ಪುಟ್ಟನು ಕಿಟ್ಟನು ಜೊತೆಯಲಿ ಓಡಿಬೇಗನೆ
ಒಂದೆಡೆ ಒಂದೆಡೆ ಒಟ್ಟಿಗೆ ಕೂಡಿ
ಬಾನೊಳು ಹಾರಿಸೆ ಪಟ ಪಟ
ಮಾಡಿದರೊಂದು ಗಾಳಿಪಟ

ಗಾಳಿಯ ಪಟಕೆ ನೂಲನು ಸುತ್ತಿ
ಗಾಳಿಗೆ ಪಟವನು ಹಿಡಿಯಲು ಎತ್ತಿ
ಬಾಲವ ಬಡಿಯುತ ಪಟ ಪಟs ಪಟs
ಏರಿತು ಹಾರಿತು ಗಾಳಿಪಟ

 

ಚುಟುಕ

ಬಚ್ಚ ಬಾಯಿ ಬಿಟ್ಟು ಕೊಂಡು
ಮುದ್ದು ಕಂದ ನಕ್ಕರೆ
ಚೆಲ್ಲಿದಂತೆ ಸುತ್ತ ಮುತ್ತ
ಹಾಲು ಜೇನು ಸಕ್ಕರೆ