ಕರೆವ ದನವು ಕೆಚ್ಚಲಲ್ಲಿ
ಇರುವ ಹಾಲ ಕುಡಿವುದೆ?
ಕರುವಿಗಾಗಿ ಪರರಿಗಾಗಿ
ಇರುವುದನ್ನು ನೀಡದೆ?

ಮರವು ತನ್ನ ಫಲಗಳನ್ನು
ಮರೆತು ಕೂಡ ತಿನುವುದೆ?
ಸರುವ ಜೀವ ರಾಶಿಗಳಿಗೆ
ಇರುವುದನ್ನು ನೀಡದೆ?

ಹರಿಯುತಿರುವ ನದಿಯು ತಾನೆ
ಇರುವ ನೀರ ಕುಡಿವುದೆ?
ಕರೆದು ಬಳಿಗೆ ಜಂತುಗಳಿಗೆ
ಇರುವುದನ್ನು ನೀಡದೆ?

ಹಿರಿಯ ಬುದ್ಧಿ ಪಡೆದು ಕೂಡ
ಹಿರಿಯರಂತೆ ನಡೆಯದೆ?
ಇರಲು ನೀನು ಚಂದವೇನು
ಪರರ ಸೇವೆ ಮಾಡದೆ?