ಗುರುವೇ ಅಲ್ಲೆ ಹೊಯ್ತಾವನೇ
ಇಲ್ಲಿ ನೋಡಿ ದೇವಾ
ಇಲ್ಲಿ ನೋಡಿ ನನ ಗುರುವೇ
ಅಲ್ಲಿ ನೋಡಿ ನನ್ನಪ್ಪಾ
ಹಾಗನುತಾನೆ ಸಂಗೈಯ್ಯ
ಅಯ್ಯಾ ಬಸುವಣ್ಣವರಾ ಕಣ್ಣಿಗೆ ಸ್ವಾಮಿ
ಗೋಚರವೇ ಆಗುನಿಲ್ಲಾ || ಸಿದ್ಧಯ್ಯ ||

ಬಸುವಣ್ಣನವರ ಕಣ್ಣಿಗೆ ಗೋಚರವಿಲ್ಲಾ
ನೀಲಮ್ಮನ ಕಣ್ಣಿಗೆ ಸ್ವಾಮಿ
ಗೋಚರವಾಗುನಿಲ್ಲ ಜಗತ್ತುಗುರು ಧರೆಗೆ ದೊಡ್ಡವರು
ಆಗ ಬಸುವಣ್ಣನವರ ಮಡದಿ ನೀಲಮ್ಮ ಹೇಳುತ್ತಾರೆ
ಸ್ವಾಮಿ,
ಸಂಗಯ್ಯನ ಕಣ್ಣಿಗ ಕಾಣುವಂತ ದೇವರು
ನಮ್ಮಿಬ್ಬರ ಕಣ್ಣಿಗೆ ಗೋಚರವಿಲ್ಲವಲ್ಲಪ್ಪ
ಒಬ್ಬ ತಂದೆಗೆ ನಾವು ಹುಟ್ಟಿ ಗುರುವು
ಒಬ್ಬ ತಾಯಿಗೆ ನಾವು ಬೆಳದು
ಈ ಕಲ್ಯಾಣ ಪಟ್ಟಣಕೆ
ಶಕ್ತುವಂತ ಶರಣು ಮಾತುಮರು ನಾವಾದರೆ
ನಮ್ಮ ಕಣ್ಣಿಗೆ ಗೋಚರವಿಲ್ಲದಂತಹ ಸ್ವಾಮಿ
ನಮಗೆ ಗೋಚರ ಮಾಡಿಕೊಡುತ್ತಾರೆ

ನಿಮ್ಮ ಕತ್ತಿನಲ್ಲಿರೋ ಲಿಂಗವ
ಕಳುದು ಬುಡಿ ಎಂದರಂತೆ || ಸಿದ್ಧಯ್ಯ ||

ಕತ್ತಿನಲ್ಲಿ ಇರುವಂತ ಲಿಂಗವನ್ನು ಸ್ವಾಮಿ
ಕಳೆದು ಭೂಮಿಗೆ ಮಡಗಿ ಸ್ವಾಮಿ ಎಂದುರು
ನೀಲಮ್ಮನ ಮಾತಾ ಕೇಳಿಕಂಡು
ಆಗ ಕಲ್ಯಾಣದ ಬಸುವಣ್ಣನವರು
ಕೊರಳಲ್ಲಿದ್ದ ಲಿಂಗವನ್ನು ತೆಗೆದು
ಭೂಮಿ ಮ್ಯಾಲೆ ಮಡಗಿ ಬುಟ್ಟು
ಆ ಲಿಂಗ ಕೇಳುತವರೇ
ಕೇಳಪ್ಪ ಲಿಂಗುವೇ
ಸತ್ಯ ಪುರುಷರು ನನ ಕಣ್ಣಿಗೆ ಗೋಚರವಿಲ್ಲದೆ
ಹೊರ್ಟೋಹೋಗ್ತಾವರೆ ಕಣಪ್ಪ
ಒಬ್ಬ ತಂದೆಗೆ ನಾವು ಹುಟ್ಟಿ
ಒಬ್ಬ ತಾಯಿಗೆ ನಾವು ಬೆಳೆದು
ಕಲ್ಯಾಣ ಪಟ್ಟಣಕೆ ನಾವು
ಸತ್‌ಪುರುಷ ಬಸವಣ್ಣ ನಾನಾದರೇ
ಪತಿವಂತೆ ಮಡಿದಿ ನೀಲಮ್ಮ ನನ್ನ ಮಡದಿಯಾದರೆ

