ದಪ್ಪಗಿರಲಿ ಕಪ್ಪಗಿರಲಿ
ತೆಳ್ಳಗಿರಲಿ ಬೆಳ್ಳಗಿರಲಿ
ದೊಡ್ಡದಿರಲಿ ಚಿಕ್ಕದಿರಲಿ
ಇರುವೆ ಜಾ-ತಿ
ನಡತೆಯಲ್ಲಿ ನೋಡಿದಲ್ಲಿ
ಒಂದೆ ರೀ-ತಿ

ಹಗಲಿನಲ್ಲಿ ಇರುಳಿನಲ್ಲಿ
ಬೆಳಕಿನಲ್ಲಿ ಕತ್ತಲಿನಲ್ಲಿ
ತಾನು ಎಲ್ಲಿ ಇಹುದೊ ಅಲ್ಲಿ
ಇರುವೆ ಜಾ-ತಿ
ಮೌನದಲ್ಲಿ ದುಡಿಯುವಲ್ಲಿ
ಒಂದೆ ರೀ-ತಿ

ಸದ್ದು ಇಲ್ಲದಂತೆ ಮೆಲ್ಲ
ಕೆಲಸದಲ್ಲೆ ತೊಡಗ ಬಲ್ಲ
ನಡತೆಯೆಲ್ಲ ತಿಳಿಯದಿಲ್ಲ
ಇರುವೆ ಜಾ-ತಿ
ಜನಗಳೆಲ್ಲ; ಕಲಿಯಲಿಲ್ಲ
ಇದರ ನೀ-ತಿ