ಬಡ್ಡ ಹುಡುಗ ಸಿದ್ದ
ಬುದ್ಧಿಯಲ್ಲಿ ಪೆದ್ದ
ರಾತ್ರಿ ಮೆಲ್ಲ ಎದ್ದ
ಉಂಡೆ ಬೆಲ್ಲ ಕದ್ದ
ಬಾಯಿಗಿಟ್ಟು ಮೆದ್ದ
ಅಲ್ಲೆ ಸಿಕ್ಕಿ ಬಿದ್ದ

ಹೊಡೆಯ ಬರಲು ಅಬ್ಬೆ
ಹೊಡೆದನವನು ಬೊಬ್ಬೆ

 

ಚುಟುಕ

ಭಾರಿ ಗಾಳಿ ಮಳೆಯಲಿ
ಮುದುಡಿ ನಡೆದು ಮನೆ ಬಳಿ
ಬಂದ ನಮ್ಮ
ಪುಟ್ಟ ತಮ್ಮ
ಎಂದ, “ಅಮ್ಮ, ಚಳಿ ಚಳಿ”