ಭಾರತಾಂಬೆಯೆ ದೇಶ-
ಮಾತೆ ವಿಖ್ಯಾತೆ
ಕನ್ನಡಮ್ಮನೆ ನಾಡ
ತಾಯಿ ಪ್ರಖ್ಯಾತೆ

ಭಾರತೀಯನೆ ಹೌದು
ನಾ ಮೊತ್ತ ಮೊದಲು
ಮತ್ತೆ ನಿಜ ಕನ್ನಡಿಗ
ನಾನಲ್ಲ ಬದಲು

ದೇಶ ಹಿತ ನಾಡ ಹಿತ
ಒಂದನಿನ್ನೊಂದು
ಬಿಟ್ಟಲ್ಲ ಒಟ್ಟೆಲ್ಲ
ಒಂದರೊಡನೊಂದು

ಜಾತಿ ಮತ ಭಾಷೆಗಳ
ಭೇದ ಹೊರಗಿಟ್ಟು
ದೇಶ ಬಾಂಧವರೊಡನೆ
ಬಾಳೋಣ ಒಟ್ಟು

ಸೋದರರೆ ನಾವೆಲ್ಲ
ಒಂದೆಂದು ಬಂದು
ಕೂಡೋಣ ದುಡಿಯೋಣ
ನಡೆಯೋಣ ಮುಂದು

�”ms�oZ �[ n”,”serif”‘> . . .

 

ದೇಶ ನಮಗೆ ದೇವರೆಂದು
ನಂಬಿ ಒಂದುಗೂಡಿ ನಿಂದು
ಜನದ ಹಿತವ ಬಯಸಿ ಇಂದು
ದುಡಿದು ನಾವು ನಡೆವ ಮುಂದು . . .