ಕಾಣದಿದ್ದ ಜಂಗುಮರಾ ನೀ
ತೋರ್ಸಿಕೊಡು ಎಂದರಲ್ಲಾ || ಸಿದ್ಧಯ್ಯ ||

ಲಿಂಗಕ್ಕೆ ಮೂರು ಮಾತಾಡುದ್ರು ಬಸವಣ್ಣ
ಲಿಂಗಕ್ಕೆ ಮೂರು ಮಾತಾಡುದ್ರು ನೀಲಮ್ಮ
ಆಗಾ
ಜಗಂಜ್ಯೋತಿ ತೋರಸಬೇಕು ಅಂತ ಹೇಳಿ
ನೋಡಪ್ಪ ಲಿಂಗ ಬುಡುಬುಡುನೆ ಉಳ್ಳಿಕಂಡು
ಪರಂಜ್ಯೋತಿಯವರು ಹೋಗುವಂತಹ ಮಾರ್ಗದಲಿ ಬರ್ತ್ತಾ ಅದೆ
ಮುಂದು ಮುಂದೇ ಲಿಂಗ ಉಳ್ಳಿಕಂಡು ಬಂದರೇ
ಹಿಂದಿಂದೆ ಬಸಬಣ್ಣ
ಬಸವಣ್ಣನ ಮಡದಿ ನೀಲಮ್ಮ
ಲಿಂಗದ ಹಿಂದುಗಡೆ ಹುಡುಕುತ್ತ ತಡಕುತ್ತಾ

ಅವರು ಕಲ್ಯಾಣದ
ಬೀದಿ ಒಳಗೆ ಬರುತಾರೆ || ಸುವ್ವಾ ಬಾ ||

ಕಲ್ಯಾಣದ ಬೀದಿ ಒಳಗೆ ಬಸವಣ್ಣ ನೀಲಮ್ಮನವರು
ಓಡೋಡಿ ಬರುತಿದುರು
ಆಗಾ ಜಗಂಜ್ಯೋತಿ ಧರೆಗೆ ದೊಡ್ಡಯ್ಯ
ಹಿಂದಕೆ ತಿರುಗಿ ಬಸುವಣ್ಣ ನೀಲಮ್ಮರ ನೋಡಿದುರು
ನೋಡಿದಿಯಾ
ಈ ಬಸವಣ್ಣ ಸತ್ಯುವಂತರು
ಈ ಬಸವಣ್ಣನಲ್ಲಿರ್ತಕಂತಹ
ಕೊರಳಲ್ಲಿರ್ತಾಕಂತಹ ಲಿಂಗಾ
ನನ್ನನೇ ತೋರ್ಸಿ ಬುಡ್ತಾದಲ್ಲಾ
ಈಗಾ ನೀಲಮ್ಮ ಬಸವಣ್ಣ ಬರರ್ತಾಲ್ಲ ಅಂತ ಹೇಳಿ
ಒಳ್ಳೆ ದಾರಿ ಒಳ್ಳೆ ಮಾರ್ಗಾ
ಶುಚಿಯಾಗಿರ್ತಕಂತಹ ದಾರಿ ಮಾರ್ಗಾನೆ ಬಿಟ್ಟು ಬಿಟ್ಟು
ಆ ಪರಂಜ್ಯೋತಿ ದರೆಗೆ ದೊಡ್ಡವರು
ಯಾವ ಮಾರ್ಗದಲಿ ಬರುತವರೆ ಅಂದುರೇ
ಈ ದಾರಿಗಂಟ ಬಂದರೆ
ಈ ಲಿಂಗ ನನ್ನ ತೋರಿಸ ಕೊಡ್ತಾದೆ
ಈ ದಾರಿಗಾಣ ಹೋಗಾಬಾರದ್ದು
ಕೆಟ್ಟ ಮಾರ್ಗದಲ್ಲಿ ಹೋಗಬೇಕು ಅಂತ ಹೇಳಿ
ಅಯ್ಯಾ ಹರಳಯ್ಯನವರ ಬೀದಿ ಒಳಗೆ ಗುರುವು

