ಗಾಲಿ ಪೆಡಲು ಸೀಟು ಬ್ರೇಕು
ಬೆಲ್ಲು ಚೈನು ಉಂಟು ಸಾಕು
ಓಡಿಸುವೆನು ಸೈಕಲಿದನು
ಕಿಣಿಲ್ ಕಿಣಿಲ್ ಕಿಣಿಲ್
ಹಿಡಿಕೆ ಹಿಡಿದು ಪೆಡಲು ಒತ್ತಿ
ನಡೆಸಿ ಮುಂದೆ ಸೀಟು ಹತ್ತಿ
ಓಡಿಸುವೆನು ಸೈಕಲಿದನು
ಕಿಣಿಲ್ ಕಿಣಿಲ್ ಕಿಣಿಲ್
ಏರು ಏರಿ ತಗ್ಗು ತುಳಿದು
ಊರು ಕೇರಿ ತಿರುಗಿ ತಿಳಿದು
ಓಡಿಸುವೆನು ಸೈಕಲಿದನು
ಕಿಣಿಲ್ ಕಿಣಿಲ್ ಕಿಣಿಲ್
Leave A Comment