ಮೋವದ ಅರಗಿಣಿಯೋ

ಮಂಗಳಾರುತಿ ಎತ್ತೀರಿ ಮಾನಿನೀಯರು
ಮಂಗಲ ಮಾದೇವಗೆ || ಪ ||
ಸಡಗರದಲ್ಲಿ ವಸ್ತ್ರ ವಡುವೆ ರವರತ್ನ
ಕರಡ ಕಂಕಣ, ಹರಡಿ ಬಂಗಾರುದ ಬಳಿಯೋ
ಕಾಲಲಿಂದಿಗೆ ಹಾಕಿದ ಜುಂಜುಳಿಯೋ
ಪೂರ್ಣಚಂದ್ರನ ಕಳೆಯೋ
ಮೋವದ ಅರುಗಿಣಿಯೋ
ಹೋಳಿಯೋ ಬಳಿಯೋ ಬಳಿಯೋ
ಅರಿದೀರು ಆರುತಿ ಕರದೊಳ್ ಪಿಡಿದು
ಹೊರಗೆ ಗೌರಿ ಶಂಕರಾಗೆ ಶಿವಗೇ || ಪ ||

ಸೂರ್ಪನ್ನ ಸರಿ ರೈತಿಯರು
ಕೊಮದನಿ ಸ್ತ್ರೀಯರು ಎರಕ ಪುತ್ತಾಳಿ ಕೈಯಲ್ಲಿ
ಕೊರಳಲ್ಲಿ ಸರಿಗೆ ಚಿಂತಾಕನ ಸರವೋ
ನಡುವೆ ಬಿಗಿದುಟ್ಟೆ ಪೈಟಾಣದ ಸಿರಿಯೋ
ಎರಡು ತೋಳುಗಳಿಗೆ ವಂಕಿ ಬಾಪುರಿಯೋ
ಮೂಗಿನತ್ತು ಚಕ್ರದ ಕೊರೆಯೋ
ಉರಲಲ್ಲಿ ಕುಸವೋ ಮಕ ಕರವೋ
ಮೂಗೊತ್ತಿದ್ದ ನವ್ರಲ್ ಗರಿಯೋ
ಹೂ ಬಾಣದ ಗುರಿಯೋ ಜನರಿಗೆ ಸಿರಿಯೋ
ಮುರಿಯೋ ಮೆರೆಯೋ ಬಿಳಿಯೋ || ಪ ||

ತುಪ್ಪದಾರುತಿಯ ಹಿಡಿದು ವ್ರತದಿಂದ ನಿಂತಿಹರು
ವ್ರತನಂ ತಪ್ಪಿ ಸೂರ‍್ಯದ ಮುನಿಯೋ
ಮೊಕದ್ಮೆಲೆ ಡೊಂಗುರಿಯೇ
ಪಣಿಯು ಸಿದ್ಧಿಧ ವಿಭೂತಿಯೇ
ಕೇವಲ ಬುದ್ಧಿಯೋ ಏಳಂಕಣ ಸತಿಯೋ
ನಡಹಂಸ ಗತಿಯೊ ವಾರೀಜನ ಮಡದಿಗೆ
ಆರುತಿಯೋ ರತಿಯೋ ಅತಿ ಕತಿಯೋ
ಅತೀತ ಮತಿಯೋಳ್ ಪ್ರತಿಯಿಲ್ಲ
ಎನುತಲಿ ಸತಿಗೆ ಶಿವಶಂಕಾರಗೆ || ಪ ||