ಕಂದಾ ಕಾಲ ಕಳೆಯೋಗಂಟಾ
ನನ ಕಾಲ ಜ್ಞಾನದ ಬುಕ್ಕು
ಬಾಳುತದೆ ನನ ಕಂದಾ
ಈ ಕಾಲು ಜ್ಞಾನವ ನೀನು
ತೆಪ್ಪಿ ಬಾಳುಲುಬ್ಯಾಡ || ಸಿದ್ಧಯ್ಯ ||

ಕಾಲ ಜ್ಞಾನವನ್ನೆ ಕಂದಾ
ತೆಪ್ಪಿ ಬಾಳಬ್ಯಾಡ
ಮರುತು ಬದುಕುಬ್ಯಾಡ ಮಗನೇ
ಈಗಲೀಗಾ ನನ ಕಂಡುಗ ಜ್ಞಾನದ ಬುಕ್ಕು
ಕಾಲುದ ಜ್ಞಾನದ ಬುಕ್ಕು ಕಣ್ಣಿಂದ ನೋಡಿ ಕಂದಾ
ಇದ್ದೆ ಬುದ್ದಿ ಕಲುತು ಕಂಡು
ನಾನು ಪಡೆದ ಭೂಮಿಮ್ಯಾಲೆ
ಬಾಳು ಬದುಕು ಕಂದಾ ಎನುತ ಹೇಳಿ

ಬ್ರಹ್ಮದೇವರಿಗೆ ನನ್ನ ಗುರುವೆ
ಎತ್ತಿ ವರವ ಕೊಟ್ಟರಲ್ಲ || ಸಿದ್ಧಯ್ಯ ||

ಗುರುವೇ ಬ್ರಹ್ಮದೇವರ್ಗೆ ದೇವs
ಅಯ್ಯ ಓದು ಬರೆಯ ಕಲಿಸಿ
ಮಾತನೇ ಆಡಿ ಬುದ್ದಿ ಕಲಿಸುವಾಗ
ಬ್ರಹ್ಮದೇವರು ಬುದ್ದಿ ಕಲಿವದಾ
ಅಯ್ಯ ಬಲದಲಿ ನನ ಗುರುವು
ಕಿವಿಯಾರೆ ನನ್ನ ಗುರುವು
ಈಶ್ವರ ಮಲ್ಲಯ್ಯ ಕೇಳಿಕಂಡು

ಈ ಮನುಸುನ ಒಳಗೆ ದೇವಾ
ತಾನು ಬುದ್ದಿ ಕಲಿತರಂತೆ || ಸಿದ್ಧಯ್ಯ ||

ಈಗ ಓದಿ ಬರೆಯ ಕಲಿತು
ಈ ಬ್ರಹ್ಮದೇವ ಇದ್ದಿ ಬುದ್ದಿವಂತರು ಅಯ್ತಾರಲ್ಲಾ
ಇವರಿಗಿಂತ ಹೆಚ್ಚಿನ ಬುದ್ದಿ ನಾನು ಕಲಿಬೇಕಲ್ಲಾ ಅಂತ ಹೇಳಿ
ಈಶ್ವರ ಮಲ್ಲಯ್ಯ
ಈ ಬ್ರಹ್ಮನಿಗಿಂತ ಉನ್ನತವಾದಂತಹ ಬುದ್ಧಿನೆ
ತನ್ನ ಮನಸಿನಲ್ಲೆ ಕಲಿತಿದ್ದರಂತೆ
ಮನಸಿನಲ್ಲಿ ಕಲಿಯುವಂತಾ
ಈಶ್ವರ ಮಲ್ಲಯ್ಯನವರಾ ಕಣ್ಣಿಂದ ನೋಡಿದುರು
ಜಗತ್ತು ಗುರು ಪರಜ್ಯೋತಿಯವರು
ನೀನು ಮಾಡುವಂತ ಯೋಚಣೆ ಕಂದಾ
ಚಂದಾಗಿ ಗೊತ್ತಾಯಿತು ಮಗನೆ || ಸಿದ್ಧಯ್ಯ ||

