ಓಡಿ ಬನ್ನಿರಿ ನಾಡ ಮಕ್ಕಳು
ಕೂಡಿ ನಲಿ ನಲಿ ದಾಡಿರಿ
ಸತ್ಯ ಮಾರ್ಗದಿ ನಿತ್ಯ ನಡೆಯಿರಿ
ನಾಡ ಗೀತೆಯ ಹಾಡಿರಿ

ತಮಿಳು-ತೆಲುಗು-ಮರಾಠರೆಲ್ಲರು
ನಮ್ಮ ದೇಶದ ಪ್ರಜೆಗಳು
ಕನ್ನಡಿಗ ಬಂಗಾಳಿ ಸೋದರ
ಭಾರತಾಂಬೆಯ ಮಕ್ಕಳು

ಹಿಂದೂ ಮುಸ್ಲಿಮ ಕ್ರೈಸ್ತ ಸಿಕ್ಖರು
ಬಂಧುಗಳೆ ನಾವೆಲ್ಲರೂ
ಭೇದವಳಿಯಲಿ ಪ್ರೀತಿ ನೆಲೆಸಲಿ
ಕೂಡಿ ಬಾಳುವ ಸರುವರು

ಒಂದೆ ಮನದಲಿ ನಾವು ದುಡಿಯಲು
ಸುಖದ ಸುದಿನವು ನಾಡಿಗೆ
ತನ್ನ ಹಾಗೆಯೆ ಪರರ ತಿಳಿಯಲು
ಸ್ವರ್ಗ ಬರುವುದು ಭೂಮಿಗೆ