ನೋಡು ಕಂದ ನೋಡು ಕಂದ
ಗಿಡದಲ್ಲಿರುವ ಹೂವನು
ತನ್ನಲಿರುವ ಪರಿಮಳವನು
ಬೀರುತಿರುವ ಪರಿಯನು

ಎಷ್ಟು ಚಂದವದರ ಬಣ್ಣ
ನಮ್ಮ ಕಣ್ಣ ಸೆಳೆವುದು
ಅದರ ಸೊಬಗ ಸವಿಯನುಂಡು
ಮನವು ಹಿಗ್ಗಿ ತಣಿವುದು

ಆದರೇನು ಸುಮದ ಬಾಳು
ಒಂದೆ ದಿನಕೆ ಮುಗಿವುದು
ಮುಗಿದರೇನು ಜಗಕೆ ಅದರ
ಹಿರಿಯ ಸೇವೆ ಸಲುವುದು

ಕಂದ, ನಮ್ಮ ಬಾಳ್ವೆ ಇಂಥ
ಸುಮದ ಬಾಳ್ವೆಯಾಗಲಿ
ಚಣದಿ ಮುಗಿದರೇನು ಹಾನಿ
ಜಗಕೆ ಸೇವೆ ಸಲ್ಲಲಿ