ಚೆಲುವಣ್ಣಾ
ಬಾಳೆಲ್ಲಾ ಚೆಲುವು
ಬಂದೀತು ಗೆಲವು
ನಕ್ಕೀತು ನೆಲವು

ನಾನು-ನೀನು ಭೇದ ಬಿಟ್ಟು
ನಾವು ಎನುತ ಸೇರಿ ಒಟ್ಟು
ಒಬ್ಬಗೊಬ್ಬ ನೆರವು ನೀಡಿ
ಕೂಡಿ ಬಾಳುವಾಗ ನೋಡಿ
ಚೆಲುವಣ್ಣಾ ಚೆಲುವು….

ತಮ್ಮ ಹಾಗೆ ಪರರ ಕಂಡು
ಕಷ್ಟ ಸುಖವ ಹಂಚಿ ಉಂಡು
ಒಂದೆ ತಾಯ ಮಕ್ಕಳಂತೆ
ಬದುಕುವಾಗ ಬರದು ಚಿಂತೆ
ಚೆಲುವಣ್ಣಾ ಚೆಲುವು….

ದೇವ ನಮಗೆ ತಂದೆಯಾಗಿ
ಭೂಮಿ ನಮ್ಮ ತಾಯಿಯಾಗಿ
ಮಂದಿಯೆಲ್ಲ ಬಂಧು ವರ್ಗ
ಪ್ರೀತಿಯಲ್ಲಿ ಸುಖದ ಸ್ವರ್ಗ
ಚೆಲುವಣ್ಣಾ ಚೆಲುವು….