ರೇಡಿಯೊ ಭಾರೀ ಉಪಕಾರಿ
ರೇಡಿಯೊ ಭಾರೀ ಸಹಕಾರಿ

ಲೋಕದ ವಿಷಯವ ತಿಳಿಸುವ ಗೆಳೆಯ
ರೇಡಿಯೊ ಭಾರೀ ಉಪಕಾರಿ
ಬೇಸರ ಕಳೆಯ ಸಂತಸ ತಳೆಯೆ
ರೇಡಿಯೊ ಭಾರೀ ಸಹಕಾರಿ

ಬಗೆ ಬಗೆ ಸುದ್ದಿ ಜನರಿಗೆ ಬುದ್ಧಿ
ಹೇಳುವ ರೇಡಿಯೊ ಉಪಕಾರಿ
ಹಾಡಿನ ಸವಿಯ ಹವೆಯದು ಗತಿಯ
ಸಾರುವ ರೇಡಿಯೊ ಸಹಕಾರಿ

ಭಾಷಣ ಮತ್ತು ನಾಟಕ ಹೊತ್ತು
ಬರುತಿಹ ರೇಡಿಯೊ ಉಪಕಾರಿ
ಹಿರಿಯರ ಭೆಟ್ಟ ತಿಳಿವಿನ ಬುಟ್ಟಿ
ಕೊಡಿಸುವ ರೇಡಿಯೊ ಸಹಕಾರಿ