ನಮಗೆ ಎಲ್ಲ ಒಂದೆ ನೆಲವು
ಈ ವಿಶಾಲ ಭೂ-ಮಿ
ನಮ್ಮ ಬೆಲ್ಲ ಒಂದೆ ಕುಲವು
ಮನುಜ ಕುಲವು, ಸ್ವಾಮಿ
ನಮಗೆ ಎಲ್ಲ ಒಂದೆ ನೀತಿ
ಎಲ್ಲರಲ್ಲಿ ಪ್ರೀ-ತಿ
ನಮ್ಮ ಹಾದಿ ಸತ್ಯ ಶಾಂತಿ
ದುಡಿಮೆ ಬಾಳ ರೀ-ತಿ
ನಮಗೆ ಹಿತವು ಏಕ ಮತವು
ಅದುವೆ ನಮ್ಮ ಶ-ಕ್ತಿ
ಮಾನವತೆಯ ಮಹಾ ಧರ್ಮ
ಅದರ ಲೆಮ್ಮ ಭ-ಕ್ತಿ
ನಮಗೆ ಬಂಧು ಬಳಗವೆಂದು
ಜಗದ ಮಂದಿಯಿಂ-ದು
ಬದುಕಿ ಒಟ್ಟು ಬದುಕಗೊಟ್ಟು
ನಡೆವ ನಾವು ಮುಂ-ದು
Leave A Comment