ಭರತ ದೇಶ ನಮ್ಮದು
ಭಾರತವಿದು ನಮ್ಮದು

ಗಂಗೆ ತುಂಗೆ ಮೈಯ ತೊಳೆವ
ಕಾಶಿ ಮಧುರೆ ಮನವ ಸೆಳೆವ
ಸಹಜ ಸೊಬಗು ನಿತ್ಯ ನಲಿವ
ಭರತ ದೇಶ ನಮ್ಮದು . . .

ನೃತ್ಯ ಗೀತ ಶಿಲ್ಪ ಕಲೆಯ
ಸತ್ಯ ಧರ್ಮ ಶಾಂತಿ ಕಳೆಯ
ಬೆಳಕು ಬೀರಿ ನಿಂದ ನಿಲಯ
ಭರತ ದೇಶ ನಮ್ಮದು . . .

ಝಾನ್ಸಿಯವಳ ಶೌರ್ಯ ಕಂಡ
ಗಾಂಧಿಯಿಂದ ಸೇವೆಗೊಂಡ
ಜಗದಿ ತಲೆಯನೆತ್ತಿ ನಿಂದ
ಭರತ ದೇಶ ನಮ್ಮದು . . .

ದೇಶವಿದುವೆ ನಮ್ಮ ಜೀವ
ದೇಶವಿದುವೆ ನಮ್ಮ ಕಾವ
ದೇಶವಿದುವೆ ನಮಗೆ ದೇವ
ಭರತ ದೇಶ ನಮ್ಮದು . . .