ನಮ್ಮ ಪುಟ್ಟು ಕಾಸು ಕೊಟ್ಟು
ಪುಟ್ಟ ಪುಗ್ಗ ಕೊಂಡು ಬಿಟ್ಟು
ಮತ್ತೆ ಅದನು ಬಾಯಿಗಿಟ್ಟು
ಫೂ ಫೂ ಊದಿದ
ಅದಕೆ ಗಾಳಿ ಹಾಕಿದ

ಪುಟ್ಟು ಗಾಳಿ ಹಾಕಿದಾಗ
ಪುಟ್ಟ ಪುಗ್ಗ ಹಿಗ್ಗಿ ಬೇಗ
ಪಟ್ಟ ಒಡೆದು ಆಗಿ ಭಾಗ
ಸಟ್ಟ ಮೇಲೆ ಎದ್ದಿತು
ಟಪ್ಪ ಕೆಳಗೆ ಬಿದ್ದಿತು