ನನ್ನ ಅಪ್ಪ ಅಷ್ಟೆತ್ರ
ನನ್ನ ಅಮ್ಮ ಇಷ್ಟೆತ್ರ
ನಾನು ಮಾತ್ರ ಇಷ್ಟೇ ಎತ್ರ
ಯಾಕೋ – ಗೊತ್ತಿಲ್ಲ

ಮೀಸೆ ಬಂದಿದೆ ಅಪ್ಪನಿಗೆ
ಉದ್ದ ಜಡೆಯಿದೆ ಅಮ್ಮನಿಗೆ
ನನಗೆ ಮಾತ್ರ ಎರಡೂ ಇಲ್ಲ
ಯಾಕೋ – ಗೊತ್ತಿಲ್ಲ

ಪ್ಯಾಂಟು ತೊಡುವನು ನನ್ನಪ್ಪ
ಸೀರೆ ಉಡುವಳು ನನ್ನಮ್ಮ
ನನಗೆ ಮಾತ್ರ ಅಂಗಿ – ಚಡ್ಡಿ
ಯಾಕೋ – ಗೊತ್ತಿಲ್ಲ

ಆಫೀಸ್‌ ಕೆಲಸವು ಅಪ್ಪನಿಗೆ
ಅಡುಗೆಯ  ಕೆಲಸವು ಅಮ್ಮನಿಗೆ
ನನಗೆ ಮಾತ್ರ ಸಾಲೆಯಕೆಲಸ
ಯಾಕೋ – ಗೊತ್ತಿಲ್ಲ