ಕುಣಿಯೋಣ ಬಾರಾ ಕುಣಿಯೋಣ ಬಾ
ಹಿಡಕೊಂಡು ಕೈ ಕೈ
ಹೊಂದಿಸಿ ಮೈ ಮೈ
ನಗು ನಗ್ತ ತಕಥೈ ಕುಣಿಯೋಣ ಬಾ

ಗೈಮೆಯು ಹಣ್ಣಾಯ್ತು
ಕಣಜವು ತುಂಬ್ಯಾಯ್ತು
ಸುಗ್ಗಿಯು ಬಂದಾಯ್ತು ಕುಣಿಯೋಣ ಬಾ

ಸತ್ಮೇಲೆ ಏನೈತಿ?
ಬರಿ ಮಣ್ಣು ಸಿಗ್‌ತೈತಿ
ಈವಾಗ ಸುಖವೈತಿ ಕುಣಿಯೋಣ ಬಾ

ಹೊಲದಲ್ಲಿ ದುಡಿಯೋಣ
ಮನೆಯಲ್ಲಿ ನಲಿಯೋಣ
ಈಶಂಗೆ ಮಣಿಯೋಣ ಕುಣಿಯೋಣ ಬಾ