ದೇವನ ಮಕ್ಕಳು ನಾವೆಲ್ಲಾ
ದೇವನೆ ತಂದೆಯು ನಮಗೆಲ್ಲಾ

ದೇಶವು ಯಾವುದು ಇದ್ದರು ಏನು
ಭಾಷೆಯು ಬೇರೆಯೆ ಆದರು ಏನು
ಈ ಜಗವೆನ್ನುವ ಮನೆಯಲಿ ಬಾಳುವ
ದೇವನ ಮಕ್ಕಳು ನಾವೆಲ್ಲಾ
ದೇವನೆ ತಂದೆಯು ನಮಗೆಲ್ಲಾ

ಮತವೋ ಧರ್ಮವೋ ಯಾವುದೆ ಇರಲಿ
ದೇಹಕೆ ಎಂತಹ ಬಣ್ಣವೆ ಬರಲಿ
ರೀತಿಯು ನೀತಿಯು ಬಗೆಬಗೆಯಾದರು
ದೇವನ ಮಕ್ಕಳು ನಾವೆಲ್ಲಾ
ದೇವನೆ ತಂಧೆಯು ನಮಗೆಲ್ಲಾ

ಸೇವಿಸಿ ಬದುಕುವ ಗಾಳಿಯು ಒಂದೇ
ಹಸಿವಿನ ದಾಹದ ಅನುಭವವೊಂದೇ
ನೋವಿಗೆ ನಲಿವಿಗೆ ಚಲಿಸುವ ಮನಗಳ
ದೇವನ ಮಕ್ಕಳು ನಾವೆಲ್ಲಾ
ದೇವನೆ ತಂದೆಯು ನಮಗೆಲ್ಲಾ