ದೇಶಕ್ಕಾಗಿ ಹೆಮ್ಮೆ ಪಡುವ
ನಾಗರಿಕನು ನಾ-ನು
ದೇಶ ನಿಷ್ಠೆ ನನ್ನ ಧರ್ಮ
ಬಲ್ಲೆಯೇನು ನೀ-ನು?

ನಾಡ ನಮ್ಮ ಶಾಸನಕ್ಕೆ
ನಾ ವಿಧೇಯ ನೆಂ-ದೂ
ನ್ಯಾಯ ನೀತಿ ಬಿಡದೆ ನಡೆವ
ಶಪಥ ನನ್ನ ದಿ-ಂದು

ಆಡಳಿತದಿ ನನ್ನ ಪಾತ್ರ
ತಿಳಿದು ವಹಿಸಿ ನಿ-ತ್ಯ
ಸುಂಕ ತೆರಿಗೆ ತೆರದೆ ಬರಿದೆ
ಕೂಡಲಾರೆ ಸ-ತ್ಯ

ಎಲ್ಲೆ ಇರಲಿ ಹೇಗೆ ಇರಲಿ
ದೇಶ ಹಿತಕೆ ಬ-ದ್ಧ
ಪಡೆದ ನೆಲದ ಋಣವ ಸಲಿಸೆ
ದುಡಿಯೆ ಮಡಿಯೇ ಸಿ-ದ್ಧ