ಚಿಕಣಿ ಚಿಕ್ಕಿ ಚಿಕ್ಕ ಚೀಲ
ಕಳೆದು ಕೊಂಡಳು
ಚಿಕಣಿ ಚಿಕ್ಕಿ ಬಿಕ್ಕಿ ಬಿಕ್ಕಿ
ಆಳುತ ನಿಂದಳು

ಚೆಕ್ಕಿಯಕ್ಕ ಫಕ್ಕ ಫಕ್ಕ
ಓಡಿ ಬಂದಳು
ಹಾದಿ ಪಕ್ಕ ಸಿಕ್ಕ ಚಿಕ್ಕ
ಚೀಲ ಕಂಡಳು

ಫಕ್ಕ ಅಕ್ಕ ಚಿಕ್ಕಿ ಚೀಲ
ಹೆಕ್ಕಿ ಕೊಟ್ಟಳು
ಒಡನೆ ಬಿಕ್ಕಿ ಅಳುವ ಚಿಕ್ಕಿ
ನಕ್ಕು ಬಿಟ್ಟಳು