ಪುಟ್ಟು ಕಿಟ್ಟು ಕೂಡಿ ಒಟ್ಟು
ಸಟ್ಟ ಎದ್ದು ಓಡಿ ಬಿಟ್ಟು
ಬಯಲಿನಲ್ಲಿ ನೆರೆದರು
ಗೆಳೆಯರನ್ನು ಕರೆದರು

ಎಲ್ಲ ಬಂದು ಕೂಡಿದಾಗ
ಅಲ್ಲೆ ನಿಂದು ಹಾಡಿ ಬೇಗ
ಹಿಡಿದು ಅವರು ಕೈಯ ಕೈಯ
ಕುಣಿದರಯ್ಯ ಥಕ್ಕ ಥೈಯ