ಅಂಗರೀಕ- ಉಡುಗೆ

ಅಂಗಾಲ ಜಡೆ- ನೀಳವಾದ ಜಡೆ

ಅಜ್ಜನ ಮೂಲೆಗಾಣೆ – ಕುಂತೂರು ಬೆಟ್ಟದ ಒಂದು ಭಾಗ

ಅಟ್ಟೇ – ಪಾದರಕ್ಷೆಗೆ ಬಳಸುವ ಚರ್ಮ

ಅಡಗಲ್ಲು – ಕುಲುಮೆಯಲ್ಲಿ ಕಬ್ಬಿಣವನ್ನು ಬಡಿಯಲು ಬಳಸುವ ಕಬ್ಬಿಣದ ಗಟ್ಟಿ

ಅಪ್ಪೊಪ್ಪರ – ಅಪರೂಪದ

ಅಬ್ಬುಗತಿ – ಹಬ್ಬಾಚರಣೆ

ಆರುಕಂದಬಲಿ – ಒಂದು ಧಾನ್ಯದ ಅಂಬಲಿ

ಅಲಾದಿ – ಪ್ರಾಚೀನ

ಅವುಸಿ – ಬಚ್ಚಿಟ್ಟು

ಅಷ್ಟ ಖಂಡುಗ – ಎಂಟು ಖಂಡುಗ

ಅಸಿಟ್ಟು – ಧಾನ್ಯದ ಹಿಟ್ಟು

ಅಸ್ತಾಂಗ – ಸೂರ್ಯಾಸ್ತ

ಆಗಣೇ – ಆಜ್ಞೆ

ಅರ್ಸಂಡೆ- ಹಾಲು ಕರೆಯುವ ಪಾತ್ರೆ

ಇಂಚುಮರಿ- ಕೈಗಳನ್ನು ಬೆನ್ನು ಹಿಂದಕ್ಕೆ ಬಿಗಿದು ಕಟ್ಟುವ ಬಗೆ

ಇಜ್ಜಲು ಮನೆ – ಇದ್ದಲು ತುಂಬುವ ಮನೆ

ಇರಗಿಂಡಿ – ತೀರ್ಥದ ಪಾತ್ರೆ

ಈಬತ್ತಿ – ವಿಭೂತಿ

ಈಳ್ಯ – ವೀಳ್ಯ

ಉಕ್ಕಿನ ಚಂದ್ರಾಯ – ಉಕ್ಕಿನ ಆಯುಧ

ಉಗನಿ ಹೊಂಬು – ಒಂದು ಬಗೆಯ ಬಳ್ಳಿ

ಉಡುಗಬ್ಬಿಣ – ಪುಡಿಕಬ್ಬಿಣ

ಉಡುಭಂಗಿ – ಹದಗೊಳಿಸಿದ ಭಂಗಿ ಸೊಪ್ಪು

ಉತ್ತುರಾಣಿ – ಒಂದು ಬಗೆಯ ಸಸ್ಯ

ಉನಿಹಾಕು – ನೆನೆಹಾಕು

ಉಬ್ಬೆ ಒಲೆ – ಬಟ್ಟೆ ಬೇಯಿಸುವ ಒಲೆ

ಉರಿಗದ್ದಿಗೆ – ಪವಿತ್ರ ಪೀಠ

ಮರಿವಾರು – ಮರೆತು ಬಿಡುವುದು

ಉರ್ಸಿಂಗೀಕೊರಡು – ತುರಿಕೆ ಉಂಟುಮಾಡುವ ಒಂದು ಬಗೆಯ ಸೊಪ್ಪಿನಿಂದ ಮಾಡಿದ ಚಾವಟಿ

ಉಲುಪೆ – ಕಾಣಿಕೆ

