ಸ್ವಾಮಿ ದೇವನೆ ಲೋಕ ಪಾಲನೆ
ನಿನಗೆ ಕೈಗಳ ಮುಗಿವೆವು
ಭಕ್ತಿ ಭಾವದಿ ತಲೆಯ ಬಾಗುತ
ಮನದಿ ನಿನ್ನನು ನೆನೆವವು

“ಈಶ” – “ಅಲ್ಲಾ” ಎನುವುದೆಲ್ಲವು
ಹೆಸರು ನಿನ್ನವು ಸಾವಿರ
ಜಗದ ಒಡೆಯನು ನೀನು ಒಬ್ಬನೆ
ಪೊರೆವ ಕರುಣಾ ಸಾಗರ

ತಂದೆ ತಾಯಿಯು ಬಂಧು ಬಳಗವು
ನಮಗೆ ನೀನೇ ಶಿಕ್ಷಕ
ಆವ ಕಾಲಕು ನೀನೆ ನಮ್ಮಯ
ಬಾಳ ಬೆಳಗುವ ರಕ್ಷಕ

ಬಂಧು ಭಾವನೆ ಬೆಳೆಸಿ ನಮ್ಮನು
ಒಂದುಗೂಡಿಸು ದೇವನೆ
ತಿಳಿವು ನೀಡುತ ಸತ್ಯ ಮಾರ್ಗದಿ
ಮುಂದೆ ನಡೆಯಿಸು ಕಾವನೆ