುಂಬಿದಮೇಲ್ಮೈ ಕಂಡು ಬಂದದ್ದುಆಶ್ಚರ್ಯ ಉಂಟು ಮಾಡಿತ್ತು. ಮಂಗಳ ಒಂದು ಸತ್ತ ಗ್ರಹದಂತೆ ತೋರಿತು. ನಂತರದ ಆವಿಷ್ಕಾರಗಳು, ಮಂಗಳ ಗ್ರಹವು ನಮ್ಮ ಸೌರವ್ಯೂಹದ ಒಂದು ಸಂಕೀರ್ಣವಾದಸದಸ್ಯನೆಂದು ತೋರಿಸಿಕೊಟ್ಟುಅದರಲ್ಲಡಗಿರುವ ಹಲವಾರು ರಹಸ್ಯಗಳನ್ನು ಕಂಡುಹಿಡಿದು, ಅವುಗಳಲ್ಲಿ ಹಲವಕ್ಕೆ ಪರಿಹಾರ ಒದಗಿಸುವನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಮಂಗಳಕ್ಕೆ ಫೋಬೋಸ್ (Phobos) ಮತ್ತು ಡೈಮೋಸ್ (Deimos) ಎಂಬ  ಎರಡು ಉಪಗ್ರಹಗಳಿವೆ. ಇವುಮಂಗಳದ ಗುರುತ್ವಾಕರ್ಷಣೆಗೆ ಸಿಕ್ಕಿಬಿದ್ದ ಕ್ಷುದ್ರ ಗ್ರಹಗಳು. ಇವುಗಳಲ್ಲಿ ದ್ರವ್ಯರಾಶಿ ಕಡಿಮೆ ಇರುವುದರಿಂದಗೋಳದ ಆಕಾರವಿಲ್ಲದೆ ವಕ್ರವಾಗಿವೆ. ಫೋಬೋಸ್ ನ ಮೇಲ್ಮೈ ಆಳವಾದ ತೋಡುಗಳಿಂದ ಹಾಗೂಕಂದರಗಳಿಂದ ಕೂಡಿದೆ.

ಮಂಗಳಗ್ರಹಕ್ಕೆ ಕಾಂತಕ್ಷೇತ್ರವಿಲ್ಲ. ಆದರೆ ನಾಸಾದ (NASA) ಮಾರ್ಸ್ ಗ್ಲೋಬಲ್ ಸರ್ವೇಯರ್ (Mars Global Surveyor) ನೌಕೆ ಕಂಡುಹಿಡಿದಿರುವ ಪ್ರಕಾರ, ದಕ್ಷಿಣಗೋಳಾರ್ಧದ ಚಿಪ್ಪು ಪ್ರದೇಶಗಳಲ್ಲಿ ಮಾತ್ರಅಧಿಕವಾಗಿ ಕಾಂತ ಕ್ಷೇತ್ರ ಕಂಡು ಬಂದಿದೆ. ಇದು ೪ ಬಿಲಿಯನ್ ವರ್ಷಗಳ ಹಿಂದೆ ಕಾಂತ ಕ್ಷೇತ್ರ ಇದ್ದುದನ್ನುಸೂಚಿಸುತ್ತದೆ.