ಋಷಿ ಸಿದ್ದು – ಏಳುಜನ ಸಿದ್ಧರಲ್ಲಿ ಒಬ್ಬ

ಎಕ್ಕತ್ತು – ಕುತ್ತಿಗೆ

ಐರಾಳ ಮೈರಾಳ- ಎರಡು ಬಗೆಯ ಪಂಜು

ಐಲಾಟ – ಹುಚ್ಚಾಟ

ಒಂದು ತಾವರೆ – ಒಂದು ಕಡೆಯಲ್ಲಿ

ಒಂದು ವಾರ್ತಿ – ಒಂದು ಸಲ

ಒಡದೇಳಿ – ಬಿಡಿಸಿಹೇಳಿ

ಒಬ್ಬೆ – ಬೇಲಿ

ಕಂಕಣಾರ್ತಿ – ಕೈಯಿಂದ ಬೆಳಗುವ ಆರತಿ

ಕಂಕಾಲಿ ಯಮದೂತ – ಎರಡು ಮಳೆಗಳ ಹೆಸರು

ಕಂಡಾಪುಂಡಾ – ಜಂಗಮರು – ಪುಂಡ ಜಂಗಮರು

ಕಂಡಾಯ – ಮಂಟೇಸ್ವಾಮಿ ಬಿರುದು

ಕಂಡುಗ – ಧಾನ್ಯದ ಅಳತೆಯ ಪ್ರಮಾಣ

ಕಂತೆ ಬೊಂತೆ – ಜೋಳಿಗೆ ಮತ್ತು ಇತರ ಪರಿಕರಗಳು

ಕಪ್ಪುಧೂಳ್ತ – ಮಹಿಮೆಯ ಭಸ್ಮ

ಕಪ್ಪೆಪಾಯಸ – ನೀರಿನಲ್ಲಿ ಕಟ್ಟಿದ ಪಾಚಿ

ಕರಚಲುವೆ – ಸುಂದರಿ

ಕರಿಗುರಿ – ಕರಿಯ ಕುರಿ

ಕರಿಘಟ್ಟ – ಕಲ್ಲಿನ ಕೋಳಿ ಇರುವ ಸ್ಥಳ

ಕಲ್ಲಿಪಿಲ್ಲಿ ಬಳೆ – ಕಣಜದ ಹುಳದಿಂದ ಮಾಡಿದ ಹುಳ

ಕಳ ತಮಟೆ – ಕಣಿಗುಟ್ಟುವ ತಮಟೆ

ಕಳ್ಳು – ಕರುಳು

ಕಾಕೋಳಿ – ಕಾಡು ಕೋಳಿ

ಕಾಗಡಿ ತೊಟ್ಲು – ಮಗುವನ್ನು ತೂಗುವ ಚಿತ್ತಾರದ ತೊಟ್ಟಿಲು

ಕಾಮಜೇನು – ಹಾಲು ಕರೆಯುವ ಹಸು

ಕಾರೆ ಸಿದ್ದು – ಏಳುಜನ ಸಿದ್ಧರಲ್ಲಿ ಒಬ್ಬ

ಕಾರ್ತಿಕ ಸ್ವಾಮಾರ – ಕಾರ್ತಿಕ ಮಾಸದ ಮೊದಲ ಸೋಮವಾರ

ಕಾಲಗ್ಯಾನ – ಕಾಲಜ್ಞಾನ
ಕಾಳಮುಖಿ – ಒಂದು ತಾಂತ್ರಿಕ ಪಂಥ

ಕಿವುಡ ಮಾರಿ – ಕಿವಿಕೇಳದ ಮಾರಿ

ಕುಂಟು ಮಾರಿ – ಕಾಲಿಲ್ಲದ ಮಾರಿ

