ಪುಟ್ಟ ಒಂದು ಅಳಿಲು ಬಂದು
ಮರವ ಕಂಡು ಏರಿ ನಿಂದು
ಹಿಗ್ಗುಗೊಂಡು ಕೂಗಿತಂದು
ಚಿಕ್ಕ್ ಚಿಕ್ಕ್‌ ಚಿವ್ವ್‌

ಮತ್ತೆ ಮೆಲ್ಲ ಗೆಲ್ಲು ಗೆಲ್ಲ
ಕಾಯನಲ್ಲ ಹಣ್ಣನೆಲ್ಲ
ಹುಡುಕಿ ತಿಂದು ಕೂಗಿತಂದು
ಚಿಕ್ಕ್ ಚಿಕ್ಕ್‌ ಚಿವ್ವ್‌

ಹೊಟ್ಟೆ ತುಂಬ ಹಣ್ಣು ತಿಂದ
ಹರುಷದಿಂದ ಅಲ್ಲೆ ನಿಂದ
ಅಳಿಲ ಕಂದ ಕೂಗಿದಂದ
ಚಿಕ್ಕ್ ಚಿಕ್ಕ್‌ ಚಿವ್ವ್‌