ಟಿ. ವಿ. ಯಲ್ಲಿ ಭಯದ ಚಿತ್ರ
ನೋಡಿ ಬಂದ ಪು-ಟ್ಟ
ರಾತ್ರಿ ಕಂಡ ಕನಸಿನಲ್ಲಿ
ಭಾರಿ ಹೆದರಿ ಬಿ-ಟ್ಟ

ನಿದ್ದೆಯಲ್ಲೆ ಬೆಚ್ಚಿಬಿದ್ದು
ಕಿರಿಚಿಕೊಂಡ ಚಿ-ಣ್ಣ
ಎದ್ದು ಕೂತು ನೋಡಿದಾಗ
ಒದ್ದೆ ಮುದ್ದೆ ಚೊ-ಣ್ಣ

 

ಚುಟುಕ

ಕರಿಯ ಕಿರಿಯ ಕುರಿಯ ಮರಿಯು
ನೆರೆಯ ಕರೆಯ ನೀರ ತೊರೆಯ
ತೀರ ಸೇರಿ ಸರ ಸರ
ಹೀರಿತದನು ಸೊರ ಸೊರ