ಆನೆ ಬಂತು ಆನೆ ಬಂತು
ನೋಡ ಬ_ನ್ನಿ
ಆನೆ ಬಂತು ಆನೆ ಬಂತು
ಓಡಿ ಬ_ನ್ನಿ

ಕಂಬದಂಥ ಕಾಲು ನಾಕು
ಸೊಂಡಿಲೊಂದು ಉಂಟು ಸಾಕು
ಚಿಕ್ಕ ಎರಡು ಕಣ್ಣು ನೋಡೆ
ಕೋರೆ ಹಲ್ಲಿನಂಥ ದಾಡೆ

ಆನೆ ಬಂತು ಆನೆ ಬಂತು
ನೋಡ ಬ_ನ್ನಿ ………..

ಗೆರೆಸೆಯಂಥ ಜೋಡು ಕಿವಿಯು
ಬಂಡೆಯಂಥ ದೊರಗು ಮೈಯು
ಉಂಟು ಇದಕೆ ದೇಹ ದೊಡ್ಡ
ಹಗ್ಗದಂಥ ಬಾಲ ಗಿಡ್ಡ

ಆನೆ ಬಂತು ಆನೆ ಬಂತು
ನೋಡ ಬ_ನ್ನಿ ………..