ನಮ್ಮನ್ನು ಸದಾ ಕ್ರಿಯಾಶೀಲಗೊಳಿಸುತ್ತಾ ಇಂಥ ಮೌಲ್ಯಯುತ ಕಾರ್ಯಗಳನ್ನು ಪ್ರೋತ್ಸಾಹಿಸುತ್ತಿರುವ ನಮ್ಮ ಪ್ರೀತಿಯ ಕುಲಪತಿ ಡಾ. ಚಂದ್ರಶೇಖರ ಕಂಬಾರರಿಗೆ

ಈ ಮಹಾಕಾವ್ಯಗಳ ಬಗ್ಗೆ ಮೊದಲಿನಿಂದಲೂ ತೀವ್ರಾಸಕ್ತಿ ಇಟ್ಟುಕೊಂಡು ಆಗಾಗ ಚರ್ಚಿಸುತ್ತ ಪ್ರೀತಿಯಿಂದ ಸಹಕರಿಸಿದ ಡಾ. ಕೆ.ವಿ. ನಾರಾಯಣ, ಡಾ. ಡಿ.ಆ. ನಾಗರಾಜ್‌, ಪ್ರೊ. ಎಚ್‌.ಎಸ್‌. ಶಿವಪ್ರಕಾಶ್‌, ಡಾ. ಸಿದ್ಧಲಿಂಗಯ್ಯ, ಪ್ರೊ. ಓ.ಎಲ್‌. ನಾಗಭೂಷಣ ಸ್ವಾಮಿ ಇವರಿಗೆ

ಇಂಥ ಯೋಜನೆಗಳ ಮಹತ್ವವನ್ನು ಅರಿತು ಬೇಗ ಬರಬೇಕೆಂದು ಒತ್ತಾಯಿಸಿ ಎಲ್ಲ ರೀತಿಯ ಸಹಕಾರ ನೀಡಿದ ಪ್ರೊ. ಕೀರ್ತಿನಾಥ ಕುರ್ತುಕೋಟಿ, ಡಾ. ಎಸ್‌.ವಿದ್ಯಾಶಂಕರ, ಡಾ. ಕಾಳೇಗೌಡ ನಾಗವಾರ, ಪ್ರೊ. ಬಿ.ಶೇಷಾದ್ರಿ, ಡಾ. ಕರೀಗೌಡ ಬೀಚನಹಳ್ಳಿ, ಶ್ರೀ ಸಿ. ಚಂದ್ರಶೇಖರ್, ಶ್ರೀ ಎಲ್‌. ಸಿದ್ಧನಗೌಡ, ಡಾ. ಕೆ.ಎಂ.ಸುರೇಶ್‌ ಹಾಗೂ ಶ್ರೀ ಬಾಲಸುಬ್ರಹ್ಮಣ್ಯ ಅವರಿಗೆ

ಅಧ್ಯಯನಾಂಗದ ನಿರ್ದೇಶಕರಾದ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್‌ ಇವರಿಗೆ

ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಎ.ವಿ. ನಾವಡ ಹಾಗೂ ಅವರ ಸಹೋದ್ಯೋಗಿಗಳಿಗೆ

ಕಾವ್ಯ ಸಂಗ್ರಹಕ್ಕೆ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ಅ.ರಾ. ಚಂದ್ರಹಾಸ ಗುಪ್ತ, ನಿರ್ದೇಶಕರಾದ ಶ್ರೀ ವೈ.ಕೆ. ಮುದ್ದುಕೃಷ್ಣ, ಸಹ ನಿರ್ದೇಶಕ ಡಾ. ಸಿಂ.ರಾ. ಹೊನ್ನಲಿಂಗಯ್ಯ ಇವರಿಗೆ

ನನ್ನೊಡನೆ ದುಡಿದ ನನ್ನ ವಿಭಾಗದ ಸಹೋದ್ಯೋಗಿ ಮಿತ್ರರಾದ ಡಾ. ಕೆ.ಎಂ. ಮೈತ್ರಿ, ಡಾ. ಕೇಶವನ್‌ ಪ್ರಸಾದ್‌, ಚಲುವರಾಜು, ಗಂಗಾಧರ ದೈವಜ್ಞ, ಎ.ಎಸ್‌. ಪ್ರಭಾಕರ, ಪೂವಯ್ಯ ಹಾಗೂ ನನ್ನ ಪಿಎಚ್‌.ಡಿ ವಿದ್ಯಾರ್ಥಿ ಪಿ. ಸತೀಶ್‌ ಅವರಿಗೆ

ಅಚ್ಚುಕಟ್ಟಾಗಿ ಡಿ.ಟಿ.ಪಿ ಕೆಲಸ ಮಾಡಿಕೊಟ್ಟ ವರ್ಷಿಣಿ ಗ್ರಾಫಿಕ್ಸ್‌ ಮತ್ತು ಮುದ್ರಿಸಿದ ಸ್ನೇಹಾ ಪ್ರಿಂಟರ್ಸ್‌ ಇವರಿಗೆ ಹಾಗೂ

ಕನ್ನಡ ವಿಶ್ವವಿದ್ಯಾಲಯದ ಎಲ್ಲ ಸಹೋದ್ಯೋಗಿ ಗೆಳೆಯರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ಹಿ.ಚಿ. ಬೋರಲಿಂಗಯ್ಯ