ಕಾಗೇ ಕಾಗೇ ಕಪ್ಪಿನ ಕಾಗೆ
ಕಾಕಾ ಎಂದು ಕರೆಯುವ ಕಾಗೆ

ರೆಕ್ಕೆಯ ಬಡಿಯುತ ಹಾರುವ ಕಾಗೆ
ಮಕ್ಕಳ ತಿನಿಸನು ಕದಿಯುವ ಕಾಗೆ
ಸಿಕ್ಕಿದ ಹೊಲಸನು ಮುಕ್ಕುವ ಕಾಗೆ
ಫಕ್ಕನೆ ಹಿಡಿಯಲು ಸಿಕ್ಕದ ಕಾಗೆ
ಕಾಗೇ ಕಾಗೇ ಕಪ್ಪಿನ ಕಾಗೆ