ಚಂದಮಾಮ ಬಾ ಬಾ
ಚಂದಮಾಮ ಬಾ

ಬಾನಿನಲ್ಲಿ ಮೂಡಿ ಬಾ
ಚಿಕ್ಕೆಗಳನು ಕೂಡಿ ಬಾ
ಮೋಡ ಬಿಟ್ಟು ಓಡಿ ಬಾ
ನಮ್ಮನೆಲ್ಲ ನೋಡಿ ಬಾ

ಚಂದಮಾಮ ಬಾ ಬಾ
ಚಂದಮಾಮ ಬಾ

ಬೇಗ ಮೇಲೆ ಏರಿ ಬಾ
ನಗುವ ಮೊಗವ ತೋರಿ ಬಾ
ತಂಪು ಬೆಳಕು ಬೀರಿ ಬಾ
ನಮ್ಮ ಬಳಿಗೆ ಹಾರಿ ಬಾ

ಚಂದಮಾಮ ಬಾ ಬಾ
ಚಂದಮಾಮ ಬಾ