ಮುದ್ದಮ್ಮ
ಈಗ ಬಾಳ್ತಕ್ಕಂತ ಬಾಳಾಟ ಅಂದರೇ
ಈಗ ಬದುಕುವಂತ ಸಿರಿಸ್ತಾನ ಅಂದ್ರೆ ತಾಯಿ
ಏಳ್ತಿನೀ ಕೇಳು ತಾಯಿ ಮುದ್ದಮ್ಮ
ಇವತ್ತಿನ ದಿವಸದಲ್ಲಿ ಕಂದಾ

ನಿನಗೇ ಮುತ್ತನಲೀ ಮುಂಭಾಗಲು
ರತುನದಲ್ಲಿ ತೊಲೆಗಂಭ
ಹವಳದಲ್ಲರುಗ್ವಾಡೇ
ಕಂಚೀನಲ್ಲಿ ಧಾರಂಧ
ಅಮ್ಮ ಅಕ್ಕಸ್ತ ಮೊಳೆಗಾಳು
ಅಪರಂಜಿ ಮೊಳೆಗೋಳು
ನಿಮ್ಮ ಕದವಿಗೆ ಹೊಡಿಸಿದರೀ
ಕೇಳವ್ವ ನನ್ನ ಕಂದಾ
ಅಮ್ಮ ನೆಲದ ಮೇಲೆ ತಾಯಿ
ಭೂಮು ತಾಯಿ ಮೇಲೆ
ಪಾದ ತೊಳೀದಾರೆ
ಪಾದಗಳು ಗುರುವು
ಅಂದ ಬರುವದಿಲ್ಲ
ಚಂದ ಬರೂದಿಲ್ಲ
ಆಗಂದು ನನ್ನ ಕಂದಾ
ನೀವು ಪಾದತೊಳೆಯೋದಕ್ಕೆ ತಾಯಿ
ಪಚ್ಚೆ ಕಲ್ಲು ಉಯ್ಸಿದರೀs || ಸಿದ್ಧಯ್ಯ||

ಪಾದವನ್ನೇ ತೊಳೆಯೋದಕ್ಕೆ ಅಮ್ಮ
ಪಚ್ಚೆ ಕಲ್ಲ ಉಯ್ಸಿಕಂಡ್ರೀ ಮುದ್ದಮ್ಮ
ಚಿನ್ನ ಬೆಳ್ಳಿ ಒಳಗೆ ಹಲಗಂಭ ಗೆಯ್ಸಿದ್ರಿ
ತೊಲೆಗಂಧ ಗೆಯ್ಸಿದ್ರಿ
ಚಿನ್ನ ಬೆರಳಿ ಒಳಗೆ ತಾಯಿ
ಗಳ ಗೆಯ್ಸಿದ್ರೀ ಮುದ್ದಮ್ಮ
ಚಿನ್ನ ಬೆರಳೀ ಒಳಗೆ ಆಗಲೀಗ
ಹಂಜರ ಬಿಗಿಸೀದಿರಿ

ಅವ್ವ ತಾಮ್ರದ ಅಂಚ ನಿಮ್ಮ
ಮನೆಮ್ಯಾಲೆ ಕವುಚಿದಿರಿ || ಸಿದ್ಧಯ್ಯ||

ಮುದ್ದಮ್ಮ
ಹಿಂದೆ ಪಟ್ಟಿದ್ದ ಬಡಸ್ತಾನ ಹೇಳದಿ
ಈಗ ನೀವು ಕಟ್ಟಿರುವಂತ ಮನೆಮಠ
ಅದನ್ನೂ ಹೇಳದೀ
ಈಗ ನೀವು ಆಟ ಆಡುವಂತ
ಆಟಪಾಠಗಳು ನಾನೇ ಹೇಳ್ತೀನಿ
ಅದನ್ನೂ ಕೇಳವ್ವ ಮುದ್ದಮ್ಮ
ಮುದ್ದಮ್ಮ
ಈಗ ನೀವೆಷ್ಟ ಆಟ ಪಾಠದಲ್ಲಿ
ಬಾಳಿ ಬದುಕ್ತೀರಿಯೆಂದರೆ

