ಕನ್ನಡದ ತುತ್ತುರಿಯನು
ಹಿಡಿಯೋಣ ಬ-ನ್ನಿ
ಕನ್ನಡದ ಕತ್ತುರಿಯನು
ಹರಡೋಣ ಎ-ನ್ನಿ

ಕನ್ನಡದ ಚೆನ್ನುಡಿಯನು
ಆಡೋಣ ಬ-ನ್ನಿ
ಕನ್ನಡದ ಸವಿಯ ಹಾಡ
ಹಾಡೋಣ ಎನ್ನಿ

ಕನ್ನಡದ ಹಿತವ ಬಯಸಿ
ದುಡಿಯೋಣ ಬ-ನ್ನಿ
ಕನ್ನಡದ ಗುಡಿಯನೆತ್ತಿ
ನಡೆಯೋಣ ಎ-ನ್ನಿ

ಕನ್ನಡದ ತಾಯ ಹರಕೆ
ಪಡೆಯೋಣ ಬ-ನ್ನಿ
ಕನ್ನಡಾಂಬೆಯಮ್ಮ ನಮ್ಮ
ಕಾಪಾಡ ಲೆ-ನ್ನಿ