ಕಣ್ಣು ತೆರೆದು ಸುತ್ತ ನೀನು
ನೋಡ ಬೇಕು ಚಿ-ಣ್ಣ
ಕಣ್ಣು ಬಿಟ್ಟು ನೋಡಿ ನೀನು
ಕಲಿಯ ಬೇಕಲು ಅ-ಣ್ಣ
ಕಾಗೆ ಕೋಳಿಗಳನು ನೀನು
ನೋಡ ಬೇಕು ಚಿ-ಣ್ಣ
ಇರುವುದನ್ನು ಹಂಚಿ ತಿನಲು
ಕಲಿಯಬೇಕು ಅ-ಣ್ಣ
ಅರಳಿ ನಗುವ ಹೂವ ನೀನು
ನೋಡ ಬೇಕು ಚಿ-ಣ್ಣ
ನಗುತ ಜಗದಿ ಬಾಳುವುದನು
ಕಲಿಯ ಬೇಕಲು ಅ-ಣ್ಣ
ಉದಯ-ಅಸ್ತ ಸೂರ್ಯನನ್ನು
ನೋಡ ಬೇಕು ಚಿ-ಣ್ಣ
ಕಷ್ಟ ಸುಖದಿ ಸಮತೆಯನ್ನು
ಕಲಿಯ ಬೇಕು ಅ-ಣ್ಣ
ದುಡಿವ ಇರುವೆಯನ್ನು ನೀನು
ನೋಡ ಬೇಕು ಚಿ-ಣ್ಣ
ಮೌನದಲ್ಲಿ ದುಡಿವುದನ್ನು
ಕಲಿಯಬೇಕು ಅ-ಣ್ಣ
Leave A Comment