ಹತ್ತು ಹಸುಗಳಲ್ಲಿ ನೀನು
ಹತ್ತು ಬಣ್ಣ ಕಂಡವರೇನು
ಕರೆದ ಹಾಲ ಬಣ್ಣವೆಲ್ಲ
ಒಂದೆ ಇರುವುದು
ಸಾರವಲ್ಲಿ ಸಮತೆಯಲ್ಲಿ
ಬಂದೆ ಬರುವುದು

ಅಂತೆ ವಿವಿಧ ಪಂಥಗಳಲಿ
ಏನೆ ತಾರತಮ್ಯವಿರಲಿ
ಸತ್ಯ ತತ್ವ ಮೂಲ ಸತ್ವ
ಒಂದೆ ಇರುವುದು
ಏಕ ಮತವು – ಲೋಕಹಿತವು
ಕಂಡು ಬರುವುದು

ಸತ್ಯವಿದನು ತಿಳಿದು ನೀನು
ನಿತ್ಯ ಸಕಲ ಧರ್ಮಗಳನು
ಸಮತೆಯಲ್ಲಿ ಕಾಂಬುದಿಲ್ಲಿ
ಕೇಳೊ ಚಿಣ್ಣನೆ
ಎಲ್ಲರಲ್ಲಿ ಮಮತೆಯಲ್ಲಿ
ಬಾಳೊ ಅಣ್ಣನೆ