ಈಗಲೀಗಾ ನೀನು ಮಾಡುವಂತ ಯೋಚೆಣೆ
ನನಗೆ ಚೆಂದಾಗಿ ಗೊತ್ತಾಯ್ತು ಕಂದಾ ಎನುತ ಹೇಳಿ
ಈಸ್ಪುರ ಮಲ್ಲಯ್ಯನ ಮೇಲೆ ದೃಷ್ಟಿ ಮಡಗಿ
ಜಗಂಜ್ಯೋತಿಯವರು ನೋಡುವಾಗ
ಈಗಲೀಗಾ ಬ್ರಹ್ಮನ ಮಡದಿ ಗುರುವು
ವಿದಿಯಮ್ಮ ಎಂಬುವರು ಸ್ವಾಮಿ
ಈಗಲೀಗಾ ನಮ ಪತಿಗೊಳು
ಭೂ ಲೋಕಕೆ ವಿದ್ಯೆ ಬುದ್ದಿ
ಕಲಿಸಬೇಕು ಅಂತ ಹೇಳಿ ಹೊರಟು ಹೋದುರು
ಈಗಲೀಗ ನಾನು ಒಬ್ಬರೆ ಕೂತುಕಂಡು
ವಾಸಸ್ಥಾನ ಮಾಡುತಿನಲ್ಲ ಅನುತೇಳಿ
ಈ ಧರೆಗೆ ದೊಡ್ಡೊರು ಪಡೆದಿರ್ತಕಂತಹ
ಭೂಮಿ ಮಣ್ಣನೇ ತಗುದು
ಅವರ ಅಂದಾಚಂದಾ
ರೂಪು ರೇಖೆಗೆ
ಅವರ ಅಚ್ಚುಮೆಚ್ಚುಗೆ ಗುರುವು

ಒಂದು ಹೆಣ್ಣು ಗೊಂಬೆಯ ಮಾಡಿಕಂಡು
ಆಟಪಾಟ ಆಡುತಾರೆ || ಸಿದ್ಧಯ್ಯ ||

ಹೆಣ್ಣುಗೊಂಬೆನೇ ಮಾಡಿ ಗುರುವೇ
ಮುಂಭಾಗದಲ್ಲೆ ಇಟ್ಟುಕಂಡು ಗುರುವೇ
ಆಟ ಪಾಠ ಬೇಜಾರು ಕಳಿಬೇಕು ಅನುತೇಳಿ
ಆ ಗೊಂಬೆ ನೋಡಿಕಂಡು ಆಯಾಸ ಪಡುವ ಸಮಯಕೆ ಸರಿಯಾಗಿ

ನನ್ನ ಬ್ರಹ್ಮದೇವರು ಗುರುವೇ
ತಾವೆ ದಯ ಮಾಡುತಾರೆ || ಸಿದ್ಧಯ್ಯ ||

ನೋಡಪ್ಪ
ಬ್ರಹ್ಮದೇವರು ಬಂದು ವಿದಿಯಮ್ಮನ ಮುಂಭಾಗದಲೆ ನಿಂತು ಕಂಡುರು
ವಿದಿಯಮ್ಮ ಮಾಡಿರ್ತಕ್ಕಂತಹ ಗೊಂಬೆ ಕಣ್ಣಿಂದ ನೋಡಿದುರು