ನನ್ನ ಪರಂಜ್ಯೋತಿಯವರು ಬರುತಾರೆ || ಸುವ್ವಾ ಬಾ ||

ಅಯ್ಯಾ ಹರಳಯ್ಯನಾ ದೇವಾ
ಮನೆಯ ಬೀದಿಗಾಣೆ ಬರುತಾರೆ
ನನ್ನ ಪರಂಜ್ಯೋತಿ ಪರಬ್ರಹ್ಮ
ಅಯ್ಯಾ ಕೆಟ್ಟ ಮಾರುಗಾದಲ್ಲಿ
ಹೋಗುವಾ ದೇವಾ ಪರಂಜ್ಯೋತಿಯವರ ನೋಡಿ
ಅವರು ಹೋದಾ ಮಾರ್ಗದಲ್ಲಿ
ಲಿಂಗಾ ಬರುತಾದೆ || ಸುವ್ವಾ ಬಾ ||

ಹರಳಯ್ಯನವರಾ ದೇವಾ
ಬೀದಿಗಾಣೆ ಪರಂಜ್ಯೋತಿ ಪರಬ್ರಹ್ಮ ಬರುವಾಗಾ
ಇಂದಿಂದೇ ಲಿಂಗಾ
ಲಿಂಗದ ಹಿಂದುಗಡೆ ಬಸವಣ್ಣ ನೀಲಮ್ಮ
ಓಡೋಡಿ ಬರುವಾಗಾ
ಹರಳಯ್ಯನವರಾ
ಮನೆ ಮುಂಭಾಗದಲಿ ಇರ್ತಕ್ಕಂತಹ ತಿಪ್ಪೆ ಗುಂಡಿ
ಆ ತಿಪ್ಪೆಗುಂಡಿ ಎಂದುರೇ
ಹರಳಯ್ಯನವರು ಅಟ್ಟೆಗುಳವನ್ನೆ ಉನಿ ಹಾಕಿದ್ರಂತೆ
ಏನು ಅಂದರೆ ಚಮ್ಮಳಿಗೆ ಕೊಳಿವಂತ ಅಟ್ಟೆ
ಹರಳಯ್ಯನವರಾ ಗುರುವೇ
ಅಟ್ಟೆ ತೊಳಿಪಂತ ತಿಪ್ಪೆಗುಂಡಿ ಬಳಿಗೆ
ನನ್ನ ಧರೆಗೆ ದೊಡ್ಡವರು ಬರುತಾರೆ || ಸುವ್ವಾ ಬಾ ||

ಜಗತ್ತು ಗುರು ಧರೆಗೆ ದೊಡ್ಡಯ್ಯ
ತಿಪ್ಪೆಗುಂಡಿ ಬಳಿಗೆ ಬರೋದರ ಒಳಗಾಗಿ
ಆಗಾ ಬಸವಣ್ಣ ನೀಲಮ್ಮನವರ ಕಣ್ಣಿಗೆ ಗೋಚರವಾಗಿಬುಟ್ರು
ಅಯ್ಯಾ ಗುರದೇವಾ ಪರಿದೇವರೇ ಬಸವಣ್ಣ
ಹರುಳಯ್ಯನವರು
ಅಟ್ಟೆ ಉನಿಯಾಕುವಂತಹ ತಿಪ್ಪೆಗುಂಡಿ
ಆ ಗುಂಡಿಗೆ ಜಂಗುಮರು ಹೊರಟೋಯ್ತಾವರಲ್ಲಾ
ಅಲ್ಲಿ ಹೋಗತವರೆ ಹೋಗುತವರೇ ನಡ್ರಿಸ್ವಾಮಿ ಅಂತ ಹೇಳಿ
ಪತಿಗೆ ನೀಲಮ್ಮ ಹೇಳುತಾರೆ
ಅಯ್ಯಯ್ಯೋ ಜಂಗುಮರೇ
ನಿಮ್ಮ ಗುರು ಪಾದ ಈಗ ಗೊತ್ತಾಯ್ತು
ಈಗ ಕಂಡುಕಂಡೋ ಅಂತೇಳಿ

