ನೆರೆಯ ಮನೆಯ ಕರಿಯ ಬೆಕ್ಕು
ನೆರೆಯ ಕರೆಯ ಮನೆಯ ಹೊಕ್ಕು

ಬೆಣ್ಣೆ ಮೆದ್ದು
ಹಾಲು ಕದ್ದು
ಕುಡಿದು ತೇಗಿತು

ಕಿಟ್ಟ ಅಂದು ಸಟ್ಟ ಬಂದು
ಪೆಟ್ಟು ಒಂದು ಕೊಡಲುತಿಂದು

ಕೆಟ್ಟ ಬೆಕ್ಕು
ಬಿಟ್ಟು ಸೊಕ್ಕು
ಓಡಿ ಹೋಯಿತು

 

ಚುಟುಕ

ತನ್ನ ತಾಯ ತೊಡೆಯಲಿ
ಕೂತು ಮೊಲೆಯ ಉಣುತಲಿ
ಇದ್ದ ಪುಟ್ಟು
ಕಣ್ಣು ಬಿಟ್ಟು
ನೋಡುತಿತ್ತು ಪಿಳಿ ಪಿಳಿ