ನಾರಿನಿಂದ ಕೂಡಿದಂಥ
ದಪ್ಪ ಸಿಪ್ಪೆ ಹೊರಗಡೆ
ಆಮೆ ಚಿಪ್ಪಿನಂಥ ದೊರಗು
ಕವಚ ಉಂಟು ಒಳಗಡೆ

ಕವಚದೊಳಗೆ ಹಾಲು ಬಿಳುಪು
ತಿರುಳು ಕಂಡು ಬರುವುದು
ಉಳಿದ ಜಾಗದಲ್ಲಿ ಸವಿಯ
ನೀರು ತುಂಬಿ ಇರುವುದು

ಮೂರು ಕಣ್ಣ ಹಿರಿಯ ನಾನು
ಕಾಯಿಗಳಿಗೆ ಅಣ್ಣನೆ
ಬೇಗ ಹೆಸರು ಹೇಳು ನೀನು
ನನ್ನ ಮುದ್ದು ಚಿಣ್ಣನೆ