ಬಸುವಣ್ಣವರು ಓಡಿ ಓಡಿ ಬರುತಾರೆ
ಅವರು ಬಿಟ್ಟಂತಹ ಲಿಂಗಾ
ಬುಡುಬುಡು ಬುಡಾನೇ ದೇವಾ
ಉಳ್ಳು ಕಂಡು ನನ್ನಪ್ಪ
ಅದು ತಿಪ್ಪೆಗುಂಡಿ ಬಳಿಗೆ ಬರುತಾದೇ || ಸುವ್ವಾ ಬಾ ||

ನನ್ನ ಭಕ್ತಿ ಭಾವದ ಒಡೆಯನಂತೇ
ನನ್ನ ಬಾಲ ಲೋಚನದಯ್ಯನಂತೇ || ಸಿದ್ಧಯ್ಯ ||
ನನ್ನ ಭಕ್ತಿ ಭಾವದ ಒಡೆಯ
ನನ್ನ ಬಾಲ ಲೋಚನದಯ್ಯ
ನನ್ನ ಹೊನ್ನ ಹುತ್ತದ ಒಡೆಯ
ಉರಿಯ ಗದಗೇ ನನ್ನ
ಧರೆಗೇ ದೊಡ್ಡಯ್ಯ
ಗುರುವೇ ಹರಳಯ್ಯನ ಗುಂಡಿಗೇ
ಓಡಿ ಓಡಿ ಬರುವರಲ್ಲ || ಸಿದ್ಧಯ್ಯ ||

ಕುಷ್ಠರೋಗಿ ಅವತಾರದಲ್ಲೀ ಸ್ವಾಮಿ
ಈಗಲೀಗ ಗುರುವೇ ಗುರುದೇವ
ಹರಳಯ್ಯನವರು
ಚಮ್ಮಳಿಗೆ ಹೊಲೀವಂತ
ಅಟ್ಟೇ ಉನಿಯಾಕುವ
ಆಗಲೀಗ ತಿಪ್ಪೇ ಗುಂಡಿಗೇ ಬಂದು
ಎಡ ಬಲ ತಿರುಗಿ ನೋಡುದುರು
ಧರೆಗೇ ದೊಡ್ಡವರ ದಿವ್ಯ ದೃಷ್ಟಿಗೆ
ಅಗಲೀಗ ಬೆನ್ನಿಂದೆ ಲಿಂಗ ಬರುತ್ತಿತ್ತು
ಲಿಂಗದಿಂಬಾಗದಲ್ಲಿ
ಬಸವಣ್ಣ ನೀಲಮ್ಮನವರು ಓಡೋಡಿ ಬರುತ್ತಿದ್ದರು
ಇಂತ ಬಸವಣ್ಣನ ದುಡ ನೋಡಬೇಕು
ನೀಲಮ್ಮನ ಪತುವ್ರತತನ ನಾನು ನೋಡಬೇಕು ಅಂತೇಳಿ

ಹರಳಯ್ಯನಾ ಗುರುವು
ಹನ್ನೆರಡು ವರ್ಷದಿಂದ
ಇದ್ದಂತ ಗುರುವು
ಹಳೆ ನೀರಿಗೆ
ಅವರೆ ಮಾಯದ ರೂಪಿನ ಒಳಗೇ
ಬಂದು ಬಿದ್ದೋದರಂತೇ || ಸಿದ್ಧಯ್ಯ ||

ಗುರುವೇ ಉಳ್ಳಿಕಂಡು ದೇವ
ಬಂದಂತಹ ಗುರುವೋ ಲಿಂಗ ನನ್ನ ಗುರುವೇ
ಅದುವೇ ದೇವ ನೀರಿಗೇ ಬಿದ್ದೋಯ್ತು
ಈ ಹನ್ನೆರಡು ವರ್ಷದಿಂದ
ಇದ್ದಂತಹ ಗುರುವು
ಕಪ್ಪ ಪಾಯ್ಸವ ನೀರಿಗೇ
ಲಿಂಗ ಬಂದು ಬಿದ್ದಾಗ
ಆ ಕೊಳದ ಏರಿಯ ಮ್ಯಾಲೆ ಬಂದು
ಬಸವಣ್ಣ ನಿಂತಗಂಡ್ರು || ಸಿದ್ಧಯ್ಯ ||