ಅವರು ಗೊಂಬೆ ಮಕವ ನೋಡಿ ಕಂಡು
ಸಂತೋಷ ಪಟ್ಟರಲ್ಲ || ಸಿದ್ಧಯ್ಯ ||

ಗುರುವೆ ಗೊಂಬೆ ಮಕವ ಗುರುವೆ
ನೋಡಿಕಂಡು ನನ್ನಪ್ಪಾ

ಅವರು ಬಹಳ ಸಂತೋಷ ಪಟ್ಟು
ನಾ ವಿದ್ಯಾವ ಕಲಿತಿವ್ನಿ
ನಾ ಬುದ್ದಿಯ ಕಲಿತಿವಿನಿ
ನಾ ಓದದ ಕಲಿತಿವಿನಿ
ನಾ ಬರೆಯದ ಕಲಿತಿವಿನಿ
ನನ್ನ ವಿದ್ದಿ ಬುದ್ದಿ ಒಳಗೆ
ನಾನೊಂದು ಕಾರ್ಯ
ಮಾಡಬೇಕು ಅಂತ
ಆ ಮಣ್ಣಿನ ಗೊಂಬೆಗೆ ಗುರುವೆ
ಸೊಲ್ಲನ್ನೆ ಕೊಟ್ಟರಲ್ಲಾ || ಸಿದ್ಧಯ್ಯ ||

ಗುರುವೆ ಬ್ರಹ್ಮದೇವರು ಗುರುವು
ಸೊಲ್ಲನ್ನೆ ಗುರುವೇ
ಕೊಟ್ಟು ಕಾಲದ ಒಳಗೆ
ಇದು ಮಲಗಿದಂತಹ ಗೊಂಬೆ
ಗುರುವೇ ಮೇಲಕ್ಕೆ ಎದ್ದೇಳಿತಂತೆ || ಸಿದ್ಧಯ್ಯ ||

ಮಲಗಿದಂತೆ ಗೊಂಬೆ ಗುರುವು ಆಗಲೀಗಾ ಮೇಲಕೆ ಎದ್ದು
ಆಗಲೀಗಾ ಬ್ರಹ್ಮದೇವರ ಮುಂಬಾಗದಲಿ ಗುರುವು
ಈ ಬ್ರಹ್ಮದೇವರು ಯಾವ ರೀತಿ ಮಾತಾಡುತ್ತಾರೋ
ಅದೆ ಪರುಕಾರುವಾಗಿ
ವಿದಿಯಮ್ಮ ಮಾಡಿರ್ತಕಂತಹ
ಗೊಂಬೆಗೆ ಸೊಲ್ಲು ತುಂಬಿದಾಗ

ಅಯ್ಯ, ಇವರು ಮಾತಾಡುದಂಗೆ
ಗೊಂಬೆಯ ಮಾಡುತಾದೆ || ಸಿದ್ಧಯ್ಯ ||

ಗುರುವೇ ಬ್ರಹ್ಮದೇವರ ಮುಂದೆ ಮಾತಾಡಿಕೊಂಡು
ಬ್ರಹ್ಮನ ಬಳಿ ಬಳಕಿ ಅದು ನಲುದು ನಾಂಟ್ಯಾ ಆಡುವ ಕಾಲದಲಿ

ಅಯ್ಯ ಮರೆಯಾಗಿದ್ದ ವಿದಿಯಮ್ಮ
ಓಡಿಓಡಿ ಬಂದಾರಲ್ಲಾ || ಸಿದ್ಧಯ್ಯ ||

ಮರಿಯಾಗಿದ್ದಂತಹ ವಿದಿಯಮ್ಮ ಬಂದು ಗುರುವು
ಆಟ ಆಡುವಾ ಗೊಂಬೆ ಮುಖ ನೋಡಬುಟ್ಟು

ಅಯ್ಯ ನನ ಗೊಂಚೆ ಎನುತೇಳಿ
ಅವರು ಕೈಯೆತ್ತಿ ಮುಗುದರಾಗ || ಸಿದ್ಧಯ್ಯ ||

ಗುರುವೆ ನಾನು ಮಾಡಿದ ಗೊಂಬೆ
ನ್ನ ಪತಿಯೇ ಎಂತ
ಗುರುವೆ ಬ್ರಹ್ಮದೇವರ ಬಳಿಗೆ
ಓಡಿ ಓಡಿ ಬಂದು
ನನ್ನ ಬ್ರಹ್ಮದೇವರ ಪಾದಕೆ
ಬಾಗಿ ಶರಣ ಮಾಡಿ
ಅಯ್ಯ ನನ ಗೊಂಬೆ ನನಗೆ
ಕೊಟ್ಟುಬುಡಿ ಎಂದರಲ್ಲಾ || ಸಿದ್ಧಯ್ಯ ||