ನೀವು ಉಣ್ಣದು ಸಣ್ಣಕ್ಕಿ ಅನ್ನ
ಕುಡಿಯೋದು ನೊರೆ ಎಮ್ಮೆ ಹಾಲು || ಸಿದ್ಧಯ್ಯ||

ಅವ್ವ ಉಣ್ಣದು ನನ್ನ ಕಂದಾ
ಸಣ್ಣಕ್ಕಿಯ ಅನ್ನ
ಕುಡಿಯೋದು ನನ್ನ ತಾಯಿ ನೊರೆಯೆಮ್ಮೆಯ ಹಾಲು
ನಿಮಗೆ ನಂಜನಗೂಡ ರಸಬಾಳೆ
ನಿಮಗೆ ಕೂಡಗಿನ ಕಿತ್ತಳೆ ಹಣ್ಣು
ಜನ್ನಿಗನ ಯೇಳನೀರು ಕೇಳವ್ವ ನನ್ನ ತಾಯಿ
ರಾಯಪುಡಿ ಸಕ್ಕರೆ ನಿಮ್ಮ ಗಂಟಲಿಗೆ ಇಳಿಲಾರದೇ
ತಾಯಿ ಮುದ್ದಮ್ಮ
ಅವ್ವ ಅಂಗಲಗಂಟ ತಾಯೆ ಬೆಟ್ಟ ಹಾಕಂಡೂ
ತುರುಕುತ ಕೂತಿದರೀ ಕೇಳವ್ವ ನನ್ನ ಕಂದಾ

ನೀವು ಮನುಗುವಂತ ಮಂಚವೆಲ್ಲ
ಚಿನ್ನ ಬೆರಳೀ ಮಂಚವಮ್ಮ || ಸಿದ್ಧಯ್ಯ||

ನೀವು ಮಲಗುವಂತ ಮಂಚ
ಚಿನ್ನ ಬೆರಳೀ ಮಂಚ
ಮಲ್ಗತಿರೀ ನನ್ನ ಕಂದಾ
ಅವ್ವ ಅತೀ ಸುಖದ ಒಳಗೆಸ
ಚಿನ್ನದ ಮೇಲೆ ಪಾದವ ಮಡಿಕಂಡೂಸ
ತಿರುಗಾಡುತ್ತಿರೀ ನೀವು
ಆಟಪಾಠದ ಒಳಗೆದ
ಮಲೆಯಾಳದ ಸೇಬ ಕಡ್ಕಂಡು ತಿಂತೀರಿ
ಕೇಳವ್ವ ನನ್ನ ತಾಯಿ
ಕೇಳವ್ವ ನನ್ನ ಮಗುಳೇ
ಬಾಚಿ ಬಸವಯ್ಯನ ಮಡದಿ
ತಾಯಿ ಮುದ್ದಮ್ಮ
ನೀವು ಮಲಗೋದು ಕಂದಾ
ಚಿನ್ನ ಬೆರಳಿ ಮಂಚವಮ್ಮ || ಸಿದ್ಧಯ್ಯ||

ನೀವು ಹಾಸುವದೂ ಅಪಾರಂಜೀ
ಒದೀವದು ಚಿನ್ನ ಬೆರಳೀ || ಸಿದ್ಧಯ್ಯ||

ನೀವು ಬೀಸ್ಕಳದು ಬೆರಳಿ ಚವಲ
ಅವ್ವ ಮಾಸುವದು ಇಂಬೆ ಹಣ್ಣು || ಸಿದ್ಧಯ್ಯ||

ಚಿನ್ನನೇ ತುಳೀತ್ತೀರಿ
ಬೆಳ್ಳೀನೇ ಒಗೀತೀರಿ ತಾಯೀ
ಈಗಲೀಗ ಮುತ್ತು ರತ್ನ ಬೆಳ್ಳಿ ಬಂಗಾರವೆಲ್ಲ
ನಿಮಗೆ ಕಾಲು ಕಸವಾಗದೆ ಮುದ್ದಮ್ಮ

ಈಗ ಬಾಳು ಬಾಳಾಟದಲ್ಲಿ
ಚಂದಾಗಿ ಬಾಳಾಡುತ್ತೀರಿ || ಸಿದ್ಧಯ್ಯ||

ಅಮ್ಮ ಬಾಳು ಬಾಳಟದಲ್ಲಿ ಕಂದಾ
ಪುಣ್ಯವಂತರಾಗಿ ಲಕ್ಷಿಕರಾಗಿ ಕಂದಾ
ಬಾಳುತ್ತೀರಿ ಮಗುಳೇ
ನೀವು ಬದುಕುತ್ತೀರಿ ನನ್ನ ಕಂದಾ
ಈ ಮಾರುವಳ್ಳಿ ಗ್ರಾಮಕೆ ಕಂದಾ
ನೀವೇ ಪುಣ್ಯವಂತರಲ್ಲ || ಸಿದ್ಧಯ್ಯ||