ಜಗತ್ತು ಗುರು ಬಂದು
ಹನ್ನೆರಡು ವರ್ಷದ ಕಪ್ಪೇ ಪಾಯ್ಸಕ್ಕೆ ಬಂದು ಬಿದ್ದುರು
ಲಿಂಗೂ ಕೊಡ ಬಿಳ್ತು
ಬಸವಣ್ಣ ನೀಲಮ್ಮನವರು
ಕೆರೇ ಏರಿಮ್ಯಾಲೇ ಬಂದುನಿಂತಗಂಡು
ನೀಲಮ್ಮ
ಈ ಜಗತ್ತು ಗುರುಗಳು
ಅಲ್ಲಿಂದ ಬಂದು ಹರಳಯ್ಯನ
ತಿಪ್ಪೇ ಗುಂಡಿಗೇ ಬಿದ್ದೋಗುಬುಟ್ರಲ್ಲ
ಈ ಲಿಂಗೂ ಕೂಡ ಬಿದ್ದೋಯ್ತು
ಈಗಲೀಗ ಇವರ ವಂದಿಗೇ
ನಾನು ಕೊಡ ಬಿದ್ದು ಬೇಡಬೇಕ ನೀಲಮ್ಮ ಅಂತೇಳಿ
ಅಗಲೀಗ ಮಡದಿ ನೀಲಮ್ಮನ
ಬಸವಣ್ಣ ಕೇಳತ್ತಾವರೇ
ಪತೀ ದೇವರೇ ಬಸವಣ್ಣ
ನಮ್ಮ ಕಲ್ಯಾಣದ
ಗುರುಮಠಕ್ಕೆ ಬಂದಿರತ್ಕಂತ ಜಂಗುಮರು ಅಂದ್ರೆ
ಇವರು ಸಾಮಾನ್ಯವಾದ ಪುರುಷರಲ್ಲ
ನಿಮಗೇ ನಮಗೆಲ್ಲ ಹೆಚ್ಚಿನ ಶಿವಸರಣಮಾತ್ಮರೇ ಆಗಿರಬಹುದು
ಈ ನೀರಿಗೆ ಬಿದ್ದಿರುವಂತ ಸ್ವಾಮಿಗಳ

ಪಾದವನ್ನೇ ಹಿಡಿದು ನೀವು
ಎಳಕೊಳ್ಳಿ ಎಂದರಂತೇ || ಸಿದ್ಧಯ್ಯ ||

ಸ್ವಾಮಿ ಆ ಸ್ವಾಮಿಗಳ ಪಾದ ಹಿಡಿದು ಎಳೀರಿ ಸ್ವಾಮಿ ಆಂದರು
ಆಗ ಮಡದಿಯಾದ ನೀಲಮ್ಮನ
ಮಾತ ಕೇಳಕಂಡು ಬಸವಣ್ಣನವರು
ಧರೆಗೆ ದೊಡ್ಡವರ ಬಲದ ಪಾದ ಹಿಡ್ಕಂಡು ಎಳೆದರಂತೆ

