ಎಷ್ಟೇ ಮರಗಳು ಇದ್ದರು ಏನು
ತೆಂಗಿನ ಹಾಗಿನ ಮರವನು ನೀನು
ಕಂಡುದು ಉಂಟೇ ಹೇಳಣ್ಣ
ಅದರ ಪ್ರಯೋಜನ ಕೇಳಣ್ಣ

ತೆಂಗಿನ ತಿರುಳಿನ ಬಗೆ ಬಗೆ ತಿಂಡಿ
ಸಿಗುವುದು ಎಣ್ಣೆಯು, ಕೊಬ್ಬರಿ ಹಿಂಡಿ
ಒಳಗಿನ ತಂಪಿನ ತಿಳಿನೀರು
ಕುಡಿಯಲು ಹಿತಕರ ಎಳನೀರು

ಕಾಂಡವ ಸಿಗಿದರೆ ಜಂತಿ, ಪಕಾಸು
ಮಡಲೇ ಗುಡಿಸಲು ಹೊದಿಕೆಯ ಹಾಸು
ತೆಂಗಿನ ನಾರಿನ ಹುರಿ ಹಗ್ಗ
ಗೆರಟೆಯ ಸೌಟೇ ಬಲು ಅಗ್ಗ

ಬೆಂಕಿಯ ಉರಿಸಲು ಉರುವಲು ಮತ್ತು
ನಿತ್ಯದ ಬಳಕೆಯ ಸಾವಿರ ಸೊತ್ತು
ಜನಗಳಿಗೆಲ್ಲವ ಕೊಡುವ ಮರ
ಭೂಮಿಗೆ ದೇವರ ದೊಡ್ಡ ವರ್ದ