ದೇವಾs
ಈಗಲೀಗಾ ನಾನು ಮಾಡಿದಂತಹ ಗೊಂಬೆಗೆ
ನೀವು ಎನು ಮಾಡಿಬುಟ್ರಿ ಗುರುವು
ಈಗಲೀಗಾ ನಾನು ಮಾಡಿ ಮಡಿಕಂಡಿದ್ದಂತಹ
ಆಟ ಪಾಠದ ಗೊಂಬೆ
ನೀವು ಮಲಗಿದಂತಹ ಗೊಂಬೆ ಮಾತಾಡ್ತದೆ
ಈಗಲೀಗಾ ನೀವು ಮುಂದೆ ಮುಂದೆ ಹೋದರೆ
ಗೊಂಬೆ ಹಿಂದಿಂದೆ ಬಂದುಬುಡ್ತಾದೆ
ನಾನು ಗೊಂಬೆ ಮಾಡಿ ಫಲವಿಲ್ಲ ಸ್ವಾಮಿ

ನನ್ನ ಗೊಂಬೆಯ ಗುರುವೇ
ನನಗೆ ಕೊಡಪ್ಪ ಗುರುವೇ || ಸಿದ್ಧಯ್ಯ ||

ನನಗೊಂಬೆ ನನಗೆ ಕೊಟ್ಟುಬುಡಿ ಸ್ವಾಮಿ ಎನುತೇಳಿ
ವಿದಯಮ್ಮ ಬ್ರಹ್ಮದೇವರ ಪಾದ ಹಿಡಿದು ಕೇಳುತಾರೆ
ಏನು ವಿಧಿಯಮ್ಮ
ಗೊಂಬೆ ಮಾಡುದವರು ನೀನಾದುರೇ
ಜೀವ ಕೊಟ್ಟವನು ನಾನು ನಿಜ
ಈಗಲೀಗಾ ನಾನು ಜೀವ ಕೊಟ್ಟು ಮ್ಯಾಲೆ
ನೀನು ಮಾಡಿ ಮಡಗಿದ ಗೊಂಬೆ ಮ್ಯಾಲಕೆದ್ದು
ನಾನು ಮಾತಾಡಿದಂಗೆ
ನೀನು ಮಾಡಿ ಮಡಗಿರುವಂತ ಗೊಂಬೆ ಮಾತಾಡುತಾ
ಈಗಲೀಗಾ ನಾನು ಮುಂದೆ ಮುಂದೆ ಹೋದರೆ
ನನ್ನಿಂದೆ ನೀನು ಮಾಡಿದ ಗೊಂಬೆ ಬರುತದೆ
ಗೊಂಬೆ ಮಾಡಿದವಳು ನೀನು ಜೀವಕೊಟ್ಟವನು ನಾನು

ಜೀವ ಕೊಟ್ಟ ತಂದೆ ನಾನು
ಗೊಂಬೆ ಕೊಡುವುದಿಲ್ಲ || ಸಿದ್ಧಯ್ಯ ||

ಅಯ್ಯ ಜೀವ ಕೊಟ್ಟ ತಂದೆ ನಾನು
ಗೊಂಬೆ ಗುರುವೆ ಕೊಡದಿಲ್ಲ ಎನುತೇಳಿ
ಇವರು ಸತಿ ಪತಿಗಳಿಗೆ ಗುರುವೆ
ಅಲ್ಲೇ ಕದನ ಹುಟ್ಟಿತಲ್ಲ || ಸಿದ್ಧಯ್ಯ ||

ಜೀವ ಕೊಟ್ಟವನು ನಾನು ಈ ಗೊಂಬೆಗೆ ನಾನು ತಂದೆ
ಖಂಡುತುವಾಗಿ ಗುರುವೇ
ಈ ಗೊಂಬೆ ನಾನು ಕೊಡದಿಲ್ಲ ಅಂತ ಹೇಳಿ
ಬ್ರಹ್ಮದೇವಾ ಹೇಳುವಂತ ಕಾಲದಲಿ ಗುರುವು
ಈ ಬ್ರಹ್ಮದೇವರ ಬೆನ್ನಿನ ಹಿಂಬಾಗದಲಿ
ಆಟ ಪಾಠ ಆಡುತಿದ್ದಂತಹ ಗೊಂಬೆ
ವಿದಯಮ್ಮನ ಮರೆಗೆ
ಸೆರಿಗಿನ ಮರೆಗೆ ಹೊಯ್ತಂತೆ

ಅಯ್ಯ ಸೆರಗಿನ ಮರೆಯ ಒಳಗೆ
ಬಚ್ಚಿಟ್ಟಿ ಅವಿಸಿಕೊಂಡು || ಸಿದ್ಧಯ್ಯ ||

ಸೆರಗಿನ ಮರೆಗೆ ದೇವಾ
ಗೊಂಬೆನೆ ಬಚ್ಚಿಟ್ಟು ಅವಿಸಿಕೊಂಡ ವಿದಿಯಮ್ಮನ ನೋಡಿ
ಕೇಳು ಮಡದಿ ವಿದಿಯಮ್ಮ
ಈಗಲೀಗಾ ಎಷ್ಟು ಮಾತುರಕೂ ಕೂಡಾ
ನಾನು ಸೂಲಕೆ ಕೊಟ್ಟು
ಜೀವ ತುಂಬಿದಂತಹ ಗೊಂಬೆ ನಾನು ಖಂಡುತವಾಗಿ ಬುಡದಿಲ್ಲ
ಸತಿಪತಿಗಳು ಕದನ ಮಾಡುವಾಗ
ಈ ಸತಿಪತಿಗಳ ಕದನಕೆ ಸರಿಯಾಗಿ

ಬಲದಲಿ ನನ ಗುರುವು
ಪರ ಶಿವ ಬಂದವರೇ
ಎಡದಲಿ ನನ ಗುರುವು
ಮಾ ವಿಷ್ಣು ಬಂದವರೇ
ಈ ವಿದಿಯಮ್ಮ ಬ್ರಹ್ಮನ ಮುಖವ
ಮಟಮಟನೆ ನೋಡುತಾರೆ || ಸಿದ್ಧಯ್ಯ ||

ವಿದಿಯಮ್ಮನ ಮುಖವ
ಮೂರು ಮಂದಿ ಮೂರ್ತಿಗಳು
ಮಟ ಮಟನೇ ನೋಡುವಾಗ ಇವರು ನೋಡಿದ್ರು
ವಿದಯಮ್ಮ ಒಂದು ಕಾಸಿನ ಸ್ತ್ರೀಯರು
ಈಗಲೀಗಾ ಪತಿಯ ಮಾತಿಗೆ ಉತ್ತರ ಕೊಟ್ಟು
ಗೊಂಬೆ ಅವುಸಿ ಬಚ್ಚಿಟ್ಟು ಮಡಿಕಂಡಿರುವಾಗ
ನಾವು ಕೇಳಿದ್ರೆ
ವಿದಿಯಮ್ಮ ಸೆರಗಿನ ಮರೆಯಲಿ
ಅವುಸಿಕಂಡಿರುವಂತಹ ಗೊಂಬೆ
ನಮ್ಮ ಕೈಲಿ ಕೊಟ್ಟಿರೋ ಕೊಡದಿಲ್ವೋ ಅಂತ ಹೇಳಿ

ನನ್ನ ಪರಂಜ್ಯೋತಿ ಜ್ಞಾನವ ಅಲ್ಲೆ
ಅವರು ಮಾಡುತ್ತಾರೆ || ಸಿದ್ಧಯ್ಯ ||

ನನ್ನ ಪರಂಜ್ಯೋತಿಯವರ
ಜ್ಞಾನ ಮಾಡಾವರೇ
ಮಾ ವಿಷ್ಣು ಪರಮಾತುಮ
ಈಶ್ವರ ಮಲ್ಲಯ್ಯ
ನನ್ನ ಬ್ರಹ್ಮ ದೇವರು
ಇವರು ಮೂರು ಜನ ಮಕ್ಕಳ ವಾರ್ತೆ
ಸ್ವಾಮಿಗೆ ಅರುವಾಯಿತಲ್ಲ || ಸಿದ್ಧಯ್ಯ ||

ಇವರ ಮೂರು ಜನ ಮಕ್ಕಳ ವಾರ್ತೆ
ಸ್ವಾಮಿಗೆ ಅರುವಾಗಿ
ಪರವಸ್ತು ಪಾವನ ಮೂರುತಿ
ನನ ಪರಂಜ್ಯೋತಿಯವರು

ಅವರು ಮೂರು ಜನ ಮಕ್ಕಳ ಬಳಿಗೆ
ಓಡಿ ಓಡಿ ಬಂದಾರಲ್ಲ || ಸಿದ್ಧಯ್ಯ ||

ಮೂರು ಜನ ಮಕ್ಕಳ ಬಳಿಗೆ ಬಂದು
ಜಗಂಜ್ಯೋತಿ ಅಲ್ಲಮ ಪ್ರಭುವು
ಮಂಟ್ಯಾದ ಲಿಂಗಪ್ಪನವರು

ಇವರು ಮೂರು ಮಂದಿ ಮಕ್ಕಳ
ಕದನವ ನೋಡುತಾರೆ || ಸಿದ್ಧಯ್ಯ ||

ಮೂರು ಜನ ಮಕ್ಕಳ ಗುರುವು
ಆಗಲೀಗಾ ಕದನ ಕಣ್ಣಿಂದ ನೋಡುಬುಟ್ಟು
ಮೂರು ಮಂದಿ ಮೂರ್ತಿಗಳು ಬಂದು
ಪರಂಜ್ಯೋತಿ ಧರೆಗೆ ದೊಡ್ಡವರ ಮುಂಭಾಗದಲಿ ನಿಂತುಕಂಡು
ಪಾದ ಜೋಡಿಸಿಕಂಡು ಕರಮು ಕಟ್ಟಿಕಂಡು
ಕೈ ಎತ್ತಿ ಮುಕ್ಕಂಡು ಗುರುವು

ಶರಣು ತಕಪ್ಪ ನನ್ನ
ಪರಂಜ್ಯೋತಿ ಪರಬ್ರಹ್ಮ || ಸಿದ್ಧಯ್ಯ ||

ನನ್ನ ಧರೆಗೆ ದೊಡ್ಡವರಿಗೆ ಬಾಗಿ
ಶರಣ ಮಾಡುತಾರೆ || ಸಿದ್ಧಯ್ಯ ||

ಈಗಲೀಗಾ ಮೂರು ಜನ ಮಕ್ಕಳು
ಕೈಎತ್ತಿ ಮುಗಿದು ಶರಣು ಮಾಡುವಾಗ
ಮಾಡುವುದನೆ ಕಣ್ಹಾರೆ ನೋಡುಬುಟ್ಟು
ಶಾಭಾಸು ಕಂದಾ
ಈಗಲೀಗಾ ನೀವು ಮಾಡಿದಂತಹ ಶರಣಿಗೆ ಒಪ್ಪಿದೆ ಕಂದಾ
ಈಗ ಮೂರು ಮಂದಿ ಮೂರ್ತಿಗಳು ಸೇರಿಕಂಡು
ಇವರು ಮೂರು ಮಂದಿ ಸ್ತ್ರೀಯರು ಸೇರಿಕಂಡು
ಯಾತಕೆ ಚಿಂತೆ ಯತೆ ಪಡ್ತಿರಿಯಪ್ಪ ಎಂದುರು
ಗುರುದೇವಾ
ಈಗಲೀಗಾ ನಾವಾಗೇ ದೇವಲೋಕಕೆ ಬಂದು
ನಾವು ಮಡದಿರೆ ಮರೆತು ಇದ್ದಿ ಬುದ್ದಿ ಕಲಿತಿದ್ದೊ
ನಾವು ನಿಮ್ಮತ್ರ ಬಾಳಿ ಬದುಕುವಾಗ
ನನ್ನ ಮಡದಿ ವಿದಿಯಮ್ಮ
ನೀವು ಪಡೆದರ್ತಕಂತಹ ಭೂಮಿ ಮಣ್ಣಿನಲ್ಲಿ
ಒಂದು ಹೆಣ್ಣು ಗೊಂಬೆ ತ್ರಿಶ್ಣು ಮಾಡುದ್ರು ಸ್ವಾಮಿ
ನಾನು ಇದ್ದಿ ಬುದ್ದಿ ಕಲಿತುಕಂಡು ಬರುವ ತನಕ
ಈ ವಿದಿಯಮ್ಮ ಮಾಡಿರ್ತಕಂತಹ
ಹೆಣ್ಣು ಗೊಂಬೆ ನಾ ಕಣ್ಣಿಂದ ನೋಡಿಬಿಟ್ಟು
ಈ ಗೊಂಬೆಗೆ ನಾನು
ನೀವು ಕೊಟ್ಟಂತಹ ಮಂತ್ರ ಉಪದೇಶವನ್ನೆ ಮಾಡಿ
ಈಗಲೀಗಾ ನೀವು ಕೊಟ್ಟಂತಹ
ಕಪ್ಪು ದೂಳುತನೆ ಗೊಂಬೆಗೆ ಉರುಬಿ
ಆಗಲೀಗಾ ಕಂಡುಗಾ ಜ್ಞಾನದ ಬುಕ್ಕಿನಲಿ
ದೇವಾದೆ ಕಂದಾ ಎಂದು ಹೇಳಿದಿರಲ್ಲಾ
ಆಡಿದ ಮಾತ ಕೇಳಿಕಂಡು
ಈ ಕಾಲದ ಜ್ಞಾನದ ಬುಕ್ಕನೆ ಕಣ್ಣಿಂದ ಓದಿ
ನೋಡಿಬುಟ್ಟು ಜೀವ ಕೊಟ್ಟೆ
ಇದು ಬುದ್ದಿದ್ದ ಗೊಂಬೆ
ಮೇಲಕೆ ಎದ್ದೇಳತಪ್ಪ || ಸಿದ್ಧಯ್ಯ ||

ಬಿದ್ದಿದಂತಹ ಗೊಂಬೆ ಮೇಲಕೆ ಎದ್ದು
ಈಗಲೀಗಾ ನನ್ನ ಮುಖನೇ ನೋಡಿಕಂಡು
ನನ್ನ ಮುಂಭಾಗದಲೆ ನನ್ನ ಆಸರಿಕೆ ಬೇಸರಿಕೆ ತೀರಿಸುತ
ಆಟ ಪಾಠ ಆಡುತ
ನನ್ನೊಂದಿಗೆ ಅದು ಕೂಡ ಮಾತಾಡುತಾ ಕಾಲ ಕಳಿತಿತ್ತು ದೇವಾ
ಮರೆಯಾಗಿದ್ದಂತಹ ವಿದಿಯಮ್ಮ ಬಂದು
ನಾನು ಜೀವಕೊಟ್ಟ ಎಂದು ತಿಳಿಯದೇ
ಮಾಡಿದವಳು ನನ್ನದೇ ಹೆಚ್ಚು ನನ್ನದು ಗೊಂಬೆ ಅಂತ ಹೇಳಿ
ವಿದಿಯಮ್ಮ ನನ್ನೊಂದಿಗೆ
ಚರ್ಚೆ ಮಾಡಿಕಂಡು ಸ್ವಾಮಿ
ನಾನು ಜೀವಕೊಟ್ಟ ಗೊಂಬೆಯು
ಅವುಸಿ ಇಡಲುಬಹುದಾ || ಸಿದ್ಧಯ್ಯ ||

ನಾನು ಜೀವ ಕೊಟ್ಟಂತಹ ಬೊಂಬೆ
ಅವುಸಿ ಇಟ್ಕಬಹುದಾ ಸ್ವಾಮಿ
ಹಾಗಾದ ಮೆಲೆ ಗುರುದೇವಾ
ಭೂಮಿ ಪಡೆದವರು ನೀವು
ಜೀವ ಕೊಟ್ಟವರು ನಾವು
ಈಗಲೀಗಾ ಭೂಮಿ ಪಡಿಬೇಕಾದ್ರೆ ಎಷ್ಟು ಕಷ್ಟ ಇತ್ತು
ಜೀವ ಕೊಡಬೇಕಾದ್ರೆ ನನಗೆ ಇಷ್ಟು ಕಷ್ಟ ಇತ್ತು
ನೀವು ಮಾಡಿದ ಮಣ್ಣು
ನಾನು ಕೊಟ್ಟ ಜೀವಾ
ಈಗಲೀಗಾ ನೀವು ಮಾಡಿದ ಮಣ್ಣಿನಲ್ಲಿ
ಗೊಂಬೆ ಮಾಡಿದವರೆ ಹೆಚ್ಚಾದ ಮ್ಯಾಲೆ

ಈ ಭೂಲೋಕದ ಒಳಗೆ
ನಾನು ನೀವು ಇದ್ದರೇನು || ಸಿದ್ಧಯ್ಯ ||

ಗುರುವೇ ಜೀವಕೊಟ್ಟ ಗೊಂಬೇ ನಾನು
ಕೊಡುವುದಿಲ್ಲ ಎಂದರಲ್ಲ || ಸಿದ್ಧಯ್ಯ ||

ಜೀವ ಕೊಟ್ಟ ಗೊಂಬೆಯ ಗುರುವು
ನಾನಾಗೇ ಕೊಡುವುದಿಲ್ಲ ಗುರುದೇವ ಎಂದರು
ಬ್ರಹ್ಮದೇವರ ಮಾತ ಕೇಳಿ
ಪರಂಜ್ಯೋತಿ ಪಾವನ ಮೂರ್ತಿಯವರು
ಮನದಲ್ಲಿ ಚಿಂತೆ ಮಾಡ್ಕಂಡು
ಮನಸಲ್ಲೀ ಯೋಚನೆ ಮಾಡ್ಕಂಡು
ಕೇಳಿರಪ್ಪ ನನ್ನ ಕಂದ
ಒಂದಲ್ಲ ಒಂದು ದಿವಸ
ನಿಮ್ಮಿಬ್ಬರ್ಗು ಕದನ ಕಾಳಗ ಬರಬಹುದು ಅಂತೇಳಿ
ನಾ ಮೋದಲೇ ತಿಳಿದಿದ್ದೀ ಕಂದಾ

ಆಗಲೀಗ ನನ್ನ ಮಗನೇ
ಈಗ ಕದನ ಬಂದಿತಲ್ಲ || ಸಿದ್ಧಯ್ಯ ||

ನಿಮಗೆ ಈಗ ಕದನ ಕಂದಾ
ಬಂದಿತು ನನ್ನ ಕಂದಾ
ಹಾಗಂದು ನನ್ನ ಗುರುವು
ಅವರು ವಿಧಿಯಮ್ಮನ ಗುರುವೇ
ಬೇಗದಲ್ಲಿ ಕರದರಲ್ಲ || ಸಿದ್ಧಯ್ಯ ||

ವಿಧಿಯಮ್ಮನ ಬೇಗದಲ್ಲಿ ಕರದು ಗುರುವುs
ಮುಂಭಾಗದಲ್ಲೀ ನಿಲ್ಲಸ್ಕಂಡು
ಕೇಳವ್ವ ವಿಧಿಯಮ್ಮ
ನೀ ಮಾಡಿರ್ತಕ್ಕಂತ ಗೊಂಬೆ ಯಾವುದವ್ವ

ನೀನು ಮಾಡಿರುವ ಗೊಂಬೇ ಕಂದ
ಭೂಮಿಮ್ಯಾಲೆ ಮಡುಗು ಮಗಳೆ || ಸಿದ್ಧಯ್ಯ ||