ಪಾದ ಹಿಡದೂ ಏಳೀವಾಗ
ಪಾದವೇ ಕಿತ್ತು ಬಂದೀತಲ್ಲಾ || ಸಿದ್ಧಯ್ಯ ||

ಏನು ಮಡಿದೀ ನೀಲಮ್ಮs
ಇಂತಹ ಜಂಗುಮ ದೇವರ ಪಾದವ ಹಿಡಿದು
ನಾನು ಎಳೀವಾಗ ನೀಲಮ್ಮ
ಈ ಗುರುಗಳ ಪಾದವೇ ಕಿತ್ತು ಬರತದಲ್ಲ ಅಂದ್ರಂತೆ
ಸ್ವಾಮಿ ಭಯ ಪಟ್ಟಗಬೇಡಿ
ನಿಮ್ಮ ಹೆಗಲ ಮೇಲೀರತಕ್ಕಂತ
ಪಟ್ಟೇ ವಸ್ತ್ರಕೊಡಿ
ಎನುತೇಳಿ ಬಸವಣ್ಣನವರ
ಹೆಗಲ ಮ್ಯಾಲಿರತಕ್ಕಂತ ಪಟ್ಟೇ ವಸ್ತ್ರವನ್ನೇ
ತೆಗೆದು ನೀಲಮ್ಮ ಭೂಮಿಗೆ ಹಾಸುಬಿಟ್ಟು
ಸ್ವಾಮಿ ಈ ಪಾದ ತೆಗೆದು ವಸ್ತ್ರದ ಮ್ಯಾಲೆ ಮಡಗಿ ದೇವ
ಇನ್ನೊಂದು ಪಾದ ಹಿಡಿದು
ಎಳಕಳ್ಳೀ ಸ್ವಾಮಿ ಅಂದರು

ಅಯ್ಯ ಮತ್ತೊಂದು ಪಾದವ
ಹಿಡಿದು ನೀಲಮ್ಮ
ಅಯ್ಯಾ ಪಟ್ಟೆ ವಸ್ತ್ರದಲ್ಲಿ ಮಡಗಿ
ಗುರುವೇ ಮತ್ತೊಂದು ಪಾದ
ಹಿಡ್ಕಂಡು ಬಸವಣ್ಣ
ಪುನಃ ಎಳೀವಾಗ

ಅಯ್ಯ ಇದ್ದದೊಂದು ಪಾದ ಗುರುವೆ
ಅದು ಕಿತ್ತು ಬಂದಿತಲ್ಲ || ಸಿದ್ಧಯ್ಯ ||

ಆ ಪಾದ ಕಿತ್ತು ಬಂದ ಕಾಲದಲ್ಲಿ ಗುರುವು
ಅಗಲೀಗ ಅದನ್ನೂ ತಗೆದು
ಪಟ್ಟೇ ವಸ್ತ್ರಕ್ಕೆ ಮಡಗಿಸುದ್ರು ತಾಯಿ ನೀಲಮ್ಮ
ಸ್ವಾಮಿ ಈವಾಗ ಕೈಯಿಡಿದು ಎಳೀರೀ ದೇವ ಅಂದರು
ಕೈಯಿಡಿದು ಎಳೀವಾಗ
ಕೈಯೆ ಕಿತ್ತು ಬಂದಿತಲ್ಲ || ಸಿದ್ಧಯ್ಯ ||

03_79_Mante-KUH

ಕೈಗಳು ಹಿಡಿದು ಎಳುದ್ರೂ ದೇವ ಕೈಗಳೇ ಕಿತ್ತು ಬಂದೋ
ಕಲ್ಯಾಣದ ಬಸವಣ್ಣ
ನೀಲಮ್ಮ
ಎರಡು ಕೈಯೂ ಕಿತ್ತು ಬಂದೋ ಮಡದಿ ಎಂದರು
ಅದನ್ನೇ ತೆಗೆದು ಪಟ್ಟೇ ವಸ್ತ್ರದಲ್ಲಿ ಮಡಗಿ ಸ್ವಾಮಿ ಎಂದರು
ತಲೆ ಹಿಡಿದು ಎಳ್ಕಳೀ ಸ್ವಾಮಿ ಅಂದರು
ಬಸವಣ್ಣನವರು ತಲೆ ಹಿಡಿದು ಎಳಿವಾಗ
ಕತ್ತಿನ ಸಿರುಸವೇ ಆಗಲೀಗ ಕಿತ್ತು ಬಂತು
ಗುರುದೇವ
ಕತ್ತೇ ಕಿತ್ತು ಬಂತು
ಆ ತಲೇ ತಗದು ನನ್ನ ಕೈಲಿ ಕೊಡಿ
ತಲೇ ತಗದು ನೀಲಮ್ಮ ಹಿಡಕಂಡರು
ಅ ಮುಂಡನ್ನೇ ತಕ್ಕಂಡು ಸ್ವಾಮಿ
ಈ ಪಟ್ಟೇ ವಸ್ತ್ರದ ಮ್ಯಾಲೇ ಮಡಗೀ ಅಂತೇಳೀ
ಆ ನೀಲಮ್ಮನವರು
ಮುಂಡನೇ ತೆಗದು ಪಟ್ಟೇ ವಸ್ತ್ರುದ ಮ್ಯಾಲೆ ಮಡಗಿಸಿ

ಪಟ್ಟೇ ವಸ್ತ್ರಾದಲ್ಲೀ
ಬಿಗಿದು ಪೊಟ್ಟಣ ಕಟ್ಟುತಾರೇ || ಸಿದ್ಧಯ್ಯ ||

ಗುರುವೇ ಬಿಗಿದು ಪೊಟ್ಟಣವ
ಕಟ್ಟಿದರು ನನ್ನ ಗುರುವು
ಮಹಾಸರಣಾ ಬಸವಣ್ಣ
ಆ ಪೊಟ್ಟಣವನ್ನೇ ತಗದಾರಂತೇ
ನತ್ತಿಮ್ಯಾಲೇ ಹೊತ್ತೀಕೊಂಡರು || ಸಿದ್ಧಯ್ಯ ||

ಈ ಧರೆಗೆ ದೊಡ್ಡವರ ಮಹಿಮೆ
ಎಷ್ಟು ಕೊಂಡಾಡಲಪ್ಪ || ಸಿದ್ಧಯ್ಯ ||

ಜಗತ್ತು ಗುರುವು ಅಲ್ಲಮಾಪ್ರಭು
ಈಗಲೀಗ ಕಲ್ಯಾಣದ ಬಸವಣ್ಣನವರು
ಆಗಲೀಗ ಪೊಟ್ಟಣ ತಗದು ನತ್ತಿ ಮ್ಯಾಲೆ ಹೊತ್ತಿಕೊಂಡರು
ಮಡದಿಯಾದ ನೀಲಮ್ಮ
ಜಗತ್ತು ಗುರುಗಳ ತಲೆತಗದು ಕೈಲಿಡಕೊಂಡರು
ದೇವ ಈಗ ನಾನು ತಲೆತಕ್ಕಂಡಿದ್ದಿನಿ
ನೀವು ಮುಂಡ ಹೊತ್ತಿದ್ದೀರಿ
ಆದಿಕಲ್ಯಾಣದ ಗುರುಮಠಕ್ಕೆ ಹೋಗುವ ಬನ್ನಿ ಸ್ವಾಮಿ ಅಂತೇಳಿ
ನೋಡಪ್ಪ ಹಿಂದಿಂದೆ ನೀಲಮ್ಮ
ಮುಂದು ಮುಂದೇ ಕಲ್ಯಾಣ ಪಟ್ಟಣದ ಬಸವಣ್ಣನವರು
ಹರಳಯ್ಯನವರ
ಅಟ್ಟೇ ಉನೀಯಾಕುವಂತ ಕೊಳ ಬಿಟ್ಟು

ಕಲ್ಯಾಣ ಪಟ್ಟಣಕೇ
ನನ್ನ ಬಸವಣ್ಣ ಬರುತಾರೇ || ಸಿದ್ಧಯ್ಯ ||

ಆದಿ ಕಲ್ಯಾಣದ ಗುರು ಮಠಕ್ಕೇ ಸ್ವಾಮೀs
ಬಸವಣ್ಣ ನೀಲಮ್ಮ ಬರುವಂತ ಕಾಲದಲ್ಲಿ ಗುರುವು
ಜಗನ್ ಜ್ಯೋತಿಯವರು
ಧರೆಗೆ ದೊಡ್ಡಯ್ಯ
ಈ ಬಸವಣ್ಣನೋರು ಹೊತ್ತುಗಂಡು ಬರುವದು
ಅಗಲೀಗ ರಗುತವೇ ಅಕಾರವಾಗಿ
ಮಾಂಸದ ಪೊಟ್ಟಣ ಮಾಡಿದರಂತೆ
ಅಗಲೀಗ ಎರಡು ಕೆನ್ನೇಗಾಣೂ
ಬಸವಣ್ಣನವರ ತಲೆಯಿಂದ
ಅಗಲೀಗ ಹರಿದು ರಗುತ ಬರತದೆ
ನೀಲಮ್ಮನವರು
ಹಿಡಕಂಡು ಬರುವಂತಹ
ಧರೆಗೇ ದೊಡ್ಡವರ ತಲೆ

ಸುರಾಯದ ಗಡಗೇ ಗುರುವೇ
ಮಾಡಿದರಂತೇ ಮಾಯಿಕಾರ || ಸಿದ್ಧಯ್ಯ ||

ಸುರಾಯದ ಗಡಿಗೆ ಮಾಡಿದ್ರು
ಜಗನ್ ಜ್ಯೋತಿ ಧರೆಗೆ ದೊಡ್ಡಯ್ಯ
ಆದಿ ಕಲ್ಯಾಣದ ಗುರು ಮಠಕ್ಕಾಗಿ
ಬಸವಣ್ಣನವರು ತಾನು ಬರುವಾಗ
ಈ ಕಲ್ಯಾಣದ ಜಂಗುಮರವರಲ್ಲ
ಕೋಟಿಗೊಬ್ಬ ಶರಣ
ಕುಲಕ್ಕೊಬ್ಬ ಭಗುತ
ಆರುವತ್ತಾರು ಮಂದಿ ಜಂಗುಮರು
ಮೂವತ್ತು ಮೂರು ಮಂದಿ ಮನಾದಿಮುನುಗಳು
ಒಂದು ಲಕ್ಕುಸದ ಮ್ಯಾಲೇ
ತೊಂಬತ್ತು ಏಳು ಕೋಟಿ ಸತ್ಯಾ ಶರಣರು
ಅಷ್ಟು ಕೋಟಿ ಶಿವ ಶರಣ ಮಾತ್ಮರೆಲ್ಲ
ಕಲ್ಯಾಣ ಪಟ್ಟಣದಲ್ಲಿ ಊಟ ಮಾಡ್ತಿದ್ದರು
ಅವರು ಊಟ ಮಾಡೋರ ಮುಂದು ಕಾಣಿ
ಈ ಬಸವಣ್ಣನವರು ಪೊಟ್ಟಣ ಹೊತ್ತಕ್ಕಂಡು
ನೀಲಮ್ಮನವರು ಸುರಾಯದ ಗಡಿಗೆ ಹಿಡ್ಕಂಡು ಬಂದ್ಬುಟ್ರು

ಈ ಅನ್ನ ಉಣ್ಣುವ ಶರಣರೆಲ್ಲ
ಬಸವಣ್ಣನ ನೋಡುತಾರೆ || ಸಿದ್ಧಯ್ಯ ||

ಅನ್ನ ಊಟ ಮಾಡುವಂತ ಶರಣರೆಲ್ಲ ದೇವ
ಬಸವಣ್ಣನವರ ಕಣ್ಣಿಂದ ನೋಡಿಬುಟ್ಟು ಗುರುವು
ಎಲ್ಲ ಸರಣರು ಏನು ಯೋಚನೇ ಮಾಡ್ತರೆ ಅಂದ್ರೆ
ಏನ್ರಪ್ಪ ಸತ್ಯ ಶರಣರೇ
ಬಸವಣ್ಣನವರ ನೋಡ್ತ ಅನ್ನ ಊಟಮಾಡ್ತಿದ್ದೀರಲ್ಲ
ನಿಮಗೆ ಅನ್ನ ಸೇರಬಹುದ
ಕಲ್ಯಾಣ ಪಟ್ಟಣ ಬತ್ತಗೆಟ್ಟೋಗುಬುಡ್ತು
ಕಲ್ಯಾಣ ಪಟ್ಟಣ ಕೆಡ್ತು ಕಣರಯ್ಯ
ಈ ಕಲ್ಯಾಣದಲ್ಲಿರತಕ್ಕಂತ ಬಸವಣ್ಣ
ಬಾಳ ಸತ್ಯ ಸರಣಮಾತ್ಮರು ಅಂತೇಳಿ

ಆದಿ ಕಲ್ಯಾಣಕ್ಕೇ
ನಾವೆಲ್ಲ ಬರಲುಬಹುದ || ಸಿದ್ಧಯ್ಯ ||