ಇತ್ತ ನೋಡು ಜೇನು ಗೂಡು
ನೊಣಗಳದ್ದೆ ರಾ-ಜ್ಯ
ಕೂಡಿ ಬಾಳು ತಿಹವು ಕೇಳುಲ
ಮಾಡಿಕೊಳದೆ ವ್ಯಾ-ಜ್ಯ

ರಾಜನಿಲ್ಲ ರಾಣಿಯೆಲ್ಲ
ನೋಡಿಕೊಳ್ಳುವಾ-ಕೆ
ದುಡಿಯಲೊಲ್ಲದವರಿಗೆಲ್ಲ
ಜಾಗವಿಲ್ಲ ಜ ಓ-ಕೆ

ಹಗಲೆ ಇರಲಿ ಇರುಳೆ ಬರಲಿ
ಬಿಸಿಲು ಮಳೆಗೆ ಕೂ-ಡ
ಚುರುಕಿನಲ್ಲಿ ಕೆಲಸವಿಲ್ಲಿ
ನಡೆಯು ತಿಹುದು ನೋ-ಡ

ಏನು ಶಿಸ್ತು ರುಚಿಯು ಮತ್ತು
ಸುವ್ಯವಸ್ಥೆ ಇ-ಲ್ಲಿ!
ಜೇನಿನೂಟ ದಿನದ ನೋಟ
ಜೇನು ಗೂಡಿ ನ-ಲ್ಲಿ

ಪರರ ಹಿತಕೆ ದುಡಿವ ಛಲಕೆ
ಜೀವ ಕೊಡುವ ನೀ-ತಿ
ಜೇನು ನೊಣವು ಪಡೆದ ಗುಣವು
ಇಲ್ಲ ಇದಕೆ ಸಾ-ಟ