ಕುಕ್ಕರ ಕೋಡು – ಕುಕ್ಕೂರು ಬೆಟ್ಟದ ತುದಿ

ಕುಯ್ಮರಿ – ಬಲಿ ಕೊಡುವ ಕುರಿ

ಕುಲುಮೆ ಕಾಳಮ್ಮ – ಪಂಚಾಳರ ವೃತ್ತಿ – ದೇವತೆ

ಕೈಯಣ್ಣೆ – ಹರಳೆಣ್ಣೆ

ಕೊಂಡಿಬಳೆ- ಚೇಳಿನಿಂದ ಮಾಡಿದ ಬಳೆ

ಕೊಡೆಕಲ್ಲು – ಕೊಡೆಕಲ್ಲು ಬಸವಣ್ಣನ ಕ್ಷೇತ್ರ

ಕ್ವಟ್ಟಾಣಿ – ಅಡಿಕೆ ಕುಟ್ಟಿ ಪುಡಿ ಮಾಡುವ ವಿಧಾನ

ಕ್ಯಾಣ – ಸಿಟ್ಟು

ಕ್ವಾರಣ್ಯ – ಭಿಕ್ಷೆ

ಗಂಡುಗಾಳಿ – ಗಂಡು ದೆವ್ವ
ಗಂದಕರು- ಗಂಧ ಮಾರುವವರು

ಗಗ್ಗರ – ಜಣಗುಟ್ಟುವ ಕಡಗ ರೂಪದ ಲೋಹದ ತಾಳ

ಗಲಗು – ಶಬ್ದ

ಗಿರಿಕಿ ಚಡಾವು – ಸದ್ದು ಮಾಡುವ ಚಪ್ಪಲಿ

ಗುಂಡುಗಟ್ಟಿ – ಸಂಗ್ರಹಗೊಂಡು

ಗುಡ್ಡ – ಶಿಶುಮಗ

ಗ್ಯಾನ – ಆಲೋಚನೆ

ಚಂಚಗಾರ – ಮುಂಗಡ ನೀಡುವುದು

ಚಂಡೇಗಾವಿ – ಹೊದ್ದುಕೊಳ್ಳುವ ಕಾವಿ

ಚಂದ್ರಶಾಲೆ -ಮಠದ ಒಂದು ಸ್ಥಳ

ಚಂದ್ರಾಯ – ಚಂದ್ರಾಕಾರದ ಆಯುಧ

ಚಕಮಕಿ – ಬೆಂಕಿಯನ್ನು ಹುಟ್ಟಿಸಲು ಉಜ್ಜುವ ಕಲ್ಲು

ಚಕ್ರುದೊಣ್ಣೆ – ಕಾವುಲುಗಾರನ ದೊಣ್ಣೆ

ಚೆಮ್ಮಾಳಿಗೆ – ಚಪ್ಪಲಿ

ಚವುಳು – ಚೇಳು

ಚಾಕ್ರಿ – ಸೇವೆ

ಚಿಟ್ಟಚ್ಚು ಬೆಲ್ಲ – ಬೆಲ್ಲದ ಅಚ್ಚು

ಚಿಳ್ಳುಗುರು – ಉಗುರು ಮೊನೆ

ಚೆನ್ನಮ್ಮಾಜಿ – ಮಂಟೇಸ್ವಾಮಿಯ ಶಿಷ್ಯೆ

ಚೆನ್ನೇದ – ಮಂಟೇಸ್ವಾಮಿ ಬಿರುದು

ಚೊಟ್ನಿಳ್ಳಿ – ಮಂಟೇಸ್ವಾಮಿಒ ಮಾರುವಳ್ಳಿಗೆ ಕೆಂಪಾಚಾರಿಯನ್ನು ಕೇಳಿ ಪಡೆಯಲು ಬರುವ
ಮಾರ್ಗದಲ್ಲಿ ಸಿಗುವ ಊರು

