ಬಾಬಾ ಅಳಿಲೇ ಮರವನು ಹತ್ತು
ಮರದಲಿ ಆಕಡೆ ಈಕಡೆ ಸುತ್ತು
ಚಿಕ್‌ ಚಿವ್‌ ಹಾಡುತ ಅಲ್ಲಿಯೆ ನಿತ್ತು
ಹಣ್‌ಗಳ ಹುಡುಕುತ ಕೈಯಲೆ ಕಿತ್ತು

ನನಗೂ ಹತ್ತು
ನಿನಗೂ ಹತ್ತು
ಎಸೆ ಈ ಹೊತ್ತು
ಕೆಳಗಿಳಿ ಮತ್ತು

 

ಚುಟುಕ

ಪುಟ್ಟದೊಂದು ಇಲಿ
ಪುಟ್ಟ ಗೂಡಿನಲಿ
ಕಣ್ಣು ಬಿಟ್ಟು
ನೋಡುತಿತ್ತು
ಪಿಳಿ ಪಿಳಿ ಪಿಳಿ