ಹಲವು ಬಗೆಯಲೆದ್ದ ಹೊಗೆಯ
ಮೋಡದೊಡನೆ ಧೂ-ಳು
ಉಸಿರ ಗಾಳಿಯನ್ನು ಹಾಳು
ಮಾಡುತಿಹವು ಕೇ-ಳು

ಹರಿವ ನದಿಯ ಕಡೆಗೆ ಸುರಿವ
ತ್ಯಾಜ್ಯವಸ್ತು ವೆ-ಲ್ಲ
ನೀರ ಸೇರಿ ಅದನು ಭಾರಿ
ಕೆಡಿಸುತಿಹವು ಮೆ-ಲ್ಲ

ಬೆಳೆಯರೋಗ ತಡೆಗೆ ಬೇಗ
ಬಳಸುತಿರುವ ಮದ್ದು
ಅನ್ನದಲ್ಲಿ ವಿಷವ ಚೆಲ್ಲಿ
ಕೊಲುವುದುಂಟು ಖು-ದ್ದು

ನಾಡು ಬೆಳೆದು ಕಾಡು ಅಳಿದು
ಹೋಗುತಿರಲು ಬೇ-ಗ
ಸೃಷ್ಟಿ ಸಮತೆ ತಪ್ಪಿ ಜನತೆ
ಕಷ್ಟ ಪಡುವುದೀ-ಗ

ಪರಿಸರವನು ರಕ್ಷಿಸುವನು
ಲೋಕಕೆ ಉಪಕಾ-ರಿ
ಕೆಡಿಸುವವನು ಕೆಡುಕನಿಹನು
ಜಗಕೆ ಅವನೆ ಮಾ-ರಿ