ಚೊತ್ತು ಮಾರಿ – ಕೈಯಿಲ್ಲದ ಮಾರಿ

ಚೌಳೂರು ಸಿದ್ದು – ಏಳು ಜನ ಸಿದ್ದರಲ್ಲಿ ಒಬ್ಬ

ಜಗ್ಗಣ ಗುಣತ – ಕುಣಿತದ ಮಾದರಿ
ಜಡುದು – ಹೊಡೆದು

ಜರ ಮಾರಿ – ಜ್ವರ ತರುವ ಮಾರಿ

ಜಲುಮ – ಜನ್ಮ

ಜಾಗಿರಿ ಜಮೀನು – ಕೊಡುಗೆ ಜಮೀನು

ಜಾಲ್ನಾಡಿ – ಹಬ್ಬಿಕೊಂಡು

ಜೀವಜಂತಿ – ಜೀವಜಾಲ

ಜೋಗಯ್ಯ – ಆದಿಚುಂಚನಗಿರಿ ಜೋಗಿ ಸಂಪ್ರದಾಯದ ಶಿಶುಮಗ

ಜೋಳಿಗೆ – ಭಿಕ್ಷೆಹಾಕಿಸಿಕೊಳ್ಳುವ ಚೀಲ

ಜ್ಯೋತಮ್ಮ – ದೀಪ

ಡಿಕ್ಕಿ – ಚರ್ಮದ ವಾದ್ಯೆ

ತಂಬೂರಿ – ನೀಲಗಾರ ಸಂಪ್ರದಾಯದವರು ಬಳಸುವ ತಂತಿವಾದ್ಯ

ತನುವು – ತಂಪಾದ

ತಮ್ಡಿ (ತಂಬಡಿ) – ಪೂಜಾರಿ

ತಾನತಾನಕ್ಕೆ- ಜಾಗಜಾಗಕ್ಕೆ

ತಾಮ್ರದ ಚಪ್ಪೋಡು – ತಾಮ್ರ ಶಾಸನ

ತುರುಗಜ್ಜಿ – ತುರಿಕೆ ತರುವ ಚರ್ಮ ರೋಗ

ತುರುಮೆ ಕೆಂಡ – ಧಗಧಗಿಸುವ ಕೆಂಡ

ತೇದಿ ಮಿಟ್ಟ – ಅಂಗೈಲಿ ತಿಕ್ಕಿ ಉಂಡೆ ಮಾಡುವುದು

ತೆಂಕಮಾರಿ – ತೆಂಕಲು ದೇಶದ ಮಾರಮ್ಮ

ತೊಳ್ಳೆ – ಶ್ವಾಸಕೋಶ

ತ್ರಿಷ್ಣ – ಸೃಷ್ಟಿ

ತ್ವಾಟಿಗೆ – ಮಣೆ

ದಂಡುನ ಮಾರಿ – ಸೈನ್ಯದ ಮಾರಿ

ದಂಡ್ಯ – ಸಮೀಪ

ದಕ್ಷಣ ಕಾಂಡ – ದಕ್ಷಿಣ ಭಾಗ

ದಬಕ- ಮಣ್ಣನ್ನು ತೆಗೆಯುವ ಸಾಧನ

ದಾಳ – ಬಾವುಟ

ದಿಕ್ಕುದೇಸ – ಎಲ್ಲಾ ಕಡೆ

ದುಂಡಿಗೆ – ದೇವರಿಗೆ ನಮಸ್ಕರಿಸುವ ವಿಧಾನ

ದುಂಡುಡುಗೆ – ಮಾನ ಮುಚ್ಚಿಕೊಳ್ಳಲೋಸುಗ ಉಡುವ ಅರೆಬರೆ ಉಡುಗೆ

ದುಡುಗ – ಸಿದ್ಧಪಡಿಸು

ದುರುಳಗ್ವಾಣ – ಕೆಟ್ಟ ಆಲೋಚನೆ

ದೇವಮಾನ್ರು – ದೇವ ಮಾನವರು

ದೈಯ್ಯ – ದೆವ್ವ

ದೊರಾಂದೊರೆಗಳು

ರಾಜಮಹಾರಾಜರು

ದೊರೆಸಾನಿಗಿತ್ತೀರು – ಮಹಾರಾಣಿಯರು

ದ್ರೌಭಾಗ್ಯ – ಸೌಭಾಗ್ಯ ಸಿರಿಸಂಪತ್ತು

ದ್ವಾರಣ – ಧೋರಣೆ ( ಅಹಂಕಾರ )

ನರಾಳುಗಳಿಗೆಲ್ಲ – ಮಾನವರಿಗೆಲ್ಲ

ನಲ್ಲರದ ನೆಗು – ಮಾಸದ ನಗು

ನವುಲಗರಿ ತೊಂಡೆ – ನವಿಲುಗರಿಯ ಗುಚ್ಚ

ನಾಗಬೆತ್ತ – ಶ್ರೇಷ್ಠ ಜಾತಿಯ ಬೆತ್ತ

ನಾಗ್ವಾರದ ರೋಗ – ಮಕ್ಕಳಲ್ಲಿ ಕಾಣಿಸಿಕೊಳ್ಳುವ ಒಂದು ರೋಗ

ನಿಚ್ಚ – ನಿತ್ಯ

ನಿಶಾನೆ – ಬಾವುಟ

ನೆನವಿಗೆ – ಮೂರ್ತಿ

ನೆಪ್ಪು – ನೆನಪು

ನೆಲ್ಲೋಟು – ಭತ್ತದ ಹೊಟ್ಟು

ನೊದಲೆ – ಬಾಯಿಯಿಂದ ಸುರಿಯುವ ಜೊಲ್ಲು

ನ್ಯಾಣ – ಮಕ್ಕಳನ್ನು ತೂಗಲು ಬಟ್ಟೆಯಿಂದ ಕಟ್ಟಿದ ತೊಟ್ಟಿಲು

ಪಂಚಪತುರೆ – ಪೂಜೆಗೆ ಬಳಸುವ ಒಂದು ಬಗೆಯ ಸಸ್ಯ

ಪಚ್ಚೆಕಲ್ಲು – ಶ್ರೇಷ್ಠವಾದ ಕಲ್ಲು

ಪಟ್ಟೆಮಂಚ – ಪಟ್ಟದ ಮಂಚ

ಪಳೇಕಾನ ಮಾರಿ -ಪ್ಲೇಗ್ ರೋಗ ತರುವ ಮಾರಿ

ಪಿಡಚುಗೊಳ್ಳಿ – ಸಣ್ಣ ಕೊಡಲಿ

ಪೀಕುದಾನಿ – ತಾಂಬೂಲ ಜಗಿದು ಉಗುಳಲು ಬಳಸುವ ಪಾತ್ರೆ

ಪೀರ – ಮುಸಲ್ಮಾನರು ಪೂಸಿಸುವ ದೇವರು

ಬಕ್ಕಂಡು – ಸೀಳಿಕೊಂಡು

ಬಚ್ಚಲಿಕೆ ದಂಡು – ಬಾಣಗಾರರ ದಂಡು

ಬತಗೆಟ್ಟು – ಜಾತಿಗೆಟ್ಟು

ಬಸಟ್ಟಿ ಸಿದ್ದು – ಏಳು ಜನ ಸಿದ್ದರಲ್ಲಿ ಒಬ್ಬ

ಬಸುವಂಗ – ವಿಭೂತಿ ಪುಡಿ

ಬಾಚಿ ಚಕ್ಕೆ – ಕೆತ್ತಿದ ಮರದ ಚೂರು

ಬಾದಿ – ಬಾಧೆ, ನೋವು

ಬಾಳಾಡಿ – ಬಾಳ್ವೆ ಮಾಡಿ

ಬಿಗುಸಾ- ಭಿಕ್ಷೆ

ಬಿಜು – ಆಗಮಿಸು

ಬಿದ್ದೂ ಕೆಡದು – ಎದ್ದು – ಬಿದ್ದು

ಬಿನಕ – ಬಿಂಕ

ಬುದನಾಳ ಸಿದ್ದು – ಏಳು ಜನ ಸಿದ್ಧರಲ್ಲಿ ಒಬ್ಬ

ಬೆಂಬಳ – ಮಾರ್ಗ

ಬೆಜ್ಜಲಕೆಂಡ – ಬೆಜ್ಜಲ ಮರದ ಕೆಂಡ

ಬೆರಳಿ – ಬೆಳ್ಳಿ

ಬೆರಳೀಚಡಾವು – ಬೆಳ್ಳಿಯ ಪಾದರಕ್ಷೆ

ಬೆರಳೀ ಚವಲ – ಬೆಳ್ಳಿಯ ಚಾಮರ

ಬೋ – ಬಹಳ

ಭಂಗಿಸಿದ್ದ – ಏಳುಜನ ಸಿದ್ಧರಲ್ಲಿ ಒಬ್ಬ

ಭರ್ಗ – ಗಂಡುಹುಲಿ

ಭಿನ್ನಮಾಡು – ಮೀಸಲು ಮಾಡು

ಭಿನ್ಯ ಅಳಿ – ಊಟ ಮಾಡಿ ಮೀಸಲು ಅಳಿಯುವುದು

ಮರದ ತೇವಟಿಗೆ – ಮೂರುಕಾಲಿನ ಊಟ ತಟ್ಟೆ ಇಟ್ಟುಕೊಳ್ಳುವ ಸಾಧನ.

ಮರುಳಿನ ಪಾವಾಡ – ಮುಳ್ಳಿನ ಪವಾಡ

ಮಲಕ – ಬೈಲತಲೆ ನಡುವೆ ಧರಿಸುವ ಆಭರಣ

ಮಾಟ ಕೂಟ – ಮಾಯ ಮಂತ್ರ

ಮಾತುಮರು – ಮಹಾತ್ಮರು

ಮಾಳಲ – ಬಯಲು

ಮೇಲುಗ್ರ – ಕಲೆಸಿದ

ಮೆತುಗಾರ – ತಂತ್ರಗಾರ

ಮೊಲ್ಲಾಗ – ಮೂರ್ಚೆ ರೋಗ

ಮೋರ್ತ – ಮಹೂರ್ತ

ಯತೆ – ಚಿಂತೆ

ಯರಗಣ್ಣ – ಅಂತರಂಗದ ಕಣ್ಣು

ಯಾಸ – ವೇಷ

ರಸಗು – ಕೀವು

ರಾಮೋಕ್ಷ – ಹುಸಿಯಾಗದಿರುವುದು

ರಾವುಗೋಲು – ಕುಲುಮೆಯಲ್ಲಿ ಕಬ್ಬಿಣವು ಹದಕ್ಕೆ ಕಾದಿರುವುದನ್ನು ನೋಡಲು ಬಳಸುವ ಕೋಲು

ರುಸ್ತುಮರು – ಕುಸ್ತಿಪಟುಗಳು

ಲಕುಸ – ಲಕ್ಷ

ಲಕ್ಷಿಕ – ಲಕ್ಷಾಧೀಶ್ವರ

ಲಗಾ – ಕಬ್ಬಿಣದ ಆಯುಧ

ಲಾದ – ನಾದ

ಲೋಬ – ಧೂಪ

ವಂದಿಗೆ – ಜೊತೆಯಲ್ಲಿ

ವಮನ – ಮಂತಿ

ವಾಕುತಾನ – ವಾಗಾನ

ವ್ಯಾಳ್ಯ – ಕಾಲ

ಶಂಕುದಾಳಿ – ಕಂಕುಳಲ್ಲಿ ಕಾಣಿಸಿಕೊಳ್ಳುವ ಗಡ್ಡೆ

ಶೀತಾಳ – ತಂಪುನೀರಿನ ಕೊಳ

ಸಕುತಿ – ಶಕ್ತಿ

ಸಗಟಾಗಿ – ಚೆನ್ನಾಗಿ

ಸಮರಾತ್ರೆ- ಮಧ್ಯರಾತ್ರಿ

ಸಾತೀಸುವಾದ – ಶಾಶ್ವತವಾದ

ಸಾಸುವಿಲ್ಲ – ಸ್ವಲ್ಪವೂ ಇಲ್ಲ

ಸಿಬ್ಬರಿ – ಬೇಸರ

ಸೀತಾಳ ಚಪ್ಪರ – ಮದುವೆ ಚಪ್ಪರ

ಸುರಾಯದ ಗಡಗೆ – ಹೆಂಡದ ಗಡಿಗೆ

ಸೂಲ -ಶೂಲ

ಸೂಲು – ಉಸಿರು

ಹಣ್ಣಣ್ಣು – ವಯಸ್ಸಾದ

ಹರಿವಾಣ – ಊಟಕ್ಕೆ ಬಳಸುವ ಕಂಚಿನ ತಟ್ಟೆ

ಹರಿಸೇವೆ – ವೈಷ್ಣವ ಸಂಪ್ರದಾಯದಲ್ಲಿ ವಿಷ್ಣುವಿಗೆ ಮಾಡುವ ಆರಾಧನೆ

ಹಾಲಗ್ರ – ಹಾಲೋಗರೆ (ಹಾಲು ಅನ್ನ)

ಹಾಸುರೇಸ – ಅಪಹಾಸ್ಯ

ಹಗ್ಗುಲುಮೆ – ದೊಡ್ಡ ಕುಲುಮೆ

ಹೊಂಬಾಳೆ – ಅಡಿಕೆ ಹೂವು, ಹಿಂಗಾರ

ಹೊನ್ನೊಸಲು – ಹೊನ್ನಿನ ಹೊಸ್ತಿಲು