ಕೇಳವ್ವ ತಾಯಿ ಮುದ್ದಮ್ಮ
ಈ ಮಾರುವಳ್ಳಿ ಗ್ರಾಮಕ್ಕೆ ಸ್ಥಿತಿವಂತರಾಗಿ
ಪುಣ್ಯವಂತರಾಗಿ
ಲಕ್ಷೀಕರಾಗಿ ಬಾಳಿಬದುಕ್ತರಿಯಲ್ಲ ಕಂದಾ
ಹಿಂದೆ ಪಟ್ಟ ಬಡಸ್ತಾನ ಹೇಳಿದಿ
ಈಗ ಬಾಳುವಂತ ಸಿರಸ್ತಾನವೆಲ್ಲಾನು
ಕೊಂಡಾಡ್ಡನಲ್ಲ ಕಂದಾ
ಮುದ್ದಮ್ಮ
ಹಿಂದೆ ಇದ್ದಂತಹ ಬಡಸ್ತಾನನೇ
ಹಾಳು ಮಾಡುಬುಟ್ಟು
ಇಂತಹ ಸಿರಿಸ್ತಾನಜ ಕೊಟ್ಟಂತ ಗುರುಗೊಳೂ
ನಾನು ತಾಯಿ
ನಿನಗೆ ಭಾಗ್ಯವನ್ನು ಕೊಟ್ಟು ಕಂದಾ
ನಿನ್ನ ಬಾಗಲಿಗೆ ಬಂದು ನಿಂತಿವ್ನಿ ಮುದ್ದಮ್ಮ
ಮುದ್ದಮ್ಮ
ನಿನಗೆ ಭಾಗ್ಯಕೊಟ್ಟುಬಿಟ್ಟು
ಬಾಕಲಿಗೆ ಬಂದು ನಿಂತ್ತಿವ್ನಿ ತಾಯಿ
ಹಿಂದು ಪಟ್ಟಪಾಡೇಳಿದೀ
ಈಗ ಬಾಳ್ತಕ್ಕಂತ ಸಿರಿ ಸಂಪತ್ತು
ಎಲ್ಲಾನು ಹೇಳಿದೀ

ಅವ್ವ ಈಗಲಾರು ಕಂದ ನನಗೇ
ದಾನ ಧರ್ಮ ನೀಡು ಮಗಳೇ || ಸಿದ್ಧಯ್ಯ||

ಈಗಲಾರು ಧರ್ಮಧಾನ
ಭಿಗಸ ನೀಡವ್ವ
ಬಾಚಿ ಬಸವಯ್ಯನ ಮಡದಿ ಮುದ್ದಮ್ಮ ಎಂದರು
ಇಂತ ಧರೆಗೆ ದೊಡ್ಡವರ ಮಾತಕೇಳಿ
ಅವಳು ಬಾಳ ಚಿಂತೆ ಪಡುತಾಳೇ || ಸಿದ್ಧಯ್ಯ||

ಗುರುವೆ ಧರೆಗೆ ದೊಡ್ಡವರ
ಮಾತ ಕೇಳ್ಕಂಡು ನನ್ನ ತಾಯಿ
ಬಾಚಿ ಬಸವಯ್ಯನ ಮಡದಿ ತಾಯಿ ಮುದ್ದಮ್ಮ
ಇವರು ಯಾರು ಗೊತ್ತಿಲ್ಲ
ನನ್ನ ಮನೆಗೆ ಬಂದಿರು ಗುರುವು
ಇವರು ಎಲ್ಲಿಯವರು ಕಾಣೆ
ನಾವು ಹಿಂದೆ ಪಟ್ಟ ಬಡುಸ್ತಾನ
ಹೇಳುತ್ತಾರೆ ನನ್ನ ಗುರುವು
ನಾವು ಈಗ ಬಾಳುವ ಸಿರುತಾನ
ಎಲ್ಲಾನು ಹೇಳತ್ತಾರೇಸ
ಇವರು ಯತ್ತಲನಾಡವರೊ ಕಾಣೆ
ಯಾವ ಜಂಗುಮರೊ ಕಾಣೆ || ಸಿದ್ಧಯ್ಯ||

ನಾನು ಹಿಂದೆ ಪಟ್ಟ ಬಡುಸ್ತಾನ
ಈಗ ಬಾಳುವಂತ ಸಿರುಸ್ತಾನ
ಎಲ್ಲಾನು ಕೊಂಡಾಡ್ತವರಲ್ಲ
ಈ ಧಾನಕ್ಕೆ ಬಂದಿರ್ತಕ್ಕಂತ ಸ್ವಾಮಿ ಯಾರಗಿರಬಹುದು
ಈಗಲೀಗ ನಿನಗೆ ಭಾಗ್ಯ ಕೊಟ್ಟುಬಿಟ್ಟು
ನಿನ್ನ ಬಾಕಲ್ಲುಗೆ ಬಂದು ನಿಂತಿವ್ನಿ ಅಂತ ಕೇಳ್ತರೆ
ನಾವು ಹಿಂದೆ ಪಟ್ಟಿದ್ದ ಬಡಸ್ತಾನ
ಎಲ್ಲಾನು ಮಾತಾಡ್ತರೆ
ಈಗ ಬಾಳುವಂತ ಬಾಳಾಟ
ಎಲ್ಲಾನು ಕೊಂಡಾಡುಬುಟ್ರಲ್ಲ
ಅಂತೇಳಿ ಮುದ್ದಮ್ಮ
ಆ ಧರೆಗೆ ದೊಡ್ಡವರ ಮಾತಕೇಳಿ ಬಿಟ್ಟು
ನೋಡಪ್ಪ ಆಗತಾನೇ ಎಳ್ಳಷ್ಟು
ಕನಿಕರಣ ಮುದ್ದಮ್ಮನಿಗೆ ಬರ್ತಂತೆ
ನಮ್ಮ ಬಡಸ್ತಾನ ಸಿರುಸ್ತಾನ
ಎಲ್ಲಾ ಹೇಳು ಸ್ವಾಮಿಗೇ
ಬಾಳ ಭಕ್ತಿ ಬಾಳ ಮರ್ಯಾದೆಯೊಳಗೆ
ಧಾನ ಧರ್ಮ ಕೊಟ್ಟು
ಪಾದಕ್ಕೆ ಸರಣುಮಾಡಿ
ಕೈಯೆತ್ತಿ ಮುಗುದು ಕಳುಗುಬಿಡಬೇಕು
ಅಂತೇಳೀ ಮುದ್ದಮ್ಮ
ಅವಳು ಹಟ್ಟಿ ಅರುಮನುಗೆ
ಓಡಿಓಡಿ ಬರುತಾಳೆ || ಸಿದ್ಧಯ್ಯ||

ಹಟ್ಟಿ ಅರಮನೆಗೆ ಬಂದು ತಾಯಿ
ಸ್ತಾನ ಮಾಡಿ ಮಾಡಿಕ್ಕಂಡೂ
ಮಡಿ ಸೀರೆ ಉಟ್ಟಗಂಡು
ಗೌರಿ ಗದ್ಗೇ ಮೊರ ತಕ್ಕಂಡು
ಮುತ್ತು ರತ್ನ ಬೆರಳೀ ಬಂಗಾರ
ಬೆತ್ತದ ಮೊರದ ತುಂಬ ತುಂಬಕೊಂಡು
ಮುದ್ದಮ್ಮ
ಹತ್ತಲೈದು ಅಡಕೆ ಮಡಗಿ
ಚಿಕ್ಕುದೊಂದು ಪಾವಲಿ ಕೂಡ ಮಡಗಿ
ಬೆಜ್ಜಲ ಕೆಂಡ ತುಂಬ್ಕಂಡು
ಕೆಂಡದಮ್ಯಾಲೆ ಮಡ್ಡಿ ದೂಪ ಕೂಡ ಸುಟ್ಟಗಂಡು
ದೂಪ ಸಾಂಬ್ರಾಣಿ ಸಹಿತವಾಗಿ ಮುದ್ದಮ್ಮ
ಬಾಳ ಭಕ್ತಿ ಬಾಳ ಮರ್ಯಾದೆಯೊಳಗೆ ತಾಯಿ

ನನ್ನ ಧರೆಗೇ ದೊಡ್ಡವರಿಗೇ
ಧಾನ ಧರ್ಮ ತರುವುತಾಳೆ || ಸಿದ್ಧಯ್ಯ||

ನನ್ನ ಮಂಟೇದ ಲಿಂಗಯ್ಯನಿಗೆ
ಮೊದಲನೇ ಭಿಕ್ಷ ತರುವುತಾಳೆ || ಸಿದ್ಧಯ್ಯ||

ಗುರುವೇ ದಾನ ಧರ್ಮ ಗುರುವು
ತರುವಂತ ಮುದ್ದಮ್ಮನ
ಗುರುವೆ ಕಣ್ಣಾರೆ ನೋಡಿಕಂಡು
ಅಲ್ಲಮ ಪ್ರಭು ಮಂಟೇದ ಲಿಂಗಪ್ಪ
ಅವರು ದಾನತಂದ ಮುದ್ದಮ್ಮನ ದೇವ
ಮಟಾಮಟನೇ ನೋಡುತ್ತಾರೆ || ಸಿದ್ಧಯ್ಯ||

ದಾನ ಧರ್ಮ ಭಿಗಸ
ತರುವಂತ ಮುದ್ದಮ್ಮನ ಕಣ್ಣಿಂದ ನೋಡಿ
ಅಲ್ಲಮಪ್ರಭು ಕಂಡಾಯ್ದ ಜ್ಯೋತಿ
ಧರೆಗೆ ದೊಡ್ಡವರು
ಅವರ ತೊಟ್ಟಿಕಲ್ಲಮ್ಯಾಲೆ ನಿಂತವರೆ
ಮುದ್ದಮ ಬಾಳ ಭಕ್ತಿವೊಳಗೆ ಭಿಗಸ ತಕ್ಕಂಡ್ಬಂದು
ಧರೆಗೆ ದೊಡ್ಡವರ
ಮುಂಭಾಗದಲ್ಲಿ ನಿಂತವರೆ
ನಿಂತಿರುವಂತ
ಮುದ್ದಮ್ಮನ ಮೂಕಾ ಧರೆಗೆ ದೊಡ್ಡವರು
ಕಣ್ಣಾರ ನೋಡುಬುಟ್ಟು
ಮುದ್ದಮ್ಮ
ಧಾನ ಧರ್ಮ
ಭಿಗಸ ತಕ್ಕಂಡು ಬಂದಿಯವ್ವ
ಮುದ್ದಮ್ಮ
ಕ್ವಾರಣ್ಯ ತಂದಿದ್ದಿಯಾ ಕಂದ
ಹೇಳುತೀನಿ ಮಗಳೆ ಕೇಳು ಮುದ್ದಮ್ಮ
ಇದು ಯಾರು ಕೊಟ್ಟ ಚಿನ್ನ
ಯಾರು ಕೊಟ್ಟ ಬೆರಳಿ
ಯಾರು ಕೊಟ್ಟ ಅಕ್ಕಿ ಬ್ಯಾಳೆ
ಯಾರು ಕೊಟ್ಟು ಹಣಕಾಸು ತಂದಿದ್ದೀಯಾ

ಇದು ನಾನು ಕೊಟ್ಟ ಚಿನ್ನ
ನಾನು ಕೊಟ್ಟ ಬೆರಳಿ
ನಾನು ಕೊಟ್ಟ ಅಕ್ಕಿ ಬ್ಯಾಳೆ
ನಾನು ಕೊಟ್ಟು ಕಾಸು ದುಡ್ಡು
ನನಗೇಯೆ ದಾನ
ತಂದಿಯವ್ವ ನನ್ನ ಕಂದಾ
ಮಗಳೇ ಇವತ್ತು ನನ್ನ ಕಂದಾ
ತುಂಬಿದ ಸ್ವಾಮಾರಾ
ನಿನ್ನ ಮನೆಯೊಳಗೆ ಕಂದಾ
ಕೇಳವ್ವ ನನ್ನ ಮಗುಳೆ
ನೀನು ಮುತ್ತು ರತ್ನು ಕೊಟ್ಟರೆ ನಾನು
ಮುಟ್ಟುವ ಮುನಿಯಲ್ಲ || ಸಿದ್ಧಯ್ಯ||

ಮುತ್ತು ರತುನ ಕೊಟ್ಟರೆ ಕಂದಾ
ಮುಟ್ಟುವಂತ ಮುನಿಗಳು
ನಾವಲ್ಲ ನನ್ನ ಕಂದಾ ಮುದ್ದಮ್ಮ
ಇದು ಹೇಳ್ತೀನಿ ಕೇಳವ್ವ ನನ್ನ ಕಂದಾ

ನೀನು ಚಿನ್ನ ಬೆರಳೀ ಕೊಟ್ಟರೆ ಕಂದಾ
ಕಣ್ಣು ಬಿಟ್ಟು ನೋಡೊದಿಲ್ಲ || ಸಿದ್ಧಯ್ಯ||

ನೀನು ಅಕ್ಕಿ ಬ್ಯಾಳೆಕೊಟ್ಟರೇ ನಾನು
ಜೋಳಗೆ ಒಡ್ಡವನಲ್ಲ || ಸಿದ್ಧಯ್ಯ||

ನೀನು ಅಕ್ಕಿ ಬ್ಯಾಳೆ ಕಂದಾ
ಕೊಟ್ಟಾರೇ ನನ್ನ ಕಂದಾ
ಜೋಳಗೆ ಒಡ್ಡುವ ದೇವರು
ನಾನಲ್ಲ ಮಗಳೆ
ಕೇಳವ್ವ ನನ್ನ ಕಂದಾ
ನಿನ್ನ ಹಣಯೆನ್ನೂ ಆಸಿಗೆ ನಾ
ಅಂಗೈಯ ಒಡ್ಡೋದಿಲ್ಲ || ಸಿದ್ಧಯ್ಯ||

ಚಿನ್ನ ಬೆರಳಿ ಕೊಟ್ಟರೇ
ಕಣ್ಣ ಬಿಟ್ಟು ನೋಡಿದಿಲ್ಲಸ
ಮತ್ತು ರತುನ ಕೊಟ್ಟರೆ ನಾನು
ಮಾತ್ರ ಮುಟ್ಟೋದಿಲ್ಲ ಮುದ್ದಮ್ಮ
ನೀನು ಅಕ್ಕಿ ಬ್ಯಾಳೆ ಕೊಟ್ಟರೆ
ನಾನು ಜೋಳಗೆ ಕೊಡ ಒಡ್ಡೋದಿಲ್ಲ
ನಿನ್ನ ಹಣ ಎನ್ನುವಂತ ಆಸೆಗೆ
ಅಂಗೈಯ ಒಡ್ಡುವಂತ ಭಕ್ತರು
ನಾವಲ್ಲ ತಾಯಿ
ಈ ಭಾಗ್ಯ ಯಾತಕ್ಕೆ ತರಕ್ಕೋದಿಯವ್ವ
ಈ ಭಿಗಸ ಈ ದಾನ ಯಾತಕ್ಕೆ ತಂದೆ
ಮುದ್ದಮ್ಮ
ನಿನ್ನಟ್ಟಿ ಅರಮನೆಯೊಳಗೆ ಕಂದಾ
ದಾನ ದಾನಕ್ಕಿಂತ ಮುದ್ದಮ್ಮ
ಹೆಚ್ಚಿನ ದಾನ
ಹೆಚ್ಚಿನ ಭಾಗ್ಯ
ನಿನ್ನಟ್ಟಿ ಅರಮನೆಲದೆ ಕಂದಾ

ಆ ಹೆಚ್ಚಿನ ಭಾಗ್ಯವ ತಂದು
ನನ್ನ ಮುತ್ತಿನ ಜೋಳಗೆ ನೀಡು ಮಗುಳೆ || ಸಿದ್ಧಯ್ಯ||

ಮಗಳೆ ಹೆಚ್ಚಿನದಾನ
ತಂದು ನನ್ನ ಮಗುಳೆ
ಜೋಳಿಗೆ ಕಂದಾ
ನೀಡು ನನ್ನ ಕಂದಾ
ಆಗಂದವರೇ ನನ್ನ ಗುರುವು
ಅಯ್ಯೋ ಧರೆಗೆ ದೊಡ್ಡೋರ
ಮಾತ ಕೇಳಿ ಬಾಳ ಚಿಂತೆ ಮಾಡುತಾಳೆ || ಸಿದ್ಧಯ್ಯ||

ಧರೆಗೆ ದೊಡ್ಡವರ ಮಾತಾ
ಕರಣದಲ್ಲಿ ಕೇಳ್ಕಂಡು ಮುದ್ದಮ್ಮ
ಅಯ್ಯೋ ಗುರುವೇ ಗುರುದೇವ
ಸಾಮೀ ಜಂಗುಮರೆ
ಮುತ್ತು ರತುನ ಚಿನ್ನ ಬೆರಳಿ
ಹಣಕಾಸು ನಮಗೆ ಬೇಡಿ
ಈ ದಾನ ಈ ಭಿಗುಸ ಯಾತಕ್ಕೆ ತರಕೋದಿಯವ್ವ
ಈ ದಾನ ಬ್ಯಾಡ ಅಂತ ಕೇಳ್ತಿರಿಯಲ್ಲಪ್ಪ
ಈ ದಾನವಲ್ಲದಂತೆ ಸ್ವಾಮಿ
ಮತ್ತೆ ಯಾವ ದಾನ ತಕ್ಕೊಂಡು ಬಂದು
ನಿಮಗೆ ಕೊಡಬೇಕು ಸ್ವಾಮಿ ಎಂದರು
ಮುದ್ದಮ್ಮ
ನೀನು ತಂದಿರುವಂತ ದಾನ ಧರ್ಮಕ್ಕಿಂತ
ಹೆಚ್ಚಿನ ದಾನ ನಿನ್ನ ಮನೇಲಿರುವುದು ಕಂದಾ
ಹೆಚ್ಚಿನ ದಾನ ಅಂದರೇ
ಮಾತಾಡುವಂತ ಭಾಗ್ಯ
ನಿನ್ನಟ್ಟಿ ಅರಮನೇಲದೆ ತಾಯಿ

ಅವ್ವ ಮಾತಾಡುವ ಭಾಗ್ಯ ತಂದು
ಜೋಳಿಗೆ ದಾನ ನೀಡು ಮಗಳೇ || ಸಿದ್ಧಯ್ಯ||

ಈ ಮಾತಾಡುವ ಭಿಕ್ಷ ತಂದು
ಜೋಳಿಗೆ ದಾನ ನೀಡು ಮಗಳೇ || ಸಿದ್ಧಯ್ಯ||

ಈಗಲೀಗ ತಾಯಿ
ಈ ಮುತ್ತು ರತ್ನಕ್ಕಿಂತ ಹೆಚ್ಚಿನ ದಾನ
ಹೆಚ್ಚಿನ ಭಾಗ್ಯ ನಿನ್ನ ಮನೇಲದೆ
ಮಾತಾಡುವಂತ ಭಾಗ್ಯ ನಿನ್ನಟ್ಟಿಲದೆ ತಾಯಿ
ಮಾತಾಡುವಂತ ಭಾ‌ಗ್ಯ ತಂದು
ನನ್ನ ಜೋಳಗ್ಗೆ ನೀಡುಬಿಡವ್ವ ತಾಯಿ
ಮುದ್ದಮ್ಮ ಎಂದರು
ಧರೆಗೆ ದೊಡ್ಡವರ ಮಾತ ಕೇಳ್ಕಂಡು
ಬಾಚಿ ಬಸವಯ್ಯನ ಮಡದಿ ಮುದ್ದಮ್ಮ
ಸ್ವಾಮಿ ಜಂಗುಮರೇ
ಚಿನ್ನ ಬೆರಳಿ ಹಣಕಾಸು ಮುತ್ತುರತ್ನುಕ್ಕಿಂತ
ಹೆಚ್ಚಿನ ಭಾಗ್ಯ ನಿಮ್ಮ ಮನೇಲದೆ
ಮಾತಾಡುವಂತ ಭಾಗ್ಯ ನಿನ್ನಟ್ಟಿಲದೇ
ಆ ಮಾತಾಡುವಂತ ಭಾಗ್ಯ
ತಂದು ಕೂಡು ಎಂದು ಕೇಳ್ತಿರಿಯಲ್ಪ
ಮಾತಾಡುವಂತ ಭಾಗ್ಯ ಕೂಡಿ
ಅಂದರೇ ನನಗೇನು ಅರ್ಥವೇ ಅಗದಿಲ್ಲ

ಗುರುವೇ ಬಿಡಿಸಿ ಹೇಳಪ್ಪ ಗುರುವೇ
ನಾ ತಂದು ದಾನ ಕೂಡುವುತೀನಿ || ಸಿದ್ಧಯ್ಯ||