ಮಣ್ಣಿನ ಎಡೆಯಲಿ ತಂಪಿನ ಕಡೆಯಲಿ
ವಾಸವ ಮಾಡುವ ಎರೆಹುಳವೆ
ನೀನೆ ವಿಚಿತ್ರನು ರೈತನ ಮಿತ್ರನು
ಗೊತ್ತಿದೆ ನನಗೂ ಎಲೆ ಹುಳವೆ

ಕೊಳೆತುದನೆಲ್ಲವ ತಿನ್ನಲು ಬಲ್ಲವ
ನಿನಗೇನಿಲ್ಲವು ಸಿಂಗಾರ
ನಿನ್ನೆಯ ಬರಿಮಲ ಸೇರಲು ಈ ನೆಲ
ಆಗಿಯೆ ಬಿಡುವುದು ಬಂಗಾರ

ನೇಗಿಲು ಇಲ್ಲದೆ ಭೂಮಿಯನುಳುವುದೆ
ಕೆಲಸವು ದೊಡ್ಡದು ನಿನ್ನದಿದೆ
ಬೆಳೆಸುವುದಕೆ ಬೆಳೆ ಹದವಾಗುವುದಿಳೆ
ನಿನಗಿದೊ ವಂದನೆ ನನ್ನದಿದೆ