ಭಾರತದ ನೆಲದಲ್ಲಿ ನಾ ಜನಿಸಿ ಬಂದೆ
ಇದುವೆ ದೇವರು ನನಗೆ ನಿಜ ತಾಯಿ ತಂದೆ
ಈ ನೆಲದ ಜನಕೋಟಿ ಬಂಧುಗಳು ನನ್ನ
ಅವರ ಹೃದಯದ ಪ್ರೀತಿ ಅದೆ ಚಿನ್ನ ರನ್ನ
ಈ ನೆಲದ ತಂಗಾಳಿ ಸೂಸುವುದು ಗಂಧ
ಇಲ್ಲಿ ನಲಿಯುವ ಹಸಿರ ನಗೆ ಬೆಳಕು ಚಂದ
ಈ ನೆಲದ ತಿಳಿನೀರು ತೀರ್ಥಕೂ ಮಿಗಿಲು
ಎಂಥ ಚೆಲುವಿನ ಜೊಂಪ ಮೇಲುಗಡೆ ಮುಗಿಲು!
ಈ ನೆಲದ ಹೂ ಹಣ್ಣ ಬಗೆ-ಬಣ್ಣ-ಸೊಗಸು
ಏನಿರಲಿ ಕಷ್ಟ ಸುಖ ನಾನಿಲ್ಲಿ ಅರಸು
ಈ ನೆಲದ ಕಣ ಕಣವು ನನಗೆ ಪಾವನವು
ಈ ನೆಲದ ಸೇವೆಯಲಿ ಧನ್ಯ ಜೀವನವು