ಭೂಮಿಯೆಲ್ಲ ನಡುಗಿದಂತೆ
ಬಾನ ಬಯಲೆ ಗುಡುಗಿದಂತೆ
ಸದ್ದು ಮಾಡಿ ಹಾರಿ ಬರುವ
ಹಕ್ಕಿ ಯಾವುದು?

ಬಾಣದಂತೆ ಮೇಲೆ ಏರಿ
ಮುಗಿಲ ತೇರ ನಡುವೆ ತೂರಿ
ಗುರಿಯ ಕಡೆಗೆ ಹಾರ ಬಲ್ಲ
ಹಕ್ಕಿ ಯಾವುದು?

ಚಣದ ಒಳಗೆ ದೂರ ಹಾರಿ
ಊರು ಊರುಗಳನು ಸೇರಿ
ಜನರ-ಸರಕ ಒಯ್ಯಬಲ್ಲ
ಹಕ್ಕಿ ಯಾವುದು?

ದೇಶ ದೇಶಗಳನು ಸುತ್ತಿ
ಸ್ನೇಹ ಭಾವಗಳನು ಬಿತ್ತಿ
ಬೆಳೆಸಬಲ್ಲ ಶಕ್ತಿಯುಳ್ಳ
ಹಕ್ಕಿ ಯಾವುದು?