ಪುಟ್ಟದೊಂದು ಮೊಲ
ಪುಟ್ಟ ತನ್ನ ಬಿಲ
ಬಿಟ್ಟು ಬಂದು
ಕಂಡಿತೊಂದು
ಪುಟ್ಟ ಹಸಿರು ಹೊಲ

ಕಂಡು ಪುಟ್ಟ ಹೊಲ
ಮೇದ ಪುಟ್ಟ ಮೊಲ
ಕೇಳಿ ಸದ್ದು
ಬಿದ್ದು ಎದ್ದು
ಸೇರಿತೊಂದು ಬಿಲ