ಭರತ ಭೂಮಿ ನನ್ನ ದೇಶ
ಎನಲು ಹೆಮ್ಮೆ ಪಡುವೆನು
ಭಾರತಾಂಬೆ ನನ್ನ ತಾಯಿ
ಎನುತ ಹಿಗ್ಗಿ ನಡೆವೆನು

ಹಲವು ಬಗೆಯ ಕುಶಲ ಕಲೆಯ
ನೆಲೆಯ ದೇಶ ನಮ್ಮದು
ಅಲ್ಲಿ ಇಲ್ಲಿ ಚೆಲುವು ಚೆಲ್ಲಿ
ನಲಿವ ದೇಶ ನಮ್ಮದು

ಹಿರಿಮೆಯುಳ್ಳ ಹಿರಿಯವೆಲ್ಲ
ಮೆರೆದ ದೇಶ ನಮ್ಮದು
ಸುತ್ತ ಜಗಕು ಬೀರಿ ಬೆಳಕು
ಪೊರೆದ ದೇಶ ನಮ್ಮದು

ಇಂಥ ದೇಶ ನಮ್ಮ ದೇಶ
ನಮ್ಮ ತಾಯಿ ಭಾರತಿ
ಬೆಳಗಬೇಕು ಬೆಳೆಸಬೇಕು
ನಾವೆ ಅವಳ ಕೀರುತಿ