ಯತ್ನ ಮಾಡು ಯತ್ನ ಮಾಡು
ಬಿಡದೆ ಮಾಡು ಯ-ತ್ನ
ಕಡಲಿನಾಳಕಿಳಿವ ಧೀರ
ಪಡೆಯುತಾನೆ ರ-ತ್ನ

ಸೋಲು ಒಮ್ಮೆ ಬಂತೆ, ಬರಲಿ
ಕುಂದದಿರಲಿ ಧೈ-ರ್ಯ
ಮರಳಿ ಮರಳಿ ಯತುನ ಮಾಡಿ
ತೋರು ನಿನ್ನ ಶೌ-ರ್ಯ

ಗುರಿಯ ಸೇರುವನಕ ಪಯಣ
ಸಾಗಬೇಕು ನಿ-ತ್ಯ
ಗೆಲುವ ತನಕ ಯತುನ ಮಾಡಿ
ಆಗ ಬೇಕು ಸ್ತು